ಪ್ರಧಾನಿ ಮೋದಿ ಕ್ಯಾಬಿನೆಟ್​​​ನ ಸಚಿವರ ಬಂಧನ! ಯಾಕೆ ಗೊತ್ತಾ?

masthmagaa.com:

ಕೇಂದ್ರ ಸಚಿವ ನಾರಾಯಣ್ ರಾಣೆಯನ್ನು ಮಹಾರಾಷ್ಟ್ರದ ರತ್ನಗಿರಿ ಪೊಲೀಸರು ಅರೆಸ್ಟ್ ಮಾಡಿದ್ದಾರೆ. ಇದಕ್ಕೆ ಕಾರಣವಾಗಿದ್ದು ಸಿಎಂ ಉದ್ದವ್ ಠಾಕ್ರೆ ವಿರುದ್ಧ ನಾರಾಯಣ್ ರಾಣೆ ನೀಡಿರೋ ಹೇಳಿಕೆ. ರಾಯಘಡದಲ್ಲಿ ನಡೆದ ಜನಾಶೀರ್ವಾದ ಯಾತ್ರೆಯಲ್ಲಿ ಮಾತನಾಡಿದ್ದ ಅವರು, ಉದ್ಧವ್ ಠಾಕ್ರೆಗೆ ದೇಶ ಸ್ವತಂತ್ರಗೊಂಡ ಇಸವಿ ಗೊತ್ತಿಲ್ಲ. ಭಾಷಣದ ವೇಳೆ ತಮ್ಮ ಬೆಂಬಲಿಗರ ಬಳಿ ಕೇಳ್ಕೊಂಡು ಹೇಳ್ತಾರೆ. ಸಿಎಂ ಆದವರಿಗೆ ಸ್ವಾತಂತ್ರಗೊಂಡ ಇಸವಿ ಗೊತ್ತಿಲ್ಲ ಅಂದ್ರೆ ಅದು ನಾಚಿಕೆಗೇಡು.. ನಾನೇನಾದ್ರು ಅಲ್ಲಿ ಇದ್ದಿದ್ರೆ ಕೆನ್ನೆಗೆ ಬಾರಿಸಿಬಿಡ್ತಿದ್ದೆ ಅಂತ ಹೇಳಿದ್ರು. ಈ ಸಂಬಂಧ ಕೇಂದ್ರ ಸಚಿವ ನಾರಾಯಣ್ ರಾಣೆ ವಿರುದ್ಧ ನಾಶಿಕ್, ರಾಯಘಡ ಮತ್ತು ಪುಣೆಯಲ್ಲಿ ಮೂರ್​ಮೂರು ಎಫ್​ಐಆರ್ ದಾಖಲಾಗಿದೆ. ಈ ಸಂಬಂಧ ರಾಣೆ ನಿರೀಕ್ಷಣಾ ಜಾಮೀನಿಗೆ ಅರ್ಜಿ ಕೂಡ ಸಲ್ಲಿಸಿದ್ರು. ಆದ್ರೆ ರತ್ನಗಿರಿ ಸೆಷನ್ಸ್ ಕೋರ್ಟ್​ ಜಾಮೀನು ನೀಡಲು ನಿರಾಕರಿಸಿತ್ತು. ಅದ್ರ ಬೆನ್ನಲ್ಲೇ ಬಾಂಬೆ ಹೈಕೋರ್ಟ್​​​ಗೆ ಜಾಮೀನು ಅರ್ಜಿ ಸಲ್ಲಿಸಿ, ಈ ಕೂಡಲೇ ವಿಚಾರಣೆ ನಡೆಸಬೇಕೆಂದು ಮನವಿ ಮಾಡಿದ್ರು. ಆದ್ರೆ ಬಾಂಬೆ ಹೈಕೋರ್ಟ್​​ ಅರ್ಜಿಯ ತ್ವರಿತ ವಿಚಾರಣೆಗೆ ನಿರಾರಿಸಿತು. ದಾಖಲಿಸಿದ ಪೊಲೀಸರು ಅರೆಸ್ಟ್ ಮಾಡಿದ್ದಾರೆ. ಈ ಸಮಯದ ವಿಡಿಯೋವೊಂದು ವೈರಲ್ ಆಗಿದ್ದು, ಇದ್ರಲ್ಲಿ ಸಚಿವರು ಊಟದ ತಟ್ಟೆ ಕೈಲಿ ಹಿಡಿದುಕೊಂಡಿದ್ದಾರೆ. ಹಿಂದಿನಿಂದ ಅವರ ಮಗ ನಿತೀಶ್ ರಾಣೆ, ಸರ್ ಊಟ ಮಾಡ್ತಿದ್ದಾರೆ. ಒಂದು ನಿಮಿಷ.. ಒಂದು ನಿಮಿಷ.. ಅಂತ ಕೂಗೋದು ಕೇಳುತ್ತೆ..ಅಂದ್ರೆ ಊಟ ಮಾಡಕ್ಕೂ ಬಿಡದೇ ಪೊಲೀಸರು ಅರೆಸ್ಟ್ ಮಾಡಿ ಕರ್ಕೊಂಡು ಹೋಗಿದ್ದಾರೆ. ಈ ಮೂಲಕ 20 ವರ್ಷಗಳ ಬಳಿಕ ಓರ್ವ ಕೇಂದ್ರ ಸಚಿವರೊಬ್ಬರು ಅರೆಸ್ಟ್ ಆದಂತಾಗಿದೆ. ಜುಲೈ ತಿಂಗಳಲ್ಲಿ ಇವರು ಪ್ರಧಾನಿ ಮೋದಿ ಸಂಪುಟ ಸೇರಿದ್ರು. ಸೂಕ್ಷ್ಮ, ಸಣ್ಣ ಮತ್ತು ಮಧ್ಯಮ ಉದ್ಯಮ ಖಾತೆಯ ಹೊಣೆ ವಹಿಸಲಾಗಿತ್ತು. ಇನ್ನು ಇವರ ಹೇಳಿಕೆ ಬೆನ್ನಲ್ಲೇ ಇವತ್ತು ಶಿವಸೇನೆ ಕಾರ್ಯಕರ್ತರು ಸಚಿವ ನಾರಾಯಣ್ ರಾಣೆಯ ಮುಂಬೈ ನಿವಾಸದತ್ತ ಘೋಷಣೆಗಳನ್ನು ಕೂಗುತ್ತಾ ಮಾರ್ಚ್ ಮಾಡಿದ್ದಾರೆ. ಆದ್ರೆ ಈ ವೇಳೆ ಬಿಜೆಪಿ ಕಾರ್ಯಕರ್ತರು ಎದುರಾಗಿದ್ದು, ಗಲಾಟೆ ನಡೆದಿದೆ. ಪೊಲೀಸರು ಮತ್ತು ಯೋಧರು ಗಲಾಟೆ ನಿಯಂತ್ರಿಸಲು ಹರಸಾಹಸಪಡ್ಬೇಕಾಯ್ತು. ಈ ಬಗ್ಗೆ ಪ್ರತಿಕ್ರಿಯಿಸಿರೋ ಬಿಜೆಪಿ ನಾಯಕ ದೇವೇಂದ್ರ ಫಡ್ನಾವಿಸ್​​, ಬಿಜೆಪಿ ನಾಯಕ ದೇವೇಂದನಾರಾಯಣ್ ರಾಣೆ ಹೇಳಿಕೆಯನ್ನು ಸರಿ ಅಂತ ನಾನು ಒಪ್ಪಿಕೊಳ್ಳಲ್ಲ. ಆದ್ರೆ ಪೊಲೀಸರ ವರ್ತನೆ ತಾಲಿಬಾನಿಗಳ ರೀತಿ ಇದೆ ಅಂತ ಹೇಳಿದ್ದಾರೆ.

-masthmagaa.com

Contact Us for Advertisement

Leave a Reply