“ಶ್ರೀರಂಗ” ನಿಗೆ ಹಿನ್ನೆಲೆ ಸಂಗೀತ.

masthmagaa.com:

ಕನ್ನಡದಲ್ಲಿ ಸಾಕಷ್ಟು ಕಾಮಿಡಿ‌ ಜಾನರ್ ಸಿನಿಮಾಗಳು ಬಂದಿದೆ.‌ ಆದರೆ ಅದನ್ನು ತೋರಿಸುವ ಬೇರೆ ಆಗಿರುತ್ತದೆ.  ವಿಭಿನ್ನ ಹಾಸ್ಯ ಕಥಾಹಂದರ ಹೊಂದಿರುವ “ಶ್ರೀರಂಗ” ಚಿತ್ರದ ಚಿತ್ರೀಕರಣ ಮುಕ್ತಾಯವಾಗಿದ್ದು, ಪ್ರಸ್ತುತ ಹಿನ್ನೆಲೆ ಸಂಗೀತ ಪ್ರಕ್ರಿಯೆ ನಡೆಯುತ್ತಿದೆ. ಬೆಂಗಳೂರು ಸುತ್ತಮುತ್ತ 21ದಿನಗಳ ಚಿತ್ರೀಕರಣ ನಡೆದಿದೆ.‌  ಸದ್ಯದಲ್ಲೇ ಪ್ರಥಮಪ್ರತಿ ಸಿದ್ದವಾಗಲಿದೆ. ಕೊರೋನ ಕಡಿಮೆಯಾದರೆ ಅಗಸ್ಟ್ ವೇಳೆಗೆ ಚಿತ್ರಮಂದಿರಗಳಲ್ಲಿ “ಶ್ರೀರಂಗ” ನ ದರ್ಶನವಾಗಲಿದೆ.
ರತು ಕ್ರಿಯೇಷನ್ಸ್ ಲಾಂಛನದಲ್ಲಿ ಸುಮಾ ಅವರು ನಿರ್ಮಿಸುತ್ತಿರುವ ಈ ಚಿತ್ರವನ್ನು ವೆಂಕಟ್ ಭಾರದ್ವಾಜ್ ನಿರ್ದೇಶಿಸುತ್ತಿದ್ದಾರೆ.  ಹಾಸ್ಯಭರಿತ ಮೂರು ಹಾಡುಗಳಿಗೆ ಸಮೀರ್ ಕುಲಕರ್ಣಿ ಸಂಗೀತ ನೀಡುತ್ತಿದ್ದಾರೆ. ಮಿಥುನ್ ಛಾಯಾಗ್ರಹಣ ಹಾಗೂ  ಚಂದನ್ ಅವರ ಸಂಕಲನವಿರುವ ಈ ಚಿತ್ರದ ಇಂಟ್ರೋಡೆಕ್ಷನ್ ಹಾಡನ್ನು ವಿರಾಜ್ ಕನ್ನಡಿಗ ಅವರೆ ಬರೆದು, ಹಾಡಿದ್ದಾರೆ.
ಗುರುರಾಜ ಹೊಸಕೋಟೆ, ಯಮುನಾ ಶ್ರೀನಿಧಿ, ಶಿನವ, ರಚನಾ ರೈ, ಮಾಸ್ಟರ್ ಚಿರಾಯು ಚಕ್ರವರ್ತಿ, ರೂಪ ರಾಯಪ್ಪ(ಕೆ ಜಿ ಎಫ್), ವಂದನಾ ಶೆಟ್ಟಿ, ಸಾಗರ್ ಜಯರಾಂ, ಸೂಪರ್ ದೇವು, ರಾಮಕೃಷ್ಣ, ಜ್ಯೋತಿ ಮೂರುರ್, ವೆಂಕಟ್ ಭಾರದ್ವಾಜ್ ಮುಂತಾದವರು ಈ ಚಿತ್ರದ ತಾರಾಬಳಗದಲ್ಲಿದ್ದಾರೆ.
ಶಂಕರ್ ರಾಮನ್ ಸಂಭಾಷಣೆ ಬರೆದಿದ್ದಾರೆ.
-masthmagaa.com
Contact Us for Advertisement

Leave a Reply