masthmagaa.com:

ಕೊರೋನಾ ಪರೀಕ್ಷೆಯ ನಿಖರತೆ ಬಗ್ಗೆಗಿನ ಅನುಮಾನ ಮತ್ತಷ್ಟು ಜಾಸ್ತಿಯಾಗ್ತಿದೆ. ಪರೀಕ್ಷೆ ಮಾಡಿಸಿಕೊಂಡ ಬಳಿಕ ಬರುವ ರಿಪೋರ್ಟ್​ ಸರಿಯೋ, ತಪ್ಪೋ ಅನ್ನೋ ಅನುಮಾನ ಹೆಚ್ಚಾಗ್ತಿದೆ. ಇತ್ತೀಚೆಗೆ ಸ್ಪೇಸ್​ ಎಕ್ಸ್ (SpaceX) ಸಂಸ್ಥಾಪಕ ಮತ್ತು ಟೆಸ್ಲಾ ಕಂಪನಿಯ ಸಿಇಒ ಎಲಾನ್ ಮಸ್ಕ್​ಗೆ ಮಾಡಿದ ಕೊರೋನಾ ಪರೀಕ್ಷೆಯಲ್ಲೂ ಇದೇ ರೀತಿ ಆಗಿತ್ತು. ಒಂದೇ ದಿನ 4 ಕೊರೋನಾ ಪರೀಕ್ಷೆ ಮಾಡಿಸಿದ್ರೆ ಎರಡು ಬಾರಿ ಪಾಸಿಟಿವ್, ಎರಡು ಬಾರಿ ನೆಗೆಟಿವ್ ಬಂದಿತ್ತು. ಕೊರೋನಾ ಪರೀಕ್ಷೆಯಲ್ಲೇನೋ ಬೋಗಸ್ ನಡೀತಿದೆ ಅಂತ ಎಲಾನ್ ಮಸ್ಕ್ ಹೇಳಿದ್ದರು. ಇದೀಗ ಅಮೆರಿಕದ ಜಾರ್ಜಿಯಾ ಸೆನೆಟರ್ ಕೆಲ್ಲಿ ಲೋಫ್ಲರ್ ಸರದಿ. ಕೆಲ್ಲಿ ಲೋಫ್ಲರ್​ಗೆ ಶುಕ್ರವಾರ ಬೆಳಗ್ಗೆ ಎರಡು ರಾಪಿಡ್ ಕೊರೋನಾ ಪರೀಕ್ಷೆಗಳನ್ನ ನಡೆಸಲಾಯ್ತು. ಅದರಲ್ಲಿ ನೆಗೆಟಿವ್ ಬಂದಿದೆ. ಬಳಿಕ ಅದೇ ದಿನ ಸಂಜೆ ಮತ್ತೊಮ್ಮೆ ಪರೀಕ್ಷೆ ಮಾಡಿಸಿಕೊಂಡಿದ್ದಾರೆ. ಅದರಲ್ಲಿ ಪಾಸಿಟಿವ್ ಬಂದಿದೆ. ಇದರಿಂದ ಗೊಂದಲಕ್ಕೀಡಾದ ಅವರು ಶನಿವಾರ ಮತ್ತೊಮ್ಮೆ ಪರೀಕ್ಷೆ ಮಾಡಿಸಿಕೊಂಡಿದ್ದು ಅದರ ರಿಸಲ್ಟ್​ ಕೂಡ ಸರಿಯಾಗಿ ಬಂದಿಲ್ಲ ಅಂತ ಹೇಳಲಾಗ್ತಿದೆ. ಮುಂಜಾಗ್ರತಾ ಕ್ರಮವಾಗಿ ಐಸೋಲೇಷನ್​ಗೆ ಒಳಪಟ್ಟಿರುವ ಕೆಲ್ಲಿ ಲೋಫ್ಲರ್​ ತಮ್ಮ ಸಂಪರ್ಕಕ್ಕೆ ಬಂದವರು ಟೆಸ್ಟ್ ಮಾಡಿಸಿಕೊಳ್ಳಿ ಅಂತ ಹೇಳಿದ್ದಾರೆ. ಭಾರತದಲ್ಲೂ ರಾಪಿಡ್ ಆ್ಯಂಟಿಜೆನ್ ಪರೀಕ್ಷೆ ವೇಳೆ ಒಂದ್​ಸಾರಿ ಪಾಸಿಟಿವ್ ಬಂದ್ರೆ ಮತ್ತೊಂದುಸಾರಿ ನೆಗೆಟಿವ್ ಬಂದ ಹಲವು ಪ್ರಕರಣ ವರದಿಯಾಗಿತ್ತು. ಅಂದ್ಹಾಗೆ ಪರೀಕ್ಷೆಗಳಲ್ಲೇ ಏನಾದ್ರೂ ಕಳ್ಳಾಟ ನಡೆಯುತ್ತಿದೆಯಾ ಅಥವಾ ಕೊರೋನಾ ವೈರಾಣುವೇ ನಮ್ಮ ಊಹೆಗೂ ನಿಲುಕದಂತೆ ವರ್ತಿಸುತ್ತಿದೆಯಾ ಗೊತ್ತಿಲ್ಲ…

-masthmagaa.com

Contact Us for Advertisement

Leave a Reply