ಸೌದಿಯಲ್ಲಿ ಟ್ರಾವೆಲ್ ರೂಲ್ಸ್ ಉಲ್ಲಂಘಿಸಿದ್ರೆ 1 ಕೋಟಿ ದಂಡ!

masthmagaa.com:

ಕೊರೋನಾ 3ನೇ ಅಲೆ, 4ನೇ ಅಲೆ ಬರುತ್ತೆ ಅನ್ನೋ ಭೀತಿ ನಡುವೆ ಪ್ರಪಂಚ ದಿನ ದೂಡ್ತಾ ಇದೆ. ಈ ನಡುವೆ ಸೌದಿಯಲ್ಲಿ ಕೊರೋನಾ ನಿಯಂತ್ರಣಕ್ಕೆ ಕಟ್ಟುನಿಟ್ಟಿನ ರೂಲ್ಸ್ ಜಾರಿಗೆ ತರಲಾಗಿದೆ. ಕೋರೋನಾದಿಂದ ಬಳಲುತ್ತಿರುವ ದೇಶಗಳಿಗೆ ಹೋಗಿ ಸೌದಿಗೆ ವಾಪಸ್ ಹೋಗುವವರ ಮೇಲೆ 1 ಕೋಟಿ ರೂಪಾಯಿ ದಂಡ ವಿಧಿಸೋದಾಗಿ ಎಚ್ಚರಿಸಿದೆ. ಸೌದಿ ಕೊರೋನಾ ರೂಲ್ಸ್ ಪ್ರಕಾರ ಕೆಲವೊಂದು ದೇಶಗಳಿಗೆ ಪ್ರಯಾಣಿಸುವಂತಿಲ್ಲ. ಒಂದು ವೇಳೆ ಪ್ರಯಾಣಿಸಿ, ತಗ್ಲಾಕ್ಕೊಂಡ್ರೆ 1 ಕೋಟಿ ರೂಪಾಯಿ ದಂಡ ವಿಧಿಸಲಾಗುತ್ತೆ.. ಬರೀ ಪ್ರಯಾಣಿಕರಿಗೆ ಮಾತ್ರವಲ್ಲ. ವಿಮಾನ ಸಂಸ್ಥೆಯ ಆಪರೇಟರ್​​ಗಳು ಮತ್ತು ಮಾಲೀಕರು ಕೂಡ ದಂಡ ಕಟ್ಟಬೇಕಾಗುತ್ತೆ ಅಂತ ಸೌದಿ ಅಧಿಕಾರಿಗಳು ಎಚ್ಚರಿಸಿದ್ದಾರೆ. ಇನ್ನು ಜಪಾನ್​​ನಲ್ಲಿ ಕೊರೋನಾ ರೂಲ್ಸ್ ಬ್ರೇಕ್ ಮಾಡಿದವರ ಹೆಸರನ್ನು ಪಬ್ಲಿಕ್ ಮಾಡಿ ಮರ್ಯಾದೆ ತೆಗೀತೀವಿ ಅಂತ ಸರ್ಕಾರ ಎಚ್ಚರಿಸಿದೆ.

-masthmagaa.com

 

Contact Us for Advertisement

Leave a Reply