ವಿಶ್ವದ 100 ಪ್ರಭಾವಿ ವ್ಯಕ್ತಿಗಳ ಸಾಲಿನಲ್ಲಿ ಶಾರುಖ್ ಖಾನ್ ಹಾಗೂ ರಾಜಮೌಳಿ !

masthmagaa.com:

ಅಮೇರಿಕಾದ ಟೈಮ್‌ ಮ್ಯಾಗಜಿನ್‌ 2023ರ ಜಗತ್ತೀನ ಪ್ರಭಾವಿ ವ್ಯಕ್ತಿಗಳ ಪಟ್ಟಿ ಬಿಡುಗಡೆ ಮಾಡಿದೆ. ಈ ಪಟ್ಟಿಯಲ್ಲಿ ಎಸ್‌. ಎಸ್‌ ರಾಜಮೌಳಿ ಹಾಗೂ ಶಾರುಖ್‌ ಖಾನ್‌ ಹೆಸರು ಸೇರ್ಪಡೆಯಾಗಿರುವುದು ಭಾರತೀಯರಿಗೆ ಹೆಮ್ಮೆಯ ಸಂಗತಿ. ನಿರ್ದೇಶಕ ಎಸ್‌. ಎಸ್‌ ರಾಜಮೌಳಿ ʻRRR’ ಸಿನಿಮಾ ಮೂಲಕ ಜಗತ್ತಿನಾದ್ಯಂತ ಗುರುತಿಸಿಕೊಂಡರು. ʻನಾಟು ನಾಟುʼ ಹಾಡಿಗೆ ಆಸ್ಕರ್‌ ದೊರೆತ್ತದ್ದು ಇದಕ್ಕೆ ಪ್ರಮುಖ ಕಾರಣ. ಇನ್ನೂ ಶಾರುಖ್‌ ಖಾನ್‌ ತುಂಬಾ ದಿನಗಳಿಂದ ಸೋಲಿನ ಸುಳಿಯಲ್ಲಿ ಸಿಲುಕಿದ್ದರು. ʻಪಠಾಣ್‌ʼ ಸಿನಿಮಾ ಮೂಲಕ ಮತ್ತೆ ಭರ್ಜರಿ ಯಶಸ್ಸು ಕಂಡರು. ಸಿನಿಮಾ ಜಗತ್ತಿನಾದ್ಯಂತ ಮನ್ನಣೆ ಪಡೆದು ಶಾರುಖ್‌ ಖಾನ್‌ ಜನಪ್ರಿಯತೆ ಹೆಚ್ಚಿತು. ಹೀಗಾಗಿ 2023 ರ ವಿಶ್ವದ ಪ್ರಭಾವಿ ವ್ಯಕ್ತಿಗಳ ಸಾಲಿನಲ್ಲಿ ನಿಂತಿದ್ದಾರೆ.

-masthmagaa.com

Contact Us for Advertisement

Leave a Reply