“ದಿ ಕೇರಳ ಸ್ಟೋರಿ” ಸಿನಿಮಾ ತಂಡಕ್ಕೆ ಕೆಟ್ಟ ಸುದ್ದಿ ಕೊಟ್ಟ “ದಿ ಕಾಶ್ಮೀರ್‌ ಫೈಲ್ಸ್‌” ನಿರ್ದೇಶಕ ವಿವೇಕ್‌ ಅಗ್ನಿಹೋತ್ರಿ !

masthmagaa.com:

ದಿ ಕಾಶ್ಮೀರ್‌ ಫೈಲ್ಸ್‌ ನಿರ್ದೇಶಕ ವಿವೇಕ್‌ ಅಗ್ನಿಹೋತ್ರಿ “ದಿ ಕೇರಳ ಸ್ಟೋರಿ” ಬಗ್ಗೆ ಶಾಕಿಂಗ್‌ ಹೇಳಿಕೆ ಒಂದನ್ನ ನೀಡಿದ್ದಾರೆ. ಇಂದು (ಮೇ 6ಕ್ಕೆ ) ಟ್ವಿಟರ್‌ನಲ್ಲಿ ಸುದೀರ್ಘ ಟಿಪ್ಪಣಿ ಬರೆದು ಚಿತ್ರತಂಡಕ್ಕೆ ಒಂದು ಕೆಟ್ಟ ಸುದ್ದಿಯನ್ನ ಕೊಟ್ಟಿದ್ದಾರೆ.

” ಚಿತ್ರದ ನಿರ್ಮಾಪಕ ವಿಪುಲ್ ಶಾ, ನಿರ್ದೇಶಕ ಸುದೀಪ್ತೋ ಸೇನ್ ಮತ್ತು ನಟಿ ಅದಾ ಶರ್ಮಾ ಅವರ ಮುಂದಿನ ಜೀವನ ಹಿಂದೆ ಇದ್ದಂತೆ ಇರೋದಿಲ್ಲ. ಊಹಿಸಲಾಗದಷ್ಟು ದ್ವೇಷವನ್ನ ನೀವು ಸ್ವೀಕರಿಸ್ತೀರಾ, ಅದೆಲ್ಲ ನಿಮಗೆ ಉಸಿರುಗಟ್ಟಿಸತ್ತೆ, ಡಿಸ್ಟರ್ಬ್‌ ಆಗ್ತೀರಾ, ಮತ್ತು ಡಿಪ್ರೆಷನ್‌ಗೂ ಹೋಗ್ತೀರಾ” ಅಂತ ಎಚ್ಚರಿಸಿದ್ದಾರೆ.

