ಈಸ್ಟರ್ ಸಂಡೇ ದಾಳಿ ಬಗ್ಗೆ ಮೊದಲೇ ಗೊತ್ತಿರಲಿಲ್ಲ: ಮೈತ್ರಿ ಪಾಲ ಸಿರಿಸೇನಾ

masthmagaa.com:

ಶ್ರೀಲಂಕಾ ಮಾಜಿ ಅಧ್ಯಕ್ಷ ಮೈತ್ರಿ ಪಾಲ ಸಿರಿಸೇನಾಗೆ 2019ರ ಭಯಾನಕ ಈಸ್ಟರ್ ಸಂಡೇ ದಾಳಿ ಬಗ್ಗೆ ಮೊದಲೇ ಮಾಹಿತಿ ಇತ್ತು ಅನ್ನೋ ಆರೋಪಕ್ಕೆ ಇದೇ ಮೊದಲ ಬಾರಿಗೆ ಪ್ರತಿಕ್ರಿಯಿಸಿದ್ದಾರೆ. ಪ್ರಕರಣದ ತನಿಖೆಗಾಗಿ ಅವರೇ ನಿಯೋಜಿಸಿದ್ದ ತನಿಖಾ ಸಮಿತಿಯೇ ಮೈತ್ರಿಪಾಲ ಸಿರಿಸೇನಾಗೇ ದಾಳಿ ಕುರಿತು ಮೊದಲೇ ಮಾಹಿತಿ ಇತ್ತು ಅಂತ ಆರೋಪಿಸಿತ್ತು. ಆದ್ರೆ ಈ ಬಗ್ಗೆ ಪ್ರತಿಕ್ರಿಯಿಸಿರುವ ಮೈತ್ರಿಪಾಲ ಸಿರಿಸೇನಾ, ನನಗೆ ದಾಳಿ ಬಗ್ಗೆ ಮೊದಲೇ ಮಾಹಿತಿ ಇದ್ದಿದ್ರೆ, ಗುಪ್ತಚರ ಇಲಾಖೆಯಿಂದ ಗೊತ್ತಾಗಿದ್ರೆ ಕೂಡಲೇ ಕರ್ಫ್ಯೂ ಹೇರಿ ಬಿಡ್ತಿದ್ದೆ. ಚರ್ಚ್​​ಗಳಿಗೆ ರಕ್ಷಣೆ ನೀಡಿ ಹೇಗಾದ್ರೂ ದಾಳಿಯನ್ನು ತಡೆಯುತ್ತಿದ್ದೆ ಅಂತ ಹೇಳಿದ್ದಾರೆ.

ಅಂದಹಾಗೆ 2019ರ ಏಪ್ರಿಲ್ 21ರಂದು ಈಸ್ಟರ್ ಸಂಡೇ ದಾಳಿ ನಡೆದಿತ್ತು. ಚರ್ಚ್​​, ಹೋಟೆಲ್​​ಗಳಲ್ಲಿ ನಡೆದ 9 ಆತ್ಮಾಹುತಿ ದಾಳಿಯಲ್ಲಿ 258 ಮಂದಿ ಸಾವನ್ನಪ್ಪಿದ್ರು. 500ಕ್ಕೂ ಹೆಚ್ಚು ಜನರಿಗೆ ಗಾಯವಾಗಿತ್ತು. ಇದ್ರಲ್ಲಿ 11 ಮಂದಿ ಭಾರತೀಯರು ಕೂಡ ಜೀವ ಬಿಟ್ಟಿದ್ದರು. ದಾಳಿ ಹೊಣೆಯನ್ನು ಸ್ಥಳೀಯ ಉಗ್ರ ಸಂಘಟನೆಯೊಂದು ಹೊತ್ತುಕೊಂಡಿತ್ತು.

-masthmagaa.com

Contact Us for Advertisement

Leave a Reply