ಜಮ್ಮು ಕಾಶ್ಮೀರದ ವಿಚಾರದಲ್ಲಿ ಮಧ್ಯಸ್ಥಿಕೆ ಬೇಕಿಲ್ಲ: ಶಶಿ ತರೂರ್

ಜಮ್ಮು ಕಾಶ್ಮೀರದ ವಿಚಾರದಲ್ಲಿ ನಮಗೆ ಯಾವುದೇ ಮಧ್ಯಸ್ಥಿಕೆ ಬೇಕಿಲ್ಲ ಎಂದು ಕಾಂಗ್ರೆಸ್ ನಾಯಕ ಶಶಿ ತರೂರ್ ಹೇಳಿದ್ದಾರೆ. ಮಧ್ಯಪ್ರದೇಶದ ಇಂದೋರ್‍ನಲ್ಲಿ ನಡೆದ ಕಾರ್ಯಕ್ರಮವೊಂದರಲ್ಲಿ ಭಾಗಿಯಾಗಿ ಮಾತನಾಡಿದ ಅವರು, ನಮಗೆ ಪಾಕಿಸ್ತಾನದ ಜೊತೆ ಮಾತನಾಡಲು ಯಾವುದೇ ಸಮಸ್ಯೆ ಇಲ್ಲ. ಆದ್ರೆ ಅವರು ಒಂದು ಕೈಯಲ್ಲಿ ಬಂದೂಕು ಮತ್ತೊಂದು ಕೈಯಲ್ಲಿ ಬಾಂಬ್ ಹಿಡಿದಿದ್ರೆ ನಾವು ಮಾತುಕತೆ ನಡೆಸಲು ಸಾಧ್ಯವಿಲ್ಲ. ಅವರು ತಮ್ಮ ಬಂದೂಕನ್ನು ಕೆಳಗಿಡಬೇಕು ಮತ್ತು ಉಗ್ರರನ್ನು ಜೈಲಿಗೆ ಕಳುಹಿಸಬೇಕು. ಅವರು ನಮ್ಮ ಹಣೆ ಮೇಲೆ ಬಂದೂಕು ಇಟ್ಟರೆ ನಾವು ಮಾತನಾಡಲು ಸಾಧ್ಯವಿಲ್ಲ. ಇದು ಭಾರತದ ನಿಲುವು. ಇದರಲ್ಲಿ ಮೂರನೆಯವರ ಅಗತ್ಯವಿಲ್ಲ. ಪಾಕಿಸ್ತಾನದವರು ಉಗ್ರರನ್ನು ಬಳಸುತ್ತಿದ್ದಾರೆ. ಹೀಗಾಗಿ ನಾವು ಯಾವುದೇ ಕಾರಣಕ್ಕೂ ಮಾತುಕತೆ ನಡೆಸುವುದಿಲ್ಲ ಎಂದಿದ್ದಾರೆ. ಈ ಮೂಲಕ ಪದೇ ಪದೇ ಮಧ್ಯಸ್ಥಿಕೆ ವಹಿಸಲು ಸಿದ್ಧ ಎನ್ನುತ್ತಿರುವ ಟ್ರಂಪ್ ಹೇಳಿಕೆಗೆ ಉತ್ತರಿಸಿದ್ದಾರೆ.

Contact Us for Advertisement

Leave a Reply