ಶುಭಾ ಪೂಂಜಾ ಜೀವನದಲ್ಲಿ ಸಿಗಂದೂರು ದೇವಿ ಮಾಡಿದ ಪವಾಡ!!

masthmagaa.com:ಸ್ಯಾಂಡಲ್ವುಡ್ ನಟಿ ಶುಭಾ ಪೂಂಜಾ ಅವರು ಇತ್ತೀಚೆಗೆ ಬಿಗ್ ಬಾಸ್ ಸೀಸನ್ 8 ರಲ್ಲಿ ಕಾಣಿಸಿಕೊಂಡಿದ್ದರು. ‘ಜ್ಯಾಕ್‌ಪಾಟ್’ ಸಿನಿಮಾದ ಮೂಲಕ ಸ್ಯಾಂಡಲ್‌ವುಡ್‌ಗೆ ಎಂಟ್ರಿ ಕೊಟ್ಟ  ಶುಭಾ ಪೂಂಜಾ 2007ರಲ್ಲಿ ‘ಮೊಗ್ಗಿನ ಮನಸ್ಸು’ ಚಿತ್ರಕ್ಕೆ ಫಿಲ್ಮ್‌ಫೇರ್ ಅತ್ಯುತ್ತಮ ನಟಿ ಪ್ರಶಸ್ತಿ ಕೂಡ ಪಡೆದುಕೊಂಡಿದ್ದರು. ಅದಾದ ನಂತರ ಚಿತ್ರರಂಗದಲ್ಲಿ ಬೇಡಿಕೆಯ ನಟಿಯಾಗಿ ಗುರುತಿಸಿಕೊಂಡ ಶುಭಾ ಪೂಂಜಾ ಅವರು ತಮ್ಮ ಸಿನಿ ಜರ್ನಿಯಲ್ಲಿ ಹಲವಾರು ಏಳು ಬೀಳುಗಳನ್ನು ಎದುರಿಸಿದರು. ದುನಿಯಾ ವಿಜಯ್ ಜೊತೆಗಿನ ಸಂಬಂಧ, ಹಲವು ಫ್ಲಾಪ್ ಗಳು, ಕೆಲಕಾಲ ಸಿನಿಮಾದಲ್ಲಿ ಅವಕಾಶಗಳಿಲ್ಲದೆ ಖಾಲಿ ಕೂತದ್ದು, ಹೀಗೆ ಒಂದರ ಹಿಂದೆ ಒಂದರಂತೆ ಹಿನ್ನಡೆ ಅನುಭವಿಸಿದರು. ಆದರೂ ಸಹ ಚಿತ್ರರಂಗದಲ್ಲಿ ತಕ್ಕ ಮಟ್ಟದ ಮಾರ್ಕೆಟ್ ಉಳಿಸಿಕೊಂಡಿದ್ದಾರೆ. ಅದರಲ್ಲೂ ಬಿಗ್ ಬಾಸ್ ನಲ್ಲಿ ಶುಭ ಪೂಂಜಾ ಅವರನ್ನು ನೋಡಿದಮೇಲೆ ಜನಗಳಿಗೆ ಶುಭ ಪೂಂಜಾ ಮೇಲೆ ಇದ್ದಂಥ ಒಪೀನಿಯನ್ ಬದಲಾಗಿದೆ ಅಂತಾನೆ ಹೇಳಬಹುದು.

ಶುಭ ಪೂಂಜಾ ಜರ್ನಿಯ ಪೂರ್ತಿ ವಿಡಿಯೋ ಕೆಳಗೆ ಲಭ್ಯವಿದೆ.
Contact Us for Advertisement

Leave a Reply