ನಮ್ಮ ಪಕ್ಕದ ಶ್ರೀಲಂಕಾದಲ್ಲಿ ನಾಲ್ವರೇ ಕೇಂದ್ರ ಸಚಿವರು!

masthmagaa.com:

ಆರ್ಥಿಕ ಬಿಕ್ಕಟ್ಟಿನಿಂದ ಜರ್ಜರಿತವಾಗಿರೋ ಪಕ್ಕದ ದೇಶ ಶ್ರೀಲಂಕಾಗೆ ನಾಲ್ವರು ಮಂತ್ರಿಗಳ ಹೊಸ ಕ್ಯಾಬಿನೆಟ್​ ಸಿಕ್ಕಿದೆ. ಅಲಿ ಸ್ಯಾಬ್ರಿ ಶ್ರೀಲಂಕಾದ ಹೊಸ ಆರ್ಥಿಕ ಸಚಿವರಾಗಿದ್ದಾರೆ. ಪ್ರೊಫೆಸರ್​ ಜಿ.ಎಲ್.​ ಪೆರಿಸ್​​ಗೆ ಮತ್ತೆ ಫಾರಿನ್​ ಮಿನಿಸ್ಟರ್ ಹುದ್ದೆ ಸಿಕ್ಕಿದೆ. ದಿನೇಶ್​ ಗುಣವರ್ಧನಾ ಶಿಕ್ಷಣ ಸಚಿವರಾಗಿದ್ದಾರೆ ಮತ್ತು ಜಾನ್ಸನ್​ ಫೆರ್ನಾಂಡೋ ಹೆದ್ದಾರಿ ಸಚಿವರಾಗಿದ್ದಾರೆ. ಹೀಗೆ ಆರ್ಥಿಕ​, ವಿದೇಶಾಂಗ, ಶಿಕ್ಷಣ ಮತ್ತು ಹೆದ್ದಾರಿ – ಈ ನಾಲ್ಕು ಖಾತೆಗಳಿಗೆ ಮಾತ್ರ ಸಚಿವರು ಸಿಕ್ಕಂತಾಗಿದೆ. ಪೂರ್ಣ ಪ್ರಮಾಣದ ಕ್ಯಾಬಿನೆಟ್ ನೇಮಕಗೊಳ್ಳುವವರೆಗೆ ಸಂಸತ್ತು ಮತ್ತು ದೇಶದ ಇತರ ಕೆಲಸಗಳು ನ್ಯಾಯಸಮ್ಮತವಾಗಿ ನಡೆಯಲು ಮತ್ತು ಸ್ಥಿರತೆಯನ್ನ ಕಾಪಾಡಿಕೊಳ್ಳಲು ಶ್ರೀಲಂಕಾ ಅಧ್ಯಕ್ಷ ಗೋಟಬಯ ರಾಜಪಕ್ಸ ಸದ್ಯಕ್ಕೆ ನಾಲ್ವರಿಗೆ ಪ್ರಮಾಣವಚನ ಬೋಧಿಸಿದ್ದಾರೆ. ಶ್ರೀಲಂಕಾದ ಎಲ್ಲಾ 26 ಸಚಿವರು ಸಾಮೂಹಿಕವಾಗಿ ರಾಜೀನಾಮೆ ನೀಡಿದ ಬೆನ್ನಲ್ಲೇ ಈ ಬೆಳವಣಿಗೆ ನಡೆದಿದೆ.

-masthmagaa.com

Contact Us for Advertisement

Leave a Reply