“ಆಡಿಷನ್ ಇಲ್ಲದೇ ಹಾಲಿವುಡ್ ವೆಬ್ ಸಿರೀಸ್ ಗೆ ಸೆಲೆಕ್ಟ್ ಆದೆ” : ಪ್ರಿಯಾಂಕ ಚೋಪ್ರ!

masthmagaa.com:

ಜೋ ಮತ್ತು ಆಂಥೋನಿ ರುಸ್ಸೋ ಅವರ ಸಿಟಾಡೆಲ್‌ನಲ್ಲಿ ಕಾಣಿಸಿಕೊಳ್ಳಲಿರುವ ಪ್ರಿಯಾಂಕಾ ಚೋಪ್ರಾ ಅವರು ಹಾಲಿವುಡ್‌ನಲ್ಲಿ ಸೈಡ್‌ಲೈನ್ ಆಗೋದಿಲ್ಲ ಎಂದು ಹೇಳಿದ್ದಾರೆ.

ಇತ್ತೀಚೆಗೆ ಮಾಧ್ಯಮವೊಂದರ ಸಂದರ್ಶನದಲ್ಲಿ ಮಾತನಾಡಿದ ಪ್ರಿಯಾಂಕಾ “ಭಾರತೀಯ ಸಿನಿಮಾದ ಬಗ್ಗೆಯೂ ಮಾತನಾಡಿದ್ದಾರೆ. ಭಾರತದಲ್ಲಿ ಪ್ರತಿ ವರ್ಷ ಸಾವಿರಕ್ಕೂ ಹೆಚ್ಚು ಸಿನಿಮಾಗಳು ತಯಾರಾಗ್ತಾ ಇದೆ, ಹಲವಾರು ಸಿನಿಮಾಗಳಲ್ಲಿ ಕೆಲಸ ಮಾಡಲು ಹಾಲಿವುಡ್‌ಗೆ ಭಾರತೀಯರನ್ನೂ ಸಹ ಸೇರಿಸಿಕೊಳ್ಳಲಾಗ್ತಾ ಇದೆ. ಬಾರತೀಯರು ತುಂಬಾ ಶ್ರದ್ಧೆಯಿಂದ ಕೆಲಸ ಮಾಡ್ತಾರೆ, ಆದರೂ ಕೂಡ ಅವರನ್ನು ಯಾಕೆ ಕಡೆಗಣಿಸ್ತಾರೆ ಅಂತ ಮಾತ್ರ ನನಗೆ ಗೊತ್ತಿಲ್ಲ. ಪ್ರಪಂಚದಾದ್ಯಂತ ಭಾರತೀಯರಿಗೆ ಹೆಚ್ಚು ಹೆಚ್ಚು ಅವಕಾಶಗಳು ಸಿಗಬೇಕು. ಹಾಗಾಗಿ ನಾನು ಹಾಲಿವುಡ್‌ನಲ್ಲಿ ಪ್ರಯತ್ನ ಮಾಡ್ತಾ ಇದೀನಿ.” ಎಂದು ಹೇಳಿದ್ದಾರೆ.

ಹಾಲಿವುಡ್‌ನ ಸಿಟಾಡೆಲ್‌ನಲ್ಲಿ ಪ್ರಿಯಾಂಕಾ ಆಡಿಷನ್‌ ಇಲ್ಲದೇನೆ ಹೇಗೆ ಅಯ್ಕೆ ಆದ್ರು ಎಂಬುದರ ಬಗ್ಗೆಯೂ ಕೂಡ ಮಾತನಾಡಿದ್ದಾರೆ. ಬಾಲಿವುಡ್‌ನಲ್ಲಿ ಹಲವು ವರ್ಷಗಳಿಂದ ನಾಯಕಿಯಾಗಿರುವ ತನ್ನಂತಹ ನಟಿಯರಿಗೆ ನಮ್ಮ ಕೆಲಸದ ಬಗ್ಗೆ ಚೆನ್ನಾಗಿ ತಿಳಿದಿರುತ್ತದೆ. ಆಡಿಷನ್‌ ಇಲ್ದೇನೆ ನಾನು ಸೆಲೆಕ್ಟ್‌ ಆಗ್ತೀನಿ. ಒಂದು ವೇಳೆ ಆಡಿಷನ್‌ ಇದ್ರೂ ಕೂಡ ಆಡಿಷನ್‌ನಲ್ಲಿ ಭಾಗವಹಿಸಿ ನಾನು ಸೆಲೆಕ್ಟ್‌ ಆಗ್ತೀನಿ ಅನ್ನೋ ನಂಬಿಕೆ ನನಗಿದೆ.” ಎಂದು ಹೇಳಿದ್ದಾರೆ.

-masthmagaa.com

Contact Us for Advertisement

Leave a Reply