CAA ತಡೆಯಾಜ್ಞೆ ನಿರಾಕರಿಸಿದ ಸುಪ್ರೀಂ! ಕೇಂದ್ರಕ್ಕೆ 3 ವಾರಗಳ ಟೈಮ್‌!

masthmagaa.com:

ದೇಶದಲ್ಲಿ ಭಾರೀ ಚರ್ಚೆಯಲ್ಲಿರೋ ಪೌರತ್ವ ಕಾಯ್ದೆ ಅಥ್ವಾ CAA ತಡೆ ಕೋರಿ ಸಾಕಷ್ಟು ಅರ್ಜಿಗಳು ಸುಪ್ರೀಂ ಕೋರ್ಟ್‌ ಕದ ತಟ್ಟಿವೆ. ಇದೀಗ ಒಟ್ಟು 237 ಅರ್ಜಿಗಳ ವಿಚಾರಣೆ ನಡೆಸಿರೋ ಕೋರ್ಟ್‌ CAA ತಡೆಯಾಜ್ಞೆಗೆ ನಿರಾಕರಿಸಿದೆ. ಜೊತೆಗೆ ಕೇಂದ್ರ ಸರ್ಕಾರಕ್ಕೆ ನೋಟಿಸ್‌ ಜಾರಿ ಮಾಡಿ, ಈ ಅರ್ಜಿಗಳಿಗೆ ರೆಸ್ಪಾಂಡ್‌ ಮಾಡೋಕೆ 3 ವಾರಗಳ ಟೈಮ್‌ ನೀಡಿದೆ. ಅಂದ್ರೆ ಏಪ್ರಿಲ್‌ 08ರವರೆಗೆ ಸಮಯಾವಕಾಶ ನೀಡಿ CJI ಡಿವೈ ಚಂದ್ರಚೂಡ್‌ ಅವ್ರ ನೇತೃತ್ವದ ನ್ಯಾಯಪೀಠ ಆದೇಶ ಹೊರಡಿಸಿದೆ. ಅಲ್ದೇ ಈ ವಿಚಾರವಾಗಿ ಸುಪ್ರೀಂ ಕೋರ್ಟ್‌ನ ಮುಂದಿನ ವಿಚಾರಣೆಯನ್ನ ಏಪ್ರಿಲ್‌ 09ಕ್ಕೆ ಫಿಕ್ಸ್‌ ಮಾಡಲಾಗಿದೆ. ಅಂದ್ಹಾಗೆ CAA ವಿರುದ್ಧ ಸಲ್ಲಿಕೆಯಾಗಿರೋ ಅರ್ಜಿಗಳಿಗೆ ಪ್ರತಿಕ್ರಿಯೆ ನೀಡಲು ಕೇಂದ್ರ ಸರ್ಕಾರ ಸುಪ್ರೀಂ ಕೋರ್ಟ್‌ ಬಳಿ ಸ್ವಲ್ಪ ಟೈಮ್‌ ಕೊಡಿ ಅಂತ ಮನವಿ ಮಾಡ್ಕೊಂಡಿತ್ತು. ಕೇಂದ್ರ ಸರ್ಕಾರ ಪರವಾಗಿ ಕೋರ್ಟ್‌ ಮುಂದೆ ಹಾಜರಾಗಿರೋ ಸಾಲಿಸಿಟರ್‌ ಜನರಲ್‌ ತುಷಾರ್‌ ಮೆಹ್ತಾ, ʻCAA ಯಾವ್ದೇ ವ್ಯಕ್ತಿಯ ಪೌರತ್ವ ಕಸಿದುಕೊಳ್ಳೋದಿಲ್ಲ. ಈ ಅರ್ಜಿಗಳಿಗೆ ಪ್ರತಿಕ್ರಿಯೆ ನೀಡಲು ನಮಗೆ ಸಮಯಾವಕಾಶ ಕೊಡಿʼ ಅಂತ ಕೇಳಿದ್ರು. ಇದಕ್ಕೆ ರಿಯಾಕ್ಟ್‌ ಮಾಡಿರೋ CJI ಡಿವೈ ಚಂದ್ರಚೂಡ್‌ ಮೂರು ವಾರಗಳು ಟೈಮ್‌ ನೀಡಿ ಆದೇಶ ಹೊರಡಿಸಿದ್ದಾರೆ.

-masthmagaa.com

Contact Us for Advertisement

Leave a Reply