masthmagaa.com:

ದೇಶದಲ್ಲಿ ಕಳೆದ 24 ಗಂಟೆಗಳಲ್ಲಿ 52,972 ಜನರಿಗೆ ಹೊಸದಾಗಿ ಸೋಂಕು ತಗುಲಿದ್ದು, 771 ಮಂದಿ ಮೃತಪಟ್ಟಿದ್ದಾರೆ ಅಂತ ಕೇಂದ್ರ ಆರೋಗ್ಯ ಇಲಾಖೆ ತಿಳಿಸಿದೆ. ಈ ಮೂಲಕ ಒಟ್ಟು ಸೋಂಕಿತರ ಸಂಖ್ಯೆ ಬರೋಬ್ಬರಿ 18 ಲಕ್ಷ ದಾಟಿದ್ದು 18,03,696 ಆಗಿದೆ..  ಒಟ್ಟು ಮೃತಪಟ್ಟವರ ಸಂಖ್ಯೆ 38,135 ಆಗಿದೆ. ಕಳೆದ ಒಂದು ವಾರದಲ್ಲಿ ಬರೋಬ್ಬರಿ 3.70 ಲಕ್ಷ ಜನರಿಗೆ ಸೋಂಕು ತಗುಲಿದೆ. ಇದರಲ್ಲಿ ಮಹಾರಾಷ್ಟ್ರ (65,000) ಮತ್ತು ಆಂಧ್ರಪ್ರದೇಶ (53,000) ರಾಜ್ಯಗಳ ಪಾಲು ದೊಡ್ಡದಿದೆ.

ಕಳೆದ 24 ಗಂಟೆಗಳಲ್ಲಿ 40,573 ಸೋಂಕಿತರು ಗುಣಮುಖರಾಗಿ ವಿವಿಧ ಆಸ್ಪತ್ರೆಗಳಿಂದ ಡಿಸ್ಚಾರ್ಜ್ ಆಗಿದ್ದಾರೆ. ದೇಶದಲ್ಲಿ ಇದುವರೆಗೆ ಒಟ್ಟು 11,86,203 ಸೋಂಕಿತರು ಗುಣಮುಖರಾದಂತಾಗಿದ್ದು 5,79,357 ಸೋಂಕಿತರು ವಿವಿಧ ಆಸ್ಪತ್ರೆಗಳಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.

ದೇಶದಲ್ಲಿ ಗುಣಮುಖ ಪ್ರಮಾಣ 65.77 ಪರ್ಸೆಂಟ್ ಇದೆ. ಸಾವಿನ ಪ್ರಮಾಣ 2.11 ಪರ್ಸೆಂಟ್ ಇದೆ. ಆಗಸ್ಟ್​ 2ರಂದು 3.81 ಲಕ್ಷ ಸ್ಯಾಂಪಲ್​ಗಳನ್ನ ಪರೀಕ್ಷಿಸಲಾಗಿದೆ. ಇದುವರೆಗೆ ಒಟ್ಟು 2.02 ಕೋಟಿ ಸ್ಯಾಂಪಲ್​ಗಳನ್ನ ಪರೀಕ್ಷೆ ಮಾಡಲಾಗಿದೆ ಅಂತ ಐಸಿಎಂಆರ್ ಹೇಳಿದೆ.

ರಾಜ್ಯವಾರು ಸಕ್ರಿಯ ಪ್ರಕರಣ (ಟಾಪ್-10):

1. ಮಹಾರಾಷ್ಟ್ರ: 1.48 ಲಕ್ಷ ಪ್ರಕರಣ (15,000+ ಸಾವು)

2. ಕರ್ನಾಟಕ: 74,000+ ಪ್ರಕರಣ (2,400+ ಸಾವು)

3. ಆಂಧ್ರಪ್ರದೇಶ: 74,000+ ಪ್ರಕರಣ (1,400+ ಸಾವು)

4. ತಮಿಳುನಾಡು: 56,000+ ಪ್ರಕರಣ (4,100+ ಸಾವು)

5. ಉತ್ತರಪ್ರದೇಶ: 38,000+ ಪ್ರಕರಣ (1,700+ ಸಾವು)

6. ಪಶ್ಚಿಮ ಬಂಗಾಳ: 21,000+ ಪ್ರಕರಣ (1,600+ ಸಾವು)

7. ಬಿಹಾರ: 20,000+ ಪ್ರಕರಣ (329 ಸಾವು)

8. ತೆಲಂಗಾಣ: 18,000+ ಪ್ರಕರಣ (540 ಸಾವು)

9. ಗುಜರಾತ್: 14,000+ ಪ್ರಕರಣ (2,400+ ಸಾವು)

10. ಒಡಿಶಾ: 12,000+ ಪ್ರಕರಣ (197 ಸಾವು)

-masthmagaa.com

Contact Us for Advertisement

Leave a Reply