ಗಗನಯಾತ್ರಿಗಳ ಆಹಾರ ಹೇಗಿರಬೇಕು..? ಯಾವ ಆಹಾರ ತಿನ್ನಬಹುದು..?

ಬಾಹ್ಯಾಕಾಶದಲ್ಲಿ ಗಗನಯಾತ್ರಿಗಳು ಯಾವ ಯಾವ ಆಹಾರ ತಿನ್ನಬಹುದು..? ಗಗನಯಾತ್ರಿಗಳಿಗೆ ತಯಾರಿಸುವ ಆಹಾರ ಹೇಗಿರುತ್ತೆ.? ಬಾಹ್ಯಾಕಾಶದಲ್ಲಿ ಆಹಾರ ಪದಾರ್ಥಗಳು ತೇಲುವುದು ಯಾಕೆ..? ಸಂಶೋಧನೆಗೆ ಅಂತ ಹೋಗುವ ಗಗನಯಾತ್ರಿಗಳ ಜೀವನ ಹೇಗಿರುತ್ತೆ..? ಈ ಕುತೂಹಲಕಾರಿ ಮಾಹಿತಿಯನ್ನ ನಾವು ನಿಮಗೆ ಹೇಳ್ತಾ ಹೋಗ್ತೀವಿ ನೋಡಿ..

ಬಾಹ್ಯಾಕಾಶದಲ್ಲಿ ಭೂಮಿ ಮೇಲಿರುವಂತೆ ಗುರುತ್ವಾಕರ್ಷಣೆ ಇಲ್ವೇ ಇಲ್ಲ. ಹೀಗಾಗಿಯೇ ಏನಾದ್ರೂ ಕುಡಿಬೇಕು ಅಂದ್ರು ಅಥವಾ ತಿನ್ನಬೇಕು ಅಂದ್ರು ಗಗನಯಾತ್ರಿಗಳು ಬಾಳ ಸರ್ಕಸ್ ಮಾಡಬೇಕು. ಯಾವುದಾದರೂ ಒಂದು ವಸ್ತುವನ್ನ ಬಿಟ್ಟರೆ ಸಾಕು ಅದು ನೆಲಕ್ಕೆ ಬೀಳದೆ ವಾತಾವರಣದಲ್ಲಿ ತೇಲುತ್ತಿರುತ್ತದೆ. ಹೀಗೆ ವಾತಾವರಣದಲ್ಲಿ ತೇಲುವ ವಸ್ತುಗಳು ಕೆಲವೊಮ್ಮೆ ಗಗನಯಾತ್ರಿಗಳು ಹೋಗಿರುವ ಬಾಹ್ಯಾಕಾಶ ನೌಕೆಗೆ ತೊಂದರೆ ಮಾಡಿಬಿಡುತ್ತೆ.

ಬಾಹ್ಯಾಕಾಶದಲ್ಲಿ ಏನೇನು ತಿನ್ನಬಹುದು..?
ಈ ಪ್ರಶ್ನೆ ಎಲ್ಲರನ್ನು ಕಾಡುತ್ತಿರಬಹುದು. ಇದಕ್ಕೆ ಉತ್ತರ ಸಿಂಪಲ್. ಫ್ರೆಂಡ್ಸ್ ಕೆಲವೇ ಕೆಲವು ತಿಂಡಿತಿನಿಸುಗಳನ್ನು ಹೊರತುಪಡಿಸಿ ಬಹುತೇಕ ನಾವು-ನೀವು ತಿನ್ನುವ ಎಲ್ಲಾ ಆಹಾರವನ್ನು ಗಗನಯಾತ್ರಿಗಳು ತಿನ್ನಬಹುದು. ಬನ್, ಬ್ರೆಡ್, ಪೆಪ್ಸಿ, ಕೊಕೊ ಕೋಲಾದಂತಹ ಆಹಾರ ಬಿಟ್ಟು ಚಿಕನ್, ಮಟನ್ ಸೇರಿ ವೆಜ್ ನಾನ್ ವೆಜ್ ಏನು ಬೇಕಾದರೂ ತಿನ್ನಬಹುದು. ಹಾಗಂತ ಅವುಗಳನ್ನು ಹಾಗೆ ತೆಗೆದುಕೊಂಡು ಹೋಗುವಂತಿಲ್ಲ. ವಿಶೇಷವಾಗಿ ಪ್ಯಾಕಿಂಗ್ ಮಾಡಿದ ಬಳಿಕವೆ ಅವುಗಳನ್ನ ಕೊಂಡೊಯ್ಯಲಾಗುತ್ತೆ.

