masthmagaa.com:

ಸುಶಾಂತ್ ಸಿಂಗ್ ರಜಪೂತ್​ ಸಾವಿನ ಪ್ರಕರಣ, ಬಾಲಿವುಡ್​ನಲ್ಲಿ ಡ್ರಗ್ಸ್​ ಮಾಫಿಯಾ, ಕಂಗನಾ ರನಾವತ್ ವಿರುದ್ಧ ಯುದ್ಧ, ನೌಕಾಪಡೆಯ ಮಾಜಿ ಅಧಿಕಾರಿಯೊಬ್ಬರ ಮೇಲೆ ಮಾರಣಾಂತಿಕ ಹಲ್ಲೆ ಸೇರಿದಂತೆ ಸಾಲು ಸಾಲು ಪ್ರಕರಣಗಳಲ್ಲಿ ಮಹಾರಾಷ್ಟ್ರ ಸರ್ಕಾರದ ವಿರುದ್ಧ ಗಂಭೀರ ಆರೋಪ, ಆಕ್ರೋಶಗಳು ವ್ಯಕ್ತವಾಗಿದೆ. ಮುಂಬೈನಲ್ಲಿ ಕಾನೂನು ಸುವ್ಯವಸ್ಥೆ ಸಂಪೂರ್ಣವಾಗಿ ಹದಗೆಟ್ಟಿದೆ ಅನ್ನೋ ಮಾತುಗಳು ಕೇಳಿ ಬರ್ತಿವೆ. ಈ ಬಗ್ಗೆ ಇಷ್ಟುದಿನ ಏನೂ ಮಾತನಾಡದೆ ಸುಮ್ಮನಾಗಿದ್ದ ಮಹಾರಾಷ್ಟ್ರ ಸಿಎಂ ಉದ್ಧವ್ ಠಾಕ್ರೆ ಮೌನ ಮುರಿದಿದ್ದು, ಇದೆಲ್ಲದರ ಹಿಂದೆ ರಾಜಕೀಯ ಪಿತೂರಿ ನಡೀತಿದೆ ಎಂದಿದ್ದಾರೆ.

‘ಕೊರೋನಾ ಹಾವಳಿ ಮುಗಿದಿದೆ ಅಂತ ಕೆಲವರು ಅಂದುಕೊಂಡಿದ್ದು ಮತ್ತೆ ತಮ್ಮ ರಾಜಕೀಯವನ್ನು ಪ್ರಾರಂಭಿಸಿದ್ದಾರೆ. ನಾನು ರಾಜಕೀಯದ ಬಗ್ಗೆ ಮಾತನಾಡುವುದಿಲ್ಲ. ಆದ್ರೆ ಮಹಾರಾಷ್ಟ್ರದ ಹೆಸರನ್ನು ಕೆಡಿಸಲು ಪಿತೂರಿ ನಡೆಯುತ್ತಿದೆ. ನಾನು ಮೌನವಾಗಿದ್ದೀನಿ ಅಂದ್ರೆ ಅದರರ್ಥ ನನ್ನ ಬಳಿ ಉತ್ತರಗಳಿಲ್ಲ ಅಂತಲ್ಲ’ ಅಂತ ಉದ್ಧವ್ ಠಾಕ್ರೆ ಸಿಡಿದೆದ್ದಿದ್ದಾರೆ.

ಇನ್ನು ಹಲ್ಲೆಗೊಳಗಾದ ನೌಕಾಪಡೆಯ ಮಾಜಿ ಅಧಿಕಾರಿ ಮದನ್ ಶರ್ಮಾ ಅವರು ಉದ್ಧವ್ ರಾಜೀನಾಮೆಗೆ ಆಗ್ರಹಿಸಿದ್ದಾರೆ. ‘ಸರ್ಕಾರವನ್ನು ನಡೆಸಲು ಸಾಧ್ಯವಾಗದಿದ್ದರೆ ರಾಜೀನಾಮೆ ನೀಡಿ. ಮಹಾರಾಷ್ಟ್ರದಲ್ಲಿ ಕಾನೂನು ಸುವ್ಯವಸ್ಥೆ ಕಾಪಾಡುವ ಸರ್ಕಾರವನ್ನು ಜನರು ಆಯ್ಕೆ ಮಾಡಲಿ’ ಅಂತ ಮದನ್ ಶರ್ಮಾ ಹೇಳಿದ್ದಾರೆ.

-masthamagaa.com

Contact Us for Advertisement

Leave a Reply