ಕೊರೋನಾ ರೋಗಿಗಳನ್ನು ಡಿಸ್ಚಾರ್ಜ್ ಮಾಡಿದ ತಮಿಳುನಾಡು ಆಸ್ಪತ್ರೆ..!

masthmagaa.com:

ತಮಿಳುನಾಡು: ವಿಲ್ಲುಪುರಂನ ಆಸ್ಪತ್ರೆಯೊಂದು ಎಡವಟ್ಟು ಮಾಡಿದ್ದು, ನಾಲ್ವರು ಕೊರೋನಾ ಸೋಂಕಿತರನ್ನು ಡಿಸ್ಚಾರ್ಜ್ ಮಾಡಿ ಮನೆಗೆ ಕಳುಹಿಸಿದೆ. ಕೊರೋನಾ ಪರೀಕ್ಷೆಯ ವರದಿಯಲ್ಲಿ ಮಿಸ್ ಆಗಿ ನೆಗೆಟಿವ್ ಎಂದು ಬಂದಿತ್ತು. ಹೀಗಾಗಿ ಆಸ್ಪತ್ರೆ ಸಿಬ್ಬಂದಿ ನಾಲ್ವರು ರೋಗಿಗಳನ್ನು ಕ್ವಾರಂಟೈನ್​​ ಸೆಂಟರ್​​​​​​ನಿಂದ ಬಿಟ್ಟು ಕಳುಹಿಸಿದ್ದಾರೆ. ಬಳಿಕ ತಮ್ಮ ತಪ್ಪಿನ ಅರಿವಾಗಿದ್ದು, ಈ ಬಗ್ಗೆ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಈಗಾಗಲೇ ಮೂವರು ರೋಗಿಗಳನ್ನು ಪತ್ತೆಹಚ್ಚಲಾಗಿದ್ದು, ಕ್ವಾರಂಟೈನ್ ಸೆಂಟರ್​​ಗೆ ಕಳುಹಿಸಲಾಗಿದೆ. ಮತ್ತೋರ್ವ ರೋಗಿಗಾಗಿ ಹುಡುಕಾಟ ನಡೆಸಲಾಗುತ್ತಿದೆ. ಈತ ದೆಹಲಿ ಮೂಲದ ವಲಸೆ ಕಾರ್ಮಿಕ ಅಂತ ತಿಳಿದು ಬಂದಿದೆ. ಈತನ ಪತ್ತೆಗೆ ವಿಶೇಷ ತಂಡವನ್ನು ರಚಿಸಲಾಗಿದೆ.

ಕಳೆದೊಂದು ವಾರದಲ್ಲಿ ತಮಿಳುನಾಡಿನಲ್ಲಿ ಆಗುತ್ತಿರುವ 2ನೇ ಎಡವಟ್ಟು ಇದಾಗಿದೆ. ಈ ಹಿಂದೆ ಚೆನ್ನೈನಲ್ಲಿರೋ ಸ್ಟಾನ್ಲೀ ಮೆಡಿಕಲ್ ಕಾಲೇಜು ಆಸ್ಪತ್ರೆಯಲ್ಲಿ 71 ವರ್ಷದ ವೃದ್ಧರೊಬ್ಬರು ಸಾವನ್ನಪ್ಪಿದ್ದರು. ಆದ್ರೆ ಕೊರೋನಾ ಪರೀಕ್ಷೆಯ ವರದಿ ಬರುವ ಮುನ್ನವೇ ಆಸ್ಪತ್ರೆ ಸಿಬ್ಬಂದಿ ಮೃತದೇಹವನ್ನು ಕುಟುಂಬದವರಿಗೆ ಹಸ್ತಾಂತರ ಮಾಡಿದ್ದರು.

-masthmagaa.com

Contact Us for Advertisement

Leave a Reply