ಗಗನಯಾತ್ರಿಗಳು ತಿನ್ನುವ ಆಹಾರ ಹೇಗಿರಬೇಕು..?
ಬಾಹ್ಯಾಕಾಶದಲ್ಲಿ ಸಂಶೋಧನೆ ನಡೆಸುತ್ತಿರುವ ಗಗನಯಾತ್ರಿಗಳು ಆರೋಗ್ಯವಂತರಾಗಿರಬೇಕಾಗುತ್ತೆ. ಅದಕ್ಕಾಗಿ ಅವರು ತಿನ್ನುವ ಆಹಾರದ ಬಗ್ಗೆ ಹೆಚ್ಚು ಎಚ್ಚರವಹಿಸಬೇಕು. ಮೊದಲನೆಯದಾಗಿ ಅವರು ತಿನ್ನುವ ಆಹಾರ ಹೆಚ್ಚು ಪೌಷ್ಟಿಕಾಂಶವಿರುವ, ಸುಲಭವಾಗಿ ಜೀರ್ಣವಾಗುವಂಥದ್ದು ಆಗಿರಬೇಕು. ಎರಡನೆಯದಾಗಿ ಶೂನ್ಯ ಗುರುತ್ವಾಕರ್ಷಣೆಯ ವಾತಾವರಣದಲ್ಲಿ ಯೂಸ್ ಮಾಡಬಹುದಾದ ಆಹಾರವಾಗಿರಬೇಕು. ಅಂದ್ರೆ ಅದು ಹಗುರವಾಗಿರಬೇಕು, ಪ್ಯಾಕೇಜ್ ಆಗಿರಬೇಕು, ಹೆಚ್ಚು ಕ್ಲೀನ್ ಮಾಡಿ ತಿನ್ನುವಂಥದ್ದು ಆಗಿರಬಾರದು. ಕೊನೆಯದಾಗಿ ಅವು ಈಸಿಯಾಗಿ ಓಪನ್ ಮಾಡುವಂಥದ್ದು, ಸ್ವಲ್ಪವೇ ಸ್ವಲ್ಪ ವೇಸ್ಟ್ ಇರುವಂತದ್ದು ಆಗಿರಬೇಕು.

ಪೆಪ್ಸಿ, ಕೋಕ್ ಕುಡಿದರೆ ಆಗುತ್ತೆ ವಾಮಿಟ್
ಬಾಹ್ಯಾಕಾಶದಲ್ಲಿ ಪೆಪ್ಸಿ ಕೋಕ್ ನಂತಹಾ ಕಾರ್ಬೊನೇಟೆಡ್ ಪಾನೀಯಗಳನ್ನು ಟ್ರೈ ಮಾಡಿದ್ದಾರೆ. ಪೆಪ್ಸೀ ಕೋಕಾಕೋಲಾ ದಂತಹ ಡ್ರಿಂಕ್ಸ್ ಗಳನ್ನು ಗಗನಯಾತ್ರಿಗಳು ಕುಡಿದ ವಾಮಿಟ್ ಆಗೋದು ಪಕ್ಕ. ಯಾಕೆಂದರೆ ಇಂತಹ ಕೂಲ್ಡ್ರಿಂಕ್ಸ್ ನಲ್ಲಿ ಗ್ಯಾಸ್ ಇರುತ್ತೆ. ಆದರೆ ಬಾಹ್ಯಾಕಾಶದಲ್ಲಿ ಇಂತಾ ಸಾಫ್ಟ್ ಡ್ರಿಂಕ್ಸ್ ಕುಡಿದಾಗ ಹೊಟ್ಟೆಯೊಳಗೆ ಗ್ಯಾಸ್ ಮತ್ತು ನೀರು ಬೇರೆಬೇರೆಯಾಗಿ ಗಗನಯಾತ್ರಿಗಳಿಗೆ ವಿಪರೀತ ವಾಂತಿ ಆಗಿತ್ತು. 1985ರಲ್ಲಿ ಮೊದಲ ಬಾರಿಗೆ ಇಂತಹ ಪಾನೀಯವನ್ನ ಬಾಹ್ಯಾಕಾಶಕ್ಕೆ ತೆಗೆದುಕೊಂಡು ಹೋಗಲಾಗಿತ್ತು. ಆಮೇಲೆ ನಿಲ್ಲಿಸಲಾಯಿತು. ಬಿಯರ್ ಕುಡಿದಾಗಲೂ ಕೂಡಾ ಇದೇ ರೀತಿಯಾದ ಕಾರಣಕ್ಕಾಗಿ ಬಾಹ್ಯಾಕಾಶದಲ್ಲಿ ಇವುಗಳನ್ನ ಬಳಕೆ ಮಾಡೋದನ್ನ ನಿಲ್ಲಿಸಲಾಯಿತು.

