ಚೋಕ್ಸಿನ ಕಿಡ್ನಾಪ್ ಮಾಡಿದ್ದಾ..? ತನಿಖೆಗೆ ಆದೇಶಿಸಿದ ಆಂಟಿಗುವಾ ಪ್ರಧಾನಿ

masthmagaa.com:

ಸಿಬಿಐ ಮತ್ತು ಜಾರಿ ನಿರ್ದೇಶನಾಲಯಕ್ಕೆ ಬೇಕಿರೊ ಮೆಹುಲ್ ಚೋಕ್ಸಿ ಆಂಟಿಗುವಾ ಮತ್ತು ಬಾರ್ಬುಡಾದಿಂದ ನಾಪತ್ತೆಯಾಗಿ ಈಗ ಡೊಮಿನಿಕಾದಲ್ಲಿ ತಗಲಾಕ್ಕೊಂಡಿರೋದು ನಿಮಗೆಲ್ಲಾ ಗೊತ್ತೇ ಇದೆ. ಆದ್ರೆ ಚೋಕ್ಸಿ ಮಾತ್ರ ನಾನಾಗೇ ಡೊಮಿನಿಕಾಗೆ ಬಂದಿಲ್ಲ. ನನ್ನನ್ನು ಅಪಹರಣ ಮಾಡಲಾಗಿದೆ ಅಂತ ದೂರು ನೀಡಿದ್ದಾರೆ. ಜೊತೆಗೆ ಬಾರ್ಬರಾ ಜಬರಿಕಾ ನನ್ನ ಸ್ನೇಹಿತೆ. ಆಕೆ ಫೋನ್ ಮಾಡಿ ತನ್ನನ್ನು ಪಿಕಪ್ ಮಾಡೋಕೆ ಬರಲು ಹೇಳಿದ್ಲು. ಆದ್ರೆ ನಾನು ಅಲ್ಲಿಗೆ ಹೋದಾಗ 8-10 ಜನ ಹಿಡ್ಕೊಂಡು ಪ್ರಜ್ಞೆಯೇ ಹೋಗುವಂತೆ ಹಿಗ್ಗಾಮುಗ್ಗಾ ಹೊಡ್ದುಬಿಟ್ರು. ಮೊದಲಿಗೆ ದುಡ್ಡು ಕಿತ್ತುಕೊಂಡ ಅವರು, ಆಮೇಲೆ ನಮಗೆ ರಾಬರಿ ಮಾಡೋ ಉದ್ದೇಶವಿಲ್ಲ ಅಂತ ಹೇಳಿ, ದುಡ್ಡು ವಾಪಸ್ ಕೊಟ್ಟಿದ್ರು ಅಂತ ದೂರಿನಲ್ಲಿ ಚೋಕ್ಸಿ ಉಲ್ಲೇಖಿಸಿದ್ದಾರೆ. ಹೀಗಾಗಿ ಈ ಸಂಬಂಧ ತನಿಖೆ ನಡೆಸುವಂತೆ ಆಂಟಿಗುವಾ ಪ್ರಧಾನಿ ಗ್ಯಾಸ್ಟೋನ್ ಬ್ರೌನೆ ಆದೇಶಿಸಿದ್ದಾರೆ. ಅದ್ರ ಬೆನ್ನಲ್ಲೇ ರಾಯಲ್ ಪೊಲೀಸ್ ಫೋರ್ಸ್​ ಫೀಲ್ಡ್​​ಗೆ ಇಳಿದು, ತನಿಖೆ ಶುರು ಮಾಡಿದ್ದಾರೆ. ಒಂದ್ವೇಳೆ ಈ ಆರೋಪ ನಿಜ ಆದ್ರೆ ತುಂಬಾ ಗಂಭೀರ ವಿಚಾರ ಅಂತ ಕೂಡ ಪ್ರಧಾನಿ ಗ್ಯಾಸ್ಟೋಬ್ ಬ್ರೌನೆ ಹೇಳಿದ್ದಾರೆ.

-masthmagaa.com

Contact Us for Advertisement

Leave a Reply