72 ಗಂಟೆಯಲ್ಲಿ ಭಾರತಕ್ಕೆ ಬರುತ್ತೇನೆ: ರಾಣಾ ದಗ್ಗುಬಾಟಿ ಸಂದೇಶ

ಬಾಹುಬಲಿ ಬಲ್ಲಾಳದೇವ ರಾಣಾ ದಗ್ಗುಬಾಟಿ ಇನ್‍ಸ್ಟಾಗ್ರಾಂನಲ್ಲಿ ಮತ್ತೊಂದು ಫೋಟೋ ಶೇರ್ ಮಾಡಿದ್ದಾರೆ. ಇತ್ತೀಚೆಗೆ ತುಂಬಾ ತೆಳ್ಳಗಿರುವ ತಮ್ಮ ಫೋಟೋವೊಂದನ್ನು ರಾಣಾ ಶೇರ್ ಮಾಡಿದ್ದರು. ಇದನ್ನು ಕಂಡ ಅಭಿಮಾನಿಗಳು ಅರೆ ನಿಮಗೆ ಏನಾಗಿದೆ..? ಆರೋಗ್ಯ ಚೆನ್ನಾಗಿದ್ಯಾ ಅಂತೆಲ್ಲಾ ಪ್ರಶ್ನೆಗಳ ಸುರಿಮಳೆಗೈದಿದ್ರು. ಇದ್ರ ಬೆನ್ನಲ್ಲೇ ಕಾರಿನಲ್ಲಿ ಕುಳಿತಿರೋ ಮತ್ತೊಂದು ಫೋಟೋ ಶೇರ್ ಮಾಡಿರುವ ರಾಣಾ ದಗ್ಗುಬಾಟಿ, ಎಲ್ಲಾ ಸರಿ ಇದೆ. ಆನ್ ಲೈನ್‍ಗೆ ಮರಳಿದ್ದೇನೆ. ಇನ್ನು 72 ಗಂಟೆಗಳಲ್ಲಿ ಭಾರತಕ್ಕೆ ಮರಳುತ್ತೇನೆ ಅಂತ ಹೇಳಿದ್ದಾರೆ. ಆದ್ರೆ ಅಷ್ಟು ತೆಳ್ಳಗಾಗಿರೋದು ಯಾಕೆ ಅನ್ನೋ ಅಭಿಮಾನಿಗಳ ಪ್ರಶ್ನೆಗೆ ರಾಣಾ ಉತ್ತರಿಸಿಲ್ಲ. ಕಳೆದ ಜುಲೈನಲ್ಲಿ ರಾಣಾ ಅವರು ಅನಾರೋಗ್ಯದಿಂದ ಬಳಲುತ್ತಿದ್ದರು ಎಂಬ ಸುದ್ದಿ ಕೇಳಿ ಬಂದಿತ್ತು.

https://www.instagram.com/p/B3IlMvMBZ5f/?utm_source=ig_web_copy_link

Contact Us for Advertisement

Leave a Reply