ಸ್ನೇಹಿತನಿಗೆ 12.5 ಲಕ್ಷದ B.M.W ಬೈಕ್‌ ಗಿಫ್ಟ್‌ ಕೊಟ್ಟ ತಮಿಳು ನಟ ಅಜಿತ್‌ !

masthmagaa.com:

ಅಜಿತ್‌ ಕುಮಾರ್‌ ಸದ್ಯ ಬೈಕ್‌ ಟ್ರಿಪ್‌ ಮಾಡೋದ್ರಲ್ಲಿ ಬ್ಯುಸಿ ಇದಾರೆ. ಮೊನ್ನೆ ಅಷ್ಟೇ ಹೊಸ ಮೋಟೋ ಸೈಕಲ್‌ ಎಂಬ ಕಂಪನಿಯನ್ನ ಶುರು ಮಾಡಿ ಸುದ್ದಿಯಾಗಿದ್ರು. ಭಾರತದ ಮಾತ್ರ ಅಲ್ಲದೇ ನೇಪಾಳ, ಭೂತಾನ್ ಮತ್ತು ಯುರೋಪ್‌ನ ಕೆಲವು ಭಾಗಗಳನ್ನು ಬೈಕ್‌ ರೈಡ್‌ನಲ್ಲೇ ನೋಡಿದ್ದಾರೆ. ಅಷ್ಟೆಲ್ಲಾ ಬೈಕ್‌ ಕ್ರೇಜ್‌ ಇರುವಂತ ನಟ ಇದೀಗ ಮತ್ತೊಮ್ಮೆ ಸುದ್ದಿಯಾಗಿದ್ದಾರೆ.
ತನ್ನ ಜೊತೆಗೆ ಬಂದಿದ್ದ ಸಹ ಸವಾರನಿಗೆ 12.5 ಲಕ್ಷದ ಬೈಕ್‌ ಅನ್ನ ಗಿಫ್ಟ್‌ ಕೊಟ್ಟಿದ್ದಾರೆ.

ಮೇ ತಿಂಗಳಿನಲ್ಲಿ ಅಜಿತ್‌ ಅವರು ನೇಪಾಳ ಮತ್ತು ಭೂತಾನ್‌ ಪ್ರವಾಸವನ್ನ ಸಂಪೂರ್ಣವಾಗಿ ಮುಗಿಸಿದ್ದಾರೆ. ಈ ಪ್ರವಾಸಕ್ಕೆ ಸುಗತ್ ಸತ್ಪತಿ ಅವರು ಅಜಿತ್‌ ಅವರಿಗೆ ಟ್ರಿಪ್‌ ಪ್ಲಾನಿಂಗ್‌ಗೆ ಸಹಾಯ ಮಾಡಿದ್ರಂತೆ. ಹಾಗಾಗಿ ಅಜಿತ್‌ ಕುಮಾರ್‌ ಸುಗತ್ ಸತ್ಪತಿ ಅವರಿಗೆ 12.5 ಲಕ್ಷ ಮೌಲ್ಯದ ಬಿ.ಎಂ.ಬ್ಲ್ಯೂ. ಬೈಕ್‌ ಅನ್ನ ಗಿಫ್ಟ್‌ ಆಗಿ ನೀಡಿದ್ದಾರೆ. ನವೆಂಬರ್‌ ತಿಂಗಳಲ್ಲಿ ಇವರಿಬ್ಬರೂ ಇನ್ನೊಂದು ಬೈಕ್‌ ರೈಡ್‌ಗೆ ರೆಡಿ ಆಗ್ತಾ ಇದಾರಂತೆ. ಇದನ್ನ ಸುಗತ್ ಸತ್ಪತಿ ತಮ್ಮ ಇನ್‌ಸ್ಟಾಗ್ರಾಮ್‌ ಖಾತೆಯಲ್ಲಿ ಫೋಟೋ ಹಂಚಿಕೊಂಡಿದ್ದಾರೆ. ಹಾಗೂ ಅಜಿತ್‌ ಕುಮಾರ್‌ ಬಗ್ಗೆಒಂದಿಷ್ಟು ಸಾಲುಗಳನ್ನೂ ಸಹ ಬರೆದಿದ್ದಾರೆ.

” 2022 ನನಗೆ ತುಂಬಾ ಖುಷಿಯಾದ ವರ್ಷ. ಯಾಕಂದ್ರೆ ಸುಪರ್‌ ಸ್ಟಾರ್‌ ಅಜಿತ್‌ ಕುಮಾರ್‌ ಅವರನ್ನ ಭೇಟಿ ಆದ ವರ್ಷ. ಅವರಿಗೂ ಕೂಡ ಬೈಕ್‌ ಕ್ರೇಜ್‌ ತುಂಬಾನೇ ಇದೆ. ಡ್ಯೂಕ್ 390 ಬೈಕ್‌ನಲ್ಲಿ ನಾವು ಸಂಪೂರ್ಣ ಪ್ರವಾಸವನ್ನ ಮಾಡಿದ್ದೆವು. ಇವರ ಜೊತೆ ಹೋದಾಗ ನನಗೆ ಅನೇಕ ಮರೆಯಲಾಗದ ಖುಷಿ ಸಂಗತಿಗಳು ಇದೆ. ಆ ಅದ್ಭುತವಾದ ಮೂಮೆಂಟ್‌ಗಳಿಗೆ ನಾನೇ ಸಾಕ್ಷಿ” ಅಂತ ಬರೆದಿದ್ದಾರೆ.

-masthmagaa.com

Contact Us for Advertisement

Leave a Reply