ಸ್ಪಿನ್ ಮಾಂತ್ರಿಕ ಮುತ್ತಯ್ಯ ಮುರಳೀಧರನ್ ಬೈಯೋಪಿಕ್ ‘800’ ಸ್ಪೆಷಲ್ ಪೋಸ್ಟರ್ ರಿಲೀಸ್!

masthmagaa.com:

ಕ್ರಿಕೆಟ್‌ನ ಸ್ಪಿನ್‌ ಮಾಂತ್ರಿಕ ಮುತ್ತಯ್ಯ ಮುರಳೀಧರನ್ ಅವರ ಜೀವನಚರಿತ್ರೆ ಆಧಾರಿತ ಚಿತ್ರ ರೆಡಿಯಾಗಿದೆ. ‘800’ ಅನ್ನೋ ಟೈಟಲ್‌ ಇರುವ ಈ ಚಿತ್ರವನ್ನ ಎಂ.ಎಸ್ ಶ್ರೀಪತಿ ಬರೆದು ನಿರ್ದೇಶಿಸಿದ್ದಾರೆ, ಇದು ತಮಿಳು, ಹಿಂದಿ ಮತ್ತು ತೆಲುಗು ಭಾಷೆಗಳಲ್ಲಿ ಬಿಡುಗಡೆಯಾಗಲಿದೆ.

ಮುರಳಿ ಅವರು ಏಪ್ರಿಲ್ 17 ರಂದು ಅಂದ್ರೆ ಇವತ್ತು 51 ನೇ ವರ್ಷಕ್ಕೆ ಕಾಲಿಟ್ಟಿದ್ದಾರೆ. ಹುಟ್ಟುಹಬ್ಬದ ವಿಶೇಷ ಉಡುಗೊರೆಯಾಗಿ, ಅವರ ಜೀವನಚರಿತ್ರೆಯ ಚಿತ್ರದ ಪೋಸ್ಟರ್‌ನ್ನ ಚಿತ್ರತಂಡ ರಿಲೀಸ್‌ ಮಾಡಿದೆ. ಎಂ ಎಸ್‌. ಶ್ರೀಪತಿ ಬರೆದು ನಿರ್ದೇಶಿಸುತ್ತಿರುವ ತಮಿಳು ಚಿತ್ರಕ್ಕೆ 800 ಎಂದು ಹೆಸರಿಡಲಾಗಿದೆ. ಟೆಸ್ಟ್ ಕ್ರಿಕೆಟ್‌ನಲ್ಲಿ ದಾಖಲೆ ಸಂಖ್ಯೆಯ ವಿಕೆಟ್‌ಗಳನ್ನು ಪಡೆದ ಕ್ರಿಕೆಟಿಗನ ಬಯೋಪಿಕ್‌ನಲ್ಲಿ ಆಸ್ಕರ್ ಪ್ರಶಸ್ತಿ ವಿಜೇತ ಮಧುರ್ ಮಿತ್ತಲ್ ಅವರು ಮುತ್ತಯ್ಯನಾಗಿ ನಟಿಸಲಿದ್ದಾರೆ. ವಿಶ್ವಾದ್ಯಂತ ಪ್ರಖ್ಯಾತಿ ಪಡೆದಿರುವ ಕ್ರಿಕೆಟಿಗನ ಬಯೋಪಿಕ್‌ ಕನ್ನಡ ಭಾಷೆಗೆ ಡಬ್‌ ಆಗದೇ ಬಿಡುಗಡೆ ಆಗ್ತಾ ಇರೋದು ವಿಪರ್ಯಾಸವೇ ಸರಿ.

-masthmagaa.com

Contact Us for Advertisement

Leave a Reply