ಸಂಜನಾ ಗಲ್ರಾನಿ ಹೊಸ ಕಿರಿಕ್! ಏನು ಗೊತ್ತಾ..?

masthmagaa.com:

ನಟಿ ಸಂಜನಾ ಗಲ್ರಾನಿ ಮತ್ತೊಂದು ವಿವಾದವನ್ನ ಮೈಮೇಲೆ ಎಳೆದುಕೊಂಡಿದ್ದಾರೆ. ಕ್ಯಾಬ್‌ನಲ್ಲಿ ಹೋಗುವಾಗ ಎಸಿ ಆನ್‌ ಮಾಡಿಲ್ಲ ಅಂತ ಟ್ವೀಟ್‌ ಮಾಡಿ ಆರೋಪಿಸಿದ್ದಾರೆ. ಬೆಳ್ಳಂಬೆಳಿಗ್ಗೆ ಸಂಜನಾ ಗಲ್ರಾನಿ ಸೇರಿದಂತೆ ನಾಲ್ಕು ಜನ ಕ್ಯಾಬ್‌ನಲ್ಲಿ ಪ್ರಯಾಣಿಸ್ತಾ ಇದ್ರು. ಈ ವೇಳೆ ಡ್ರೈವರ್​ ಸೂಸೈಮಣಿ ಎಂಬಾತನಿಗೆ ಎಸಿ ಆನ್‌ ಮಾಡುವಂತೆ ಹೇಳಿದ್ರು. ಆದ್ರೆ ಕೊರೋನಾ ಹಿನ್ನಲೆ ಏಸಿ ಹಾಕಲ್ಲ ಹೇಳಿದ್ದಾನೆ. ಆದ್ರೂ 1 ಪಾಯಿಂಟ್ ಸ್ಪೀಡ್​​ನಲ್ಲಿ ಎಸಿ ಆನ್ ಮಾಡಿದ್ದಾರೆ. ಆದ್ರೆ ಸಮಾಧಾನಗೊಳ್ಳದ ಸಂಜನಾ ಗಲ್ರಾನಿ, ಎಸಿಗೆ ದುಡ್ಡು ಪಡೆದು ಎಸಿ ಹಾಕಲ್ಲ ಅಂದ್ರೆ ಹೇಗೆ? ಏಸಿ ಜಾಸ್ತಿ ಮಾಡೋಕೆ ಹೇಳಿದ್ದಕ್ಕೆ ನಮಗೇ ಅವಾಜ್‌ ಹಾಕಿದ. ದಾರಿ ಮಧ್ಯದಲ್ಲೆ ಇಳಿಸಿ ಬಿಡ್ತೇನೆ ಅಂತ ಹೆದರಿಸಿದ ಅಂತ ಆರೋಪಿಸಿದ್ದಾರೆ. ಆದ್ರೆ ಇದೆಲ್ಲಾ ಸುಳ್ಳು ಅಂತ ಕ್ಯಾಬ್ ಚಾಲಕ ಸೂಸೈಮಣಿ, ಸಂಜನಾ ನನಗೆ ಕೆಟ್ಟ ಕೆಟ್ಟ ಶಬ್ದಗಳಿಂದ ನಿಂದಿಸಿದ್ರು ಅಂತ ದೂರು ದಾಖಲಿಸಿದ್ದಾರೆ. ಇದಕ್ಕೆ ಪ್ರತಿಕ್ರಿಯಿಸಿರೋ ಸಂಜನಾ, ಡ್ರೈವರ್​ಗೆ ನಾನೇನೂ ಬೈದಿಲ್ಲ. ನನ್ನನ್ನು ರಾಂಗ್ ರೂಟ್​​ನಲ್ಲಿ ಕರ್ಕೊಂಡು ಹೋಗ್ತಿದ್ದ. ನನ್ನ ಕಿಡ್ನಾಪ್ ಮಾಡ್ತಿದ್ದಾನೆ ಅಂತ ಭಯವಾಯ್ತು ಅಂತ ಹೇಳಿದ್ಧಾರೆ.

-masthmagaa.com

Contact Us for Advertisement

Leave a Reply