ಹುಡುಗರು ಶಾಲೆಗಳಿಗೆ ಹಾಜರಾಗಬಹುದು ಎಂದ ತಾಲಿಬಾನ್​!

masthmagaa.com:

ಅಫ್ಘಾನಿಸ್ತಾನದಲ್ಲಿ ಇಂದಿನಿಂದ ಶಾಲೆಗಳು ಶುರುವಾಗಿವೆ. ಈ ಬಗ್ಗೆ ನಿನ್ನೆಯೇ ಹೇಳಿಕೆ ಬಿಡುಗಡೆ ಮಾಡಿರೋ ಶಿಕ್ಷಣ ಇಲಾಖೆ, ನಾಳೆಯಿಂದ ಹುಡುಗರಿಗೆ ಶಾಲೆ ಶುರುವಾಗುತ್ತೆ ಅಂತ ಹೇಳಿದೆ. ಆದ್ರೆ ಹುಡುಗಿಯರು ಶಾಲೆಗಳಿಗೆ ಹೋಗ್ಬೋದಾ..? ಇಲ್ವಾ..? ಏನು ಅಂತ ಮಾಹಿತಿ ನೀಡಿಲ್ಲ. ತಾಲಿಬಾನಿಗಳು ಅಫ್ಘಾನಿಸ್ತಾನವನ್ನು ಕಂಪ್ಲೀಟಾಗಿ ವಶಕ್ಕೆ ಪಡೆದ ಬಳಿಕ ದೇಶದ ಬಹುತೇಕ ಎಲ್ಲಾ ಶಿಕ್ಷಣ ಸಂಸ್ಥೆಗಳು ಬಂದ್ ಆಗಿವೆ. ಕೆಲವೊಂದು ಶಾಲೆಗಳು ತೆರೆದ್ರೂ 6ನೇ ತರಗತಿವರೆಗಿನ ಹೆಣ್ಮಕ್ಕಳು ಮತ್ತು ಯುನಿವರ್ಸಿಟಿಯ ವಿದ್ಯಾರ್ಥಿನಿಯರು ತಾಲಿಬಾನ್ ರೂಲ್ಸ್ ಪ್ರಕಾರ ಕ್ಲಾಸ್​​ಗೆ ಹಾಜರಾಗ್ತಿದ್ದಾರೆ. ಆದ್ರೆ ಹೈಸ್ಕೂಲ್ ಹುಡುಗಿಯರ ಕ್ಲಾಸ್​​ಗಳಿಗೆ ಹಾಜರಾಗ್ತಿಲ್ಲ. ಇವರ ಬಗ್ಗೆ ತಾಲಿಬಾನಿಗಳು ಕೂಡ ಯಾವುದೇ ಮಾಹಿತಿ ನೀಡಿಲ್ಲ. ಹೀಗಾಗಿ ಗೊಂದಲ ಮುಂದುವರಿದಿದೆ.

-masthmagaa.com

 

Contact Us for Advertisement

Leave a Reply