ಬಹುಕೋಟಿ ಪೈಪ್​ಲೈನ್​ ಕಾಮಗಾರಿ ನಿಲ್ಲಿಸಿದ ಹಮ್ಮಿಂಗ್​ಬರ್ಡ್​ ಪಕ್ಷಿ

masthmagaa.com:

ಹೋರಾಟಗಾರರು, ಪ್ರತಿಭಟನಾಕಾರರು ಮಾಡಲಾಗದ ಕೆಲಸವನ್ನ ಚಿಕ್ಕ ಪಕ್ಷಿಯಾದ ಹಮ್ಮಿಂಗ್​ಬರ್ಡ್​ ಮಾಡಿ ತೋರಿಸಿದೆ. ಅಂದ್ಹಾಗೆ ಪಶ್ಚಿಮ ಕೆನಡಾದ ಬ್ರಿಟೀಷ್​ ಕೊಲಂಬಿಯಾ ಪ್ರಾಂತ್ಯದಲ್ಲಿ ‘ಟ್ರಾನ್ಸ್​ಮೌಂಟೇನ್ ಆಯಿಲ್​ ಪೈಪ್​ಲೈನ್​’ ನಿರ್ಮಾಣವಾಗ್ತಿದೆ. ಆದ್ರೆ ಈ ವಿವಾದಾತ್ಮಕ ಪೈಪ್​ಲೈನ್ ಕಾಮಗಾರಿಯನ್ನ ನಿಲ್ಲಿಸಬೇಕು ಅಂತ ಹೋರಾಟಗಾರರು, ಪ್ರತಿಭಟನಾಕಾರರು ಕಳೆದ ಹಲವು ವರ್ಷಗಳಿಂದ ಪ್ರತಿಭಟನೆ ಮಾಡ್ತಾ ಬಂದಿದ್ರು. ಆದ್ರೆ ಆ ಕಾಮಗಾರಿ ಮಾತ್ರ ನಿಂತಿರಲಿಲ್ಲ. ಇದೀಗ ಅದನ್ನ ಹಮ್ಮಿಂಗ್​ಬರ್ಡ್ ನಿಲ್ಲಿಸಿದೆ. ಅಂದ್ಹಾಗೆ ಈ ಪೈಪ್​ಲೈನ್​​ ನಿರ್ಮಾಣ ಮಾಡೋ ವೇಳೆ ಹಮ್ಮಿಂಗ್​ಬರ್ಡ್​ ಪಕ್ಷಿಯ ಗೂಡುಗಳಿದ್ದ ಮರಗಳನ್ನ ಕಟ್ ಮಾಡಿದ್ದಾರೆ. ಇದು ಎನ್ವಾರ್ಮೆಂಟ್​ ಅಂಡ್ ಕ್ಲೈಮೆಟ್​ ಚೇಂಚ್​ ಕೆನಡಾ ಗಮನಕ್ಕೆ ಬಂದಿದೆ. ತಕ್ಷಣ ಎಚ್ಚೆತ್ತ ಅದು, ಮುಂದಿನ 4 ತಿಂಗಳ ಕಾಲ ಪೈಪ್​ಲೈನ್ ಕಾಮಗಾರಿಯನ್ನ ಸ್ಥಗಿತಗೊಳಿಸುವಂತೆ ಆದೇಶಿಸಿದೆ. ಜಗತ್ತಿನ ಅತಿ ಚಿಕ್ಕ ಪಕ್ಷಿ ಬೀ ಹಮ್ಮಿಂಗ್​ಬರ್ಡ್​.. ಅದ್ರೆ ಈ ಪೈಪ್​​ಲೈನ್​ ಕಾಮಗಾರಿಗೆ ಬ್ರೇಕ್ ಹಾಕಿದ್ದು ಅನ್ನಾಸ್​ ಹಮ್ಮಿಂಗ್​ಬರ್ಡ್​.

-masthmagaa.com

Contact Us for Advertisement

Leave a Reply