ಶಿವಮೊಗ್ಗ: ಪಾಟ್‌ನಲ್ಲಿ ಗಾಂಜಾ ಬೆಳೆದ ಭಾವಿ ವೈದ್ಯರು

masthmagaa.com:

ಮನೆಯ ರೂಮನಲ್ಲೇ ಪಾಟ್‌ಗಳಲ್ಲಿ ಗಾಂಜಾ ಬೆಳೆದು ಮಾರಾಟ ಹಾಗೂ ಸೇವನೆ ಮಾಡ್ತಿದ್ದ ಎರಡು ಪ್ರತ್ಯೇಕ ಪ್ರಕರಣಗಳಲ್ಲಿ ಐವರು ವೈದ್ಯಕೀಯ ವಿದ್ಯಾರ್ಥಿಗಳನ್ನ ಶಿವಮೊಗ್ಗದಲ್ಲಿ ಬಂಧಿಸಲಾಗಿದೆ. ಗಾಂಜಾ ಮಾರಾಟದ ಕುರಿತು ದೊರೆತ ಖಚಿತ ಮಾಹಿತಿ ಮೇರೆಗೆ ಅಲ್ಲಿನ ಹಳೆಗುರುಪುರದ ಮನೆಯೊಂದ್ರಲ್ಲಿ ವಾಸವಿದ್ದ ಇಬ್ಬರು ವಿದ್ಯಾರ್ಥಿಗಳನ್ನ ಶುಕ್ರವಾರ ಪೊಲೀಸರು ಬಂಧಿಸಿದ್ರು. ಅವ್ರಿಂದ 20 ಸಾವಿರ ಮೌಲ್ಯದ 466 ಗ್ರಾಂ ಒಣ ಗಾಂಜಾ ವಶಪಡಿಸಿಕೊಳ್ಳಲಾಗಿತ್ತು. ವಿಚಾರಣೆ ವೇಳೆ ಇನ್ನು ಮೂವರ ಕುರಿತು ಮಾಹಿತಿ ದೊರಕಿತ್ತು. ಅಲ್ಲಿನ ಶಿವಗಂಗಾ ಲೇಔಟ್‌ನಲ್ಲಿ ಬಾಡಿಗೆ ಮನೆಯಲ್ಲಿದ್ದ ಆರೋಪಿ ವಿಜ್ಞರಾಜ್‌, ಮನೆಯ ಒಂದು ಕೊಠಡಿಯಲ್ಲೇ ಗಾಂಜಾ ಬೆಳೆಯುತ್ತಿದ್ದ. ಗಾಂಜಾ ಬೆಳೆಯೋಕೆ ಬೇಕಾದ ವಾತಾವರಣವನ್ನ ಕೃತಕವಾಗಿ ಸೃಷ್ಟಸಿ ಪಾಟ್‌ಗಳಲ್ಲಿ ಗಾಂಜಾ ಬೆಳೆಯುತ್ತಿದ್ದ ಅಂತ ಪೊಲೀಸರು ಮಾಹಿತಿ ನೀಡಿದ್ದಾರೆ. ಇನ್ನು ಈವರೆಲ್ಲ ವೈದ್ಯಕೀಯ ಕಾಲೇಜ್‌ ಒಂದರ ಫೈನಲ್‌ ಇಯರ್‌ ವಿದ್ಯಾರ್ಥಿಗಳಾಗಿದ್ದಾರೆ.

-masthmagaa.com

Contact Us for Advertisement

Leave a Reply