ಇಮ್ರಾನ್‌ ಖಾನ್‌ ಸರ್ಕಾರಕ್ಕೆ ಮತ್ತೊಂದು ಸವಾಲು

masthmagaa.com:

ತಾಲಿಬಾನಿಗಳಿಗೆ ಬೆಂಬಲ ನೀಡ್ತಿರೋ ಆರೋಪ ಎದುರಿಸ್ತಿರೋ ಪಾಕಿಸ್ತಾನ ಸರ್ಕಾರಕ್ಕೆ ತನ್ನ ನೆಲದಲ್ಲೇ ದೊಡ್ಡಮಟ್ಟದ ಸವಾಲು ಎದುರಾಗೋ ಸಾಧ್ಯತೆ ಇದೆ. ಯಾಕಂದ್ರೆ ಅಫ್ಘಾನಿಸ್ತಾನದ ರಾಷ್ಟ್ರೀಯ ಭದ್ರತಾ ಸಲಹೆಗಾರ ಪಾಕ್ ಸರ್ಕಾರದ ಕಟ್ಟರ್ ಶತ್ರುವನ್ನು ಭೇಟಿಯಾಗಿದ್ದಾರೆ. ಅಫ್ಘನ್ ರಾಷ್ಟ್ರೀಯ ಭದ್ರತಾ ಸಲಹೆಗಾರ ಹಮದುಲ್ಲಾ ಮೋಹಿಬ್​​, ಲಂಡನ್​​ನಲ್ಲಿರೋ ಪಾಕ್ ಮಾಜಿ ಪ್ರಧಾನಿ ನವಾಜ್ ಷರೀಫ್ ಅವರನ್ನು ಭೇಟಿಯಾಗಿ, ಮಹತ್ವದ ಚರ್ಚೆ ನಡೆಸಿದ್ದಾರೆ. ಇದ್ರ ಬೆನ್ನಲ್ಲೇ ಏನೋ ಪ್ಲಾನಿಂಗ್ ಆಗ್ತಿದೆ. ಪಾಕ್ ತಾಲಿಬಾನಿಗಳಿಗೆ ಬೆಂಬಲ ನೀಡಿದ್ದಕ್ಕೆ ಅಫ್ಘಾನಿಸ್ತಾನ ಪಾಕ್ ಸರ್ಕಾರದ ಶತ್ರುಗಳ ಜೊತೆ ಕೈಜೋಡಿಸ್ತಿದೆ ಅಂತ ಚರ್ಚೆ ಶುರುವಾಗಿದೆ. ನಂತರ ಮಾಧ್ಯಮವೊಂದಕ್ಕೆ ಸಂದರ್ಶನ ನೀಡಿರೋ ಮೋಹಿಬ್​​, ನಮ್ಮ ಗುಪ್ತಚರ ಮಾಹಿತಿ ಪ್ರಕಾರ ಸುಮಾರು 15 ಸಾವಿರ ತಾಲಿಬಾನಿಗಳು ಅಫ್ಘಾನಿಸ್ತಾನಕ್ಕೆ ಎಂಟ್ರಿ ಕೊಡ್ತಿದ್ದಾರೆ. ಅದೇ ರೀತಿ ಈಗಾಗಲೇ ಪಾಕಿಸ್ತಾನದಿಂದ 10 ಸಾವಿರಕ್ಕೂ ಹೆಚ್ಚು ತಾಲಿಬಾನಿಗಳು ಅಫ್ಘಾನಿಸ್ತಾನ ಗಡಿ ಪ್ರವೇಶಿಸಿಯಾಗಿದೆ. ತಾಲಿಬಾನಿಗಳಿಗೆ ಪಾಕಿಸ್ತಾನದಲ್ಲಿ ನೆಲೆ ನೀಡಲಾಗಿದೆ ಅಂತ ಕೂಡ ಆರೋಪಿಸಿದ್ದಾರೆ.

-masthmagaa.com

Contact Us for Advertisement

Leave a Reply