ಪ್ಯಾಕೇಜಿಂಗ್ ಹೇಗಿರಬೇಕು..?
ಬಾಹ್ಯಾಕಾಶಕ್ಕೆ ಕೊಂಡೊಯ್ಯುವ ಆಹಾರ ಪದಾರ್ಥಗಳ ಪ್ಯಾಕೇಜಿಂಗ್ ತುಂಬಾ ಇಂಪಾಟೆರ್ಂಟ್. ಅವುಗಳನ್ನ ಸರಿಯಾಗಿ ಪ್ಯಾಕ್ ಮಾಡದಿದ್ದರೆ ಬೇಗನೆ ಹಾಳಾಗಿ ತಿನ್ನಲು ಯೋಗ್ಯವಾಗಿರುವುದಿಲ್ಲ. ಇನ್ನು ಪ್ಯಾಕೇಜಿಂಗ್ ಮಾಡುವಾಗ ಹಲವು ಕ್ರಮಗಳನ್ನ ಅನುಸರಿಸಬೇಕು. ಮೊದಲನೇದಾಗಿ ಪ್ಯಾಕೇಜ್ ತುಂಬಾ ಹಗುರವಾಗಿರಬೇಕು. ತಿಂದ ಮೇಲೆ ಪ್ಯಾಕೆಟ್ ಗಳನ್ನ ಸುಲಭವಾಗಿ ವಿಲೇವಾರಿ ಮಾಡುವಂತದ್ದಾಗಿರಬೇಕು. ಪ್ಯಾಕೇಜಿಂಗ್ ಬಾರ್ ಕೋಡೆಡ್ ಲೇಬಲ್ಗಳನ್ನ ಹೊಂದಿರಬೇಕು. ಅಲ್ಲದೆ ಆಹಾರ ತಯಾರಿಕಾ ವಿಧಾನವನ್ನು ಇಂಗ್ಲಿಷ್ ಹಾಗೂ ರಷ್ಯನ್ ಭಾಷೆಯಲ್ಲಿ ಬರೆದಿರಬೇಕು.

ರಷ್ಯಾದ್ದೇ ಒಂದುರೀತಿ.. ಅಮೇರಿಕಾದ್ದೇ ಒಂದುರೀತಿ
ರಷ್ಯಾದವರು ಗಗನಯಾತ್ರಿಗಳಿಗೆ ಬೇಕಾಗುವ ಆಹಾರವನ್ನ ಕ್ಯಾನ್ ಹಾಗೂ ಟಿನ್ ಗಳಲ್ಲಿ ಪ್ಯಾಕ್ ಮಾಡುತ್ತಾರೆ. ಅವುಗಳನ್ನು ಓಪನ್ ಮಾಡಿ ಡೈರೆಕ್ಟಾಗಿ ತಿನ್ನಬಹುದು. ಅಂದಹಾಗೆ ಇವುಗಳನ್ನು ಎಲೆಕ್ಟ್ರೋ ರೆಸಿಸ್ಟವ್ ವಿಧಾನದ ಮೂಲಕ ಬಿಸಿ ಮಾಡಲಾಗುತ್ತೆ. ಇನ್ನು ಅಮೆರಿಕದ ನಾಸಾದವರು ರಿಟಾರ್ಟ್ ಚೀಲಗಳಲ್ಲಿ ಆಹಾರಪದಾರ್ಥಗಳನ್ನು ಪ್ಯಾಕ್ ಮಾಡುತ್ತಾರೆ. ಅಲ್ಲದೆ ಸಣ್ಣ ಸಣ್ಣ ಕಂಟೈನರ್ ಗಳಲ್ಲೂ ಪ್ಯಾಕ್ ಮಾಡಿ ಸೀಲ್ ಮಾಡುತ್ತಾರೆ. ಅವುಗಳನ್ನು ಇಡಲು ಟ್ರೇಗಳನ್ನು ಕೂಡ ನಾಸಾ ರೆಡಿ ಮಾಡಿದೆ.

ಇದಿಷ್ಟು ಬಾಹ್ಯಾಕಾಶದಲ್ಲಿ ಗಗನಯಾತ್ರಿಗಳು ತಿನ್ನುವ ಆಹಾರ ಹಾಗೂ ಅದರ ಪ್ಯಾಕೇಜಿಂಗ್ ಬಗ್ಗೆ ತಿಳಿಸಿಕೊಡುವ ಪ್ರಯತ್ನ. ಈ ವರದಿ ನಿಮಗೆ ಇಷ್ಟ ಎಲ್ಲರಿಗೂ ಶೇರ್ ಮಾಡಿ.

Contact Us for Advertisement

Leave a Reply