ಭಾರತದ ವಿಭಜನೆ ತಪ್ಪು ಅಂತ ಹೇಳುವ ಪಾಕ್‌ ಜನ ಯಾರು ಸಂತೋಷವಾಗಿಲ್ಲ: RSS ಮುಖ್ಯಸ್ಥ

masthmagaa.com:

ದೇಶಕ್ಕೆ ಸ್ವಾತಂತ್ರ್ಯ ಬಂದು 7 ದಶಕಗಳೇ ಕಳೆದಿದ್ದರೂ, ಪಾಕಿಸ್ತಾನದಲ್ಲಿನ ಜನ ಅತೃಪ್ತಿ ಹೊಂದಿದ್ದಾರೆ. ದೇಶ ವಿಭಜನೆಯಾಗಿದ್ದು ತಪ್ಪು ಅನ್ನೋ ಅಭಿಪ್ರಾಯ ಅವ್ರಲ್ಲಿಯೂ ಇದೆ ಅಂತ RSS ಮುಖ್ಯಸ್ಥ ಮೋಹನ್ ಭಾಗ್ವತ್ ಹೇಳಿದ್ದಾರೆ. ಮಧ್ಯಪ್ರದೇಶದ ಭೋಪಾಲ್‌ನಲ್ಲಿ ನಡೆದ ಕ್ರಾಂತಿಕಾರಿ ಹೇಮು ಕಲಾನಿ ಅವ್ರ ಜನ್ಮದಿನಾಚರಣೆಯ ಕಾರ್ಯಕ್ರಮದಲ್ಲಿ ಮೋಹನ್ ಭಾಗ್ವತ್ ಈ ರೀತಿ ಹೇಳಿದ್ದಾರೆ. ದೇಶ ಇಬ್ಭಾಗವಾಗೋದಕ್ಕೂ ಮೊದಲು ಇದು ಅಂದ್ರೆ ಪಾಕ್ ಭಾರತವಾಗಿತ್ತು. ದೇಶದಿಂದ ಹೊರ ಹೋಗಿರೋರು ಈಗಲಾದರೂ ಶಾಂತಿಯಿಂದ ಸಂತೋಷದಿಂದ ಇದಾರಾ? ಇಲ್ಲ ಅವರಲ್ಲಿ ನೋವಿದೆ ಅಂತ ಭಾಗ್ವತ್ ಹೇಳಿದ್ದಾರೆ. ಭಾರತ ಪಾಕ್ ಮೇಲೆ ದಾಳಿ ಮಾಡ್ಬೇಕು ಅಂತ ನಾನು ಹೇಳಲ್ಲ. ನಾವು ಮತ್ತೊಬ್ಬರ ಮೇಲೆ ದಾಳಿ ನಡೆಸುವ ಸಂಸ್ಕೃತಿಗೆ ಸೇರಿದವರಲ್ಲ. ಆದ್ರೆ ನಾವು ನಮ್ಮ ಆತ್ಮರಕ್ಷಣೆಗಾಗಿ ತಕ್ಕ ಪ್ರತ್ಯುತ್ತರ ನೀಡ್ತೀವಿ ಅಷ್ಟೆ ಅಂತ ಸರ್ಜಿಕಲ್ ಸ್ಟ್ರೈಕ್ ಉಲ್ಲೇಖಿಸಿ ಮೋಹನ್ ಭಾಗ್ವತ್ ಹೇಳಿದ್ದಾರೆ. ಅಂದ್ಹಾಗೆ ಈ ಕಾರ್ಯಕ್ರಮದಲ್ಲಿ ದೇಶದ ವಿವಿಧ ಪ್ರದೇಶಗಳಿಂದ ಸಿಂಧಿ ಜನಾಂಗದವ್ರು ಭಾಗಿಯಾಗಿದ್ದರು ಎನ್ನಲಾಗಿದೆ.

-masthmagaa.com

Contact Us for Advertisement

Leave a Reply