masthmagaa.com:

ಭಾರತದ ನಂಬರ್ ಒನ್ ಶ್ರೀಮಂತ, ಏಷ್ಯಾದ 2ನೇ ಶ್ರೀಮಂತ, ಜಗತ್ತಿನ 10ನೇ ಶ್ರೀಮಂತ, ಉದ್ಯಮಿ ಮುಕೇಶ್ ಅಂಬಾನಿ ಅವರ ಮುಂಬೈ ಮನೆ ಸಮೀಪ ನಿನ್ನೆ ಸ್ಫೋಟಕ ತುಂಬಿದ್ದ ಕಾರೊಂದು ಪತ್ತೆಯಾಗಿತ್ತು. ಅದರಲ್ಲಿ 20 ಜಿಲೆಟಿನ್​ ಕಡ್ಡಿಗಳು ಪತ್ತೆಯಾಗಿದ್ದವು, ಬೇರೆ ಬೇರೆ ನಂಬರ್​ ಪ್ಲೇಟ್​ಗಳು ಸಿಕ್ಕಿದ್ದವು. ಇದೀಗ ಆ ಕಾರಿನ ಒಳಗೆ ಮುಕೇಶ್​ ಅಂಬಾನಿ ಮತ್ತು ಅವರ ಪತ್ನಿ ನೀತಾ ಅಂಬಾನಿ ಉಲ್ಲೇಖಿಸಿದ್ದ ಬೆದರಿಕೆ ಪತ್ರ ಸಿಕ್ಕಿದೆ ಅಂತ ವರದಿಯಾಗಿದೆ. ಪತ್ರದಲ್ಲಿ ಓಪನ್​ ಥ್ರೆಟ್​ ಹಾಕಲಾಗಿದೆ.. ಈ ಕಾರಿನಲ್ಲಿ ಬಿಟ್ಟು ಹೋಗಿರೋ ಜಿಲೆಟಿನ್ ಕಡ್ಡಿಗಳನ್ನ ಅಸೆಂಬಲ್ ಮಾಡಿಲ್ಲ. ಅಂದ್ರೆ ಫಿಕ್ಸ್ ಮಾಡಿಲ್ಲ. ಆದ್ರೆ ನೆಕ್ಸ್ಟ್​ ಟೈಂ ಅದನ್ನ ಅಸೆಂಬಲ್ ಮಾಡ್ತೀವಿ ಅಂತ ಬೆದರಿಕೆ ಪತ್ರದಲ್ಲಿ ಬರೆಯಲಾಗಿದೆ. ಇನ್ನೊಂದು ವಿಚಾರ ಅಂದ್ರೆ, ಈ ಪತ್ರದಲ್ಲಿ ಸಾಕಷ್ಟು ಸ್ಪೆಲ್ಲಿಂಗ್ ಮಿಸ್ಟೇಕ್​ ಇದಿಯಂತೆ. ಬಹುಶಃ ಪತ್ರ ಬರೆದವರು ಹೆಚ್ಚು ಅಕ್ಷರಸ್ಥರಲ್ಲ ಅಥವಾ ಬೇಕು ಅಂತಾನೇ ಅಕ್ಷರಸ್ಥರಲ್ಲ ಅನ್ನೋದನ್ನ ತೋರಿಸಿಕೊಳ್ಳೋಕೆ ಹೀಗೆ ಮಾಡಿರಬಹುದು ಅಂತ ಪೊಲೀಸರು ಅಂದಾಜು ಮಾಡಿದ್ದಾರೆ. ಸಿಸಿ ಕ್ಯಾಮರಾಗಳಲ್ಲಿ ಸೆರೆಯಾಗಿರೋ ದೃಶ್ಯಗಳ ಪ್ರಕಾರ ಗುರುವಾರ ಬೆಳಗಿನಜಾವ 1 ಗಂಟೆ ಸುಮಾರಿಗೆ ಕಾರು ಬಂದು ನಿಂತಿದೆ. ಆದ್ರೆ ಬೆಳಗಿನಜಾವ 3 ಗಂಟೆಯಾದ್ರೂ ಅದರ ಚಾಲಕ ಹೊರ ಬಂದಿರಲಿಲ್ಲ ಅನ್ನೋದು ಗೊತ್ತಾಗಿದೆ. ಸದ್ಯ ಪೊಲೀಸರು ತನಿಖೆ ನಡೆಸುತ್ತಿದ್ದು, ಅಂಬಾನಿ ಮನೆಗೆ ಭದ್ರತೆ ಹೆಚ್ಚಿಸಲಾಗಿದೆ.

ದೇಶದಲ್ಲಿ Z+ ಭದ್ರತೆ ಹೊಂದಿರೋ ಏಕೈಕ ಬ್ಯುಸಿನೆಸ್​ಮನ್​ ಅಂದ್ರೆ ಮುಕೇಶ್ ಅಂಬಾನಿ. ಮುಂಬೈನಲ್ಲಿರೋ ಅವರ ‘ಆ್ಯಂಟಿಲಿಯಾ’ ಮನೆಯನ್ನ ಜಗತ್ತಿನ ಅತಿ ದುಬಾರಿ ಮತ್ತು ಐಷಾರಾಮಿ ಮನೆ ಅಂತಾನೇ ಹೇಳಲಾಗುತ್ತೆ. ಇದರ ಮೌಲ್ಯ 1 ಬಿಲಿಯನ್ ಡಾಲರ್. ಭಾರತದ ರೂಪಾಯಿ ಲೆಕ್ಕದಲ್ಲಿ 7,200 ಕೋಟಿ ರೂಪಾಯಿ. 27 ಅಂತಸ್ತಿನ ಈ ಕಟ್ಟಡದಲ್ಲಿ 3 ಹೆಲಿಪ್ಯಾಡ್​, ಹೈ ಸ್ಪೀಡ್​ ಎಲಿವೇಟರ್, ಥಿಯೇಟರ್, ಸ್ವಿಮ್ಮಿಂಗ್ ಪೂಲ್, ಸ್ನೋ ರೂಂ, ಬಾಲ್​ ರೂಂ.. ಹೀಗೆ ಎಲ್ಲವೂ ಇದೆ. 27 ಅಂತಸ್ತಿನ ಪೈಕಿ ಮೇಲಿನ 6 ಅಂತಸ್ತಿನಲ್ಲಿ ಭಾರತದ ಶ್ರೀಮಂತ ಕುಟುಂಬ ವಾಸಿಸುತ್ತೆ. ಈಗ ಇಂಥ ಮನೆ ಬಳಿಯೇ ಸ್ಫೋಟಕ ತುಂಬಿದ ಕಾರು ಪತ್ತೆಯಾಗಿರೋದು ಆತಂಕ ಸೃಷ್ಟಿಸಿದೆ.

-masthmagaa.com

Contact Us for Advertisement

Leave a Reply