ಸಚಿವರನ್ನು ನೇಮಿಸಿದ ತಾಲಿಬಾನ್! ರಕ್ಷಣಾ ಸಚಿವ ಯಾರು ಗೊತ್ತಾ?

masthmagaa.com:

ಅಫ್ಘಾನಿಸ್ತಾನ ಟೇಕೋವರ್ ಮಾಡ್ಕೊಂಡಿರೋ ತಾಲಿಬಾನಿಗಳು ಸರ್ಕಾರ ರಚನೆಯ ಮಾತುಕತೆಯಲ್ಲಿದ್ದಾರೆ. ಈ ನಡುವೆ ಕೆಲವೊಂದು ಪರಿಣತರನ್ನು ಹಣಕಾಸು, ಆಂತರಿಕ ಮತ್ತು ರಕ್ಷಣಾ ಇಲಾಖೆಯ ಕಾರ್ಯಕಾರಿ ಸಚಿವರನ್ನಾಗಿ ನೇಮಿಸಿದ್ದಾರೆ. ಅದ್ರೆ ಅಧಿಕೃತವಾಗಿ ಇನ್ನೂ ಅನೌನ್ಸ್​ ಮಾಡಿಲ್ಲ. ಆದ್ರೆ ಅಲ್ಲಿನ ನ್ಯೂಸ್ ಏಜೆನ್ಸಿ ಪಝ್​​ವೋಕ್ ಪ್ರಕಾರ, ಗುಲ್ ಅಘಾರನ್ನು ಹಣಕಾಸು ಸಚಿವರಾಗಿ, ಸದರ್ ಇಬ್ರಾಹಿಂರನ್ನು ಆಂತರಿಕ ಸಚಿವರಾಗಿ ಮತ್ತು ಕ್ಯೂಬಾದ ಗುವಾಂಟನಾಮೋದ ಅಮೆರಿಕದ ಜೈಲಿನಲ್ಲಿ ಬಂಧಿಸಲ್ಪಟ್ಟಿದ್ದ ಮುಲ್ಲಾ ಅಬ್ದುಲ್ ಖಾಯ್ಯುಮ್ ಝಾಕಿರ್​ರನ್ನು ರಕ್ಷಣಾ ಸಚಿವರಾಗಿ ನೇಮಿಸಲಾಗಿದೆ. ಈ ವಾರದಲ್ಲಿ ಪ್ರಮುಖ ಇಲಾಖೆಗಳಿಗೆ ಸಚಿವರನ್ನು ನೇಮಿಸಲಾಗುತ್ತೆ ಅಂತ ತಾಲಿಬಾನ್ ಮೂಲಗಳು ಕೂಡ ತಿಳಿಸಿವೆ.

-masthmagaa.com

Contact Us for Advertisement

Leave a Reply