135 ದಿನಗಳಿಂದ ಮೊಬೈಲ್ ಟವರ್ ಏರಿ ಪ್ರತಿಭಟನೆ.. ಕೊನೆಗೂ ಬೇಡಿಕೆ ಈಡೇರಿಕೆ!

masthmagaa.com:

ಪಂಜಾಬ್ ನ ಪಟಿಯಾಲಾದಲ್ಲಿ 135 ದಿನಗಳಿಂದ 200 ಮೀಟರ್ ಎತ್ತರದ ಮೊಬೈಲ್ ಟವರ್ ಏರಿ ಕೂತು ಪ್ರತಿಭಟನೆ ಮಾಡ್ತಿದ್ದ ವ್ಯಕ್ತಿಯನ್ನ ಕೆಳಗಿಳಿಸಲಾಗಿದೆ. ಕಡೆಗೂ ಆತನ ಬೇಡಿಕೆ ಈಡೇರಿದ ಬಳಿಕವೇ ಕೆಳಗೆ ಇಳಿದಿದ್ದಾರೆ ಈ ಮನ್ಶ. ಪಂಜಾಬ್ ಟೀಚರ್ ಎಲಿಜಿಬಿಲಿಟಿ ಟೆಸ್ಟ್ ಪಾಸ್ ಆಗಿಯೂ ನಿರುದ್ಯೋಗಿಗಳಾಗಿ ಉಳಿದಿರೋ ಅಭ್ಯರ್ಥಿಗಳು ಪ್ರತಿಭಟನೆ ನಡೆಸ್ತಿದ್ರು. ಅದರಲ್ಲಿ ಈ ಸುರಿಂದರ್ ಪಾಲ್ ಕೂಡ ಒಬ್ರು. ನಾರ್ಮಲ್ ಪ್ರಭಟನೆಗೆಲ್ಲ ಇವ್ರು ಬಗ್ಗಲ್ಲ ಅಂತಾಅರಿತ ಈ ಸುರಿಂದರ್ ಮೊಬೈಲ್ ಟವರ್ ಏರಿ ಕೂತು ಬಿಟ್ರು. ಕಳೆದ 135 ದಿನಗಳಿಂದ ಅಲ್ಲೇ ಇದ್ರು. ಈಗ ಫೈನಲಿ ಸರ್ಕಾರ ಇವರ ಬೇಡಿಕೆ ಈಡೇರಿಕೆಗೆ ಒಪ್ಪಿದೆ. 6000ಕ್ಕೂ ಅಧಿಕ ಶಿಕ್ಷಕರ ನೇಮಕಾತಿಗೆ ಮುಂದಾಗಿದೆ. ಹೀಗಾಗಿ ಕಡೆಗೂ ಸುರಿಂದರ್ ಕೆಳಗೆ ಇಳಿದು ಬಂದಿದ್ದಾರೆ.

-masthmagaa.com

Contact Us for Advertisement

Leave a Reply