“ಜನರ ನಂಬಿಕೆ, ಪಕ್ಷಪಾತಗಳನ್ನ ಪ್ರಶ್ನಿಸುವಂತೆ ಪ್ರೋತ್ಸಾಹ ಕೊಡುವಂತೆ ಮಾಡೋದೆ ಸಿನಿಮಾದ ಎಕೈಕ ಗುರಿ. ಇಂಥ ಮಾತನ್ನ ನಾನು ಶ್ರೇಷ್ಠ ಚಿತ್ರ ನಿರ್ಮಾಪಕರ ಹತ್ತಿರ ಕೇಳ್ತಾನೇ ಬೆಳೆದಿದ್ದೇನೆ. ಸಿನಿಮಾ ಸಮಾಜದ ವಾಸ್ತವತೆಯನ್ನ ಬಿಂಬಿಸತ್ತೆ ಅಂತ ಕೇಳಿದವನು ನಾನು. ಸಿನಿಮಾದಲ್ಲಿ ಹಳೇ ದೇವರುಗಳನ್ನ ನಾಶ ಮಾಡಿ ಹೊಸ ದೇವರುಗಳನ್ನ ಸೃಷ್ಠಿ ಮಾಡಬೇಕು ಅಂತ ನಾನು ಹೇಳಿದ್ದೆ. ಈಗಿನ ಕಾಲದಲ್ಲಿ ಮಾಧ್ಯಮ ಮತ್ತು ರಾಜಕೀಯ ಮಾಡದ ಕೆಲಸವನ್ನ ಸಿನಿಮಾಗೆ ಮಾಡೋ ಶಕ್ತಿ ಇದೆ ಅಂತ ನಾನು ನಂಬಿದೀನಿ. ಸಿನಿಮಾ ಎಂಬುದು ಅಹಿತಕರ ಘಟನೆಗಳು, ಇತಿಹಾಸ, ಹೋರಾಟ, ಯುದ್ಧ ಇವುಗಳನ್ನ ಸಮಾಜಕ್ಕೆ ತೋರಿಸುವ ಶಕ್ತಿ ಆಗಬಹುದು. ಆದರೆ ಭಾರತದಲ್ಲಿ ಇಂತಹ ಸಿನಿಮಾ ಮಾಡೋದು ಸುಲಭವಲ್ಲ. ಎ ಟ್ರಾಫಿಕ್ ಜಾಮ್, ದಿ ತಾಷ್ಕೆಂಟ್ ಫೈಲ್ಸ್ ಮತ್ತು ದಿ ಕಾಶ್ಮೀರ್ ಫೈಲ್ಸ್‌ನಂತಹ ಸಿನಿಮಾಗಳನ್ನ ಮಾಡಿ ದೈಹಿಕವಾಗಿ, ಮಾನಸಿಕವಾಗಿ, ವೃತ್ತಿಪರವಾಗಿ, ಸಾಮಾಜಿಕವಾಗಿ ಹಲ್ಲೆಗೆ ಒಳಗಾಗಿದ್ದೇನೆ. ಇದಷ್ಟೇ ಅಲ್ಲದೇ ಭಾರತದ ಸಾಧನೆಯನ್ನ ಕೊಂಡಾಡುವ “ದಿ ವ್ಯಾಕ್ಸಿನ್‌ ವಾರ್‌ ” ಚಿತ್ರ ಕೂಡ ನಿರಂತರವಾಗಿ ದಾಳಿಗೆ ಒಳಗಾಗ್ತಾ ಇದೆ. ಈ ಚಿತ್ರ ಬಿಡುಗಡೆ ಆದಾಗ ಅವರು ನನ್ನ ಮೇಲೆ ದ್ವೇಷ ಸಾಧಿಸ್ತಾರೆ. ಯಾಕಂದ್ರೆ ಭಾರತ ಯಶಸ್ವಿ ಆಗೋದನ್ನ ಅವರು ಬಯಸೋದಿಲ್ಲ. ಸತ್ಯವನ್ನ ಹೇಳಬಾರದು, ಭಾರತವನ್ನ ಯಶಸ್ವಿ ಅಂತ ತೋರಿಸಬಾರದು ಅನ್ನೋದು ಅವರ ಕಲ್ಪನೆ.” ಅಂತ ಹೇಳಿದ್ದಾರೆ.

“ದಿ ಕೇರಳ ಸ್ಟೋರಿ” ಚಿತ್ರತಂಡದ ಪ್ರಯತ್ನಕ್ಕೆ ಮತ್ತು ಧೈರ್ಯಕ್ಕೆ ನಾನು ಅಭಿನಂದನೆ ಸಲ್ಲಿಸ್ತೀನಿ. ಈಗ ಇದ್ದ ಹಾಗೇ ಮುಂದೆ ಇರೋದಿಲ್ಲ ಅಂತ ಕೂಡ ಕೆಟ್ಟ ಸುದ್ದಿಯನ್ನ ಕೊಡ್ತಾ ಇದೀನಿ. ಆದರೆ ಒಂದನ್ನ ನೆನಪಿಡಿ, ದೇವರು ಬದಲಾವಣೆಯ ಹೊಣೆಯನ್ನ ನಿಮ್ಮ ಭುಜದ ಮೇಲೆ ಹಾಕಿರಬಹುದು. ನೀವು ಸಿನಿಮಾದ ಮುಖಾಂತರ ಧರ್ಮದ ಹಾದಿಯಲ್ಲಿ ಹೋಗ್ತಾ ಇದೀರಾ ಅಂದ್ರೆ ಅದನ್ನ ಯಾವತ್ತೂ ನಿಲ್ಲಿಸಬೇಡಿ. ಇಂಡಿಯಾದ ಕತೆಗಾರರ ಸಮುದಾಯ ಬೆಳೆಯಬೇಕು, ಹೊಸ ಮತ್ತು ಇಂಡಿಯಾದ ಪ್ರತಿಭಾವಂತ ಕಥೆಗಾರರಿಗೆ ಸಹಾಯ ಮಾಡಿ, ಭಾರತದ ಮಾರ್ಗದರ್ಶಕರಾಗಿ, ಗುರುದೇವ್‌ ಅವರ “ಏಕಾಂಗಿಯಾಗಿ ಮುನ್ನಡೆಯಿರಿ” ಎಂಬ ಸಾಲನ್ನ ಮರೆಯಬೇಡಿ” ಅಂತ ಟ್ವೀಟ್‌ ಮಾಡಿದ್ದಾರೆ.

-masthmagaa.com

Contact Us for Advertisement

Leave a Reply