ಅಮೆರಿಕ – ಚೀನಾ ಕಿರಿಕ್‌.. ಕಿಮ್‌ ಜೊತೆ ಜಿನ್‌ಪಿಂಗ್‌ ಫ್ರೆಂಡ್ಶಿಪ್‌!

masthmagaa.com:

ಇತ್ತೀಚೆಗೆ ಅಮೆರಿಕ ಮತ್ತು ಚೀನಾ ನಡುವೆ ಉನ್ನತ ಮಟ್ಟದ ಸಭೆ ನಡೆದು, ಬರೀ ಆರೋಪ- ಪ್ರತ್ಯಾರೋಪ ಮಾಡ್ಕೊಂಡು ಸುಮ್ನಾಗಿದ್ರು. ಜಗಳದಲ್ಲೇ ಮಾತುಕತೆ ಅಂತ್ಯವಾಗಿತ್ತು. ಅದ್ರ ಬೆನ್ನಲ್ಲೇ ಉತ್ತರ ಕೊರಿಯಾ ಮತ್ತು ಚೀನಾ ಹತ್ತಿರವಾಗ್ತಿವೆ. ಹತ್ತಿರಾನೇ ಇವೆ.. ಇದೀಗ ತಮ್ಮ ಸಂಬಂಧವನ್ನು ಮತ್ತಷ್ಟು ವೃದ್ದಿಸಿಕೊಳ್ಳಲು ಉಭಯ ದೇಶಗಳು ಮುಂದಾಗಿವೆ. ಹೀಗಾಗಿಯೇ ಉತ್ತರ ಕೊರಿಯಾದ ಕಿಮ್ ಜಾಂಗ್ ಉನ್ ಮತ್ತು ಚೀನಾದ ಶಿ ಜಿನ್‌ ​ಪಿಂಗ್ ಪರಸ್ಪರ ಸಂದೇಶ ರವಾನಿಸಿಕೊಂಡಿದ್ದಾರೆ.

ತಮ್ಮ ವಿರುದ್ಧದ ಶಕ್ತಿಗಳ ವಿರುದ್ಧ ಏಕತೆ ಮತ್ತು ಪರಸ್ಪರ ಸಹಕಾರಕ್ಕೆ ಕಿಮ್ ಜಾಂಗ್ ಉನ್ ಕರೆ ಕೊಟ್ಟಿದ್ದಾರೆ. ಅದೇ ರೀತಿ ಶಿ ಜಿನ್​ಪಿಂಗ್ ಕೂಡ ಉಭಯ ದೇಶಗಳ ನಡುವಿನ ಮೈತ್ರಿ ದೊಡ್ಡ ಆಸ್ತಿ ಇದ್ದಂತೆ.. ಪೆನಿನ್ಸುಲಾದಲ್ಲಿ ಶಾಂತಿ ಮತ್ತು ಸ್ಥಿರತೆಗೆ ಸಹಕರಿಸೋದಾಗಿ ಭರವಸೆ ನೀಡಿದ್ದಾರೆ. ಜೊತೆಗೆ ಉಭಯದೇಶಗಳ ಜನತೆಗೆ ಉತ್ತಮ ಜೀವನ ನೀಡಲು ಕೂಡ ಉಭಯ ನಾಯಕರು ದೃಢಸಂಕಲ್ಪ ಮಾಡಿದ್ದಾರೆ. ಕೊರೋನಾ ಬಳಿಕ ಉತ್ತರ ಕೊರಿಯಾ ಹೊರದೇಶಗಳ ಜೊತೆಗೆ ಕಂಪ್ಲೀಟಾಗಿ ಗಡಿ ಬಂದ್ ಮಾಡಿಕೊಂಡಿತ್ತು. ಇದ್ರಿಂದಾಗಿ ವಸ್ತುಗಳ ಆಮದು ಇಲ್ಲದೇ ತುಂಬಾ ತೊಂದ್ರೆಯಾಗಿತ್ತು. ಇದೀಗ ಉತ್ತರ ಕೊರಿಯಾಗೆ ಅತಿ ಅಗತ್ಯವಾಗಿ ಬೇಕಾಗಿರುವ ಆಹಾರ ಮತ್ತು ಗೊಬ್ಬರವನ್ನು ನೀಡೋದಾಗಿ ತಿಳಿಸಿದೆ. ಅಮೆರಿಕ ಜೊತೆ ಅಲಾಸ್ಕಾದಲ್ಲಿ ನಡೆದ ಸಭೆ ಬೆನ್ನಲ್ಲೇ ಕಿಮ್ ಮತ್ತು ಜಿನ್​ಪಿಂಗ್ ಸಂದೇಶ ರವಾನೆ ಸಾಕಷ್ಟು ಮಹತ್ವ ಪಡ್ಕೊಂಡಿದೆ.

-masthmagaa.com

Contact Us for Advertisement

Leave a Reply