ಟಾಲಿವುಡ್‌ ಡ್ರಗ್‌ ಪ್ರಕರಣ: ಕಬಾಲಿ ನಿರ್ಮಾಪಕ ಅಂದರ್‌ !

-masthmagaa.com:

ಟಾಲಿವುಡ್‌ನಲ್ಲಿ ಮತ್ತೆ ಡ್ರಗ್ಸ್‌ ದಂಧೆ ಬಗೆಗಿನ ಸುದ್ದಿ ಕೇಳಿ ಬರ್ತಾ ಇದೆ. ಕಬಾಲಿ ಚಿತ್ರ ನಿರ್ಮಾಪಕ ಕೆ.ಪಿ ಚೌಧರಿ ಪೋಲಿಸರ ಅತಿಥಿ ಆಗಿದ್ದಾರೆ. ಇವರ ವಿಚಾರಣೆ ಮಾಡೋ ಸಮಯದಲ್ಲಿ ಹಲವಾರು ಹೆಸರುಗಳು ಸಹ ಹೊರ ಬಿದ್ದಿತ್ತು. ಆ ಲಿಸ್ಟ್‌ನಲ್ಲಿ ಟಾಲಿವುಡ್‌ ನಟಿ ಆಶು ರೆಡ್ಡಿ ಕೂಡ ಒಬ್ಬರು. ಚೌಧರಿ ಜೊತೆ ಸಂಪರ್ಕದಲ್ಲಿದ್ದವರ ಪಟ್ಟಿಯಲ್ಲಿ ರಘು ತೇಜ ಅವರ ಹೆಸರು ಪ್ರಮುಖವಾಗಿದೆ. ಹಾಗೆಯೇ ಶ್ವೇತಾ, ಸುಶಾಂತ್ ರೆಡ್ಡಿ, ಸನಾ ಮಿಶ್ರಾ, ಶ್ವೇತಾ, ಟ್ಯಾಗೋರ್ ಪ್ರಸಾದ್, ಚಿಂತಾ ರಾಕೇಶ್ ಮೊದಲಾದವರಿದ್ದಾರೆ. ಚೌಧರಿ ಜೊತೆ ಸೆಲೆಬ್ರಿಟಿಗಳಾದ ಅಶು ರೆಡ್ಡಿ, ಸುರೇಖಾ ವಾಣಿ, ಜ್ಯೋತಿ ಅವರ ಹಲವು ಕರೆಗಳನ್ನ ಮಾಡಿದ್ದಾರೆ ಅಂತ ಪಕ್ಕಾ ಮಾಹಿತಿ ಲಭ್ಯವಾಗಿದೆ. ಇವರೆಲ್ಲರೂ ಈ ವಿಚಾರವಾಗಿ ಪ್ರತಿಕ್ರಿಯೆ ನೀಡಿದ್ದಾರೆ. ಈಗ ಅಶು ರೆಡ್ಡಿ ಈ ವಿಚಾರವಾಗಿ ಮತ್ತೊಮ್ಮೆ ಮಾತನಾಡಿದ್ದಾರೆ. ‘ನನಗೂ ಡ್ರಗ್ಸ್ ಪ್ರಕರಣಕ್ಕೂ ಸಂಬಂಧವಿಲ್ಲ’ ಎಂದು ಅಶು ರೆಡ್ಡಿ ಮತ್ತೊಮ್ಮೆ ಸ್ಪಷ್ಟನೆ ನೀಡಿದ್ದಾರೆ.

“ನನಗೂ ಡ್ರಗ್ ಕೇಸ್​ಗೂ ಸಂಬಂಧವಿಲ್ಲ. ನಾನು ಸದ್ಯ ವಿದೇಶದಲ್ಲಿದ್ದೇನೆ. ನನಗೆ ಮಾನಹಾನಿ ಮಾಡಲಾಗಿದೆ. ಕೆಲವರು ಬೇಕಾಬಿಟ್ಟಿ ಸುದ್ದಿ ಪ್ರಕಟ ಮಾಡಿದ್ದಾರೆ. ಅವರ ವಿರುದ್ಧ ನಾನು ಮಾನನಷ್ಟ ಮೊಕದ್ದಮೆ ಹೂಡುತ್ತೇನೆ. ನನಗೆ ಸೆಕೆಂಡ್​ಗೆ ಒಂದು ಕಾಲ್ ಬರ್ತಾ ಇದೆ. ನಾನು ಈ ಮೊಬೈಲ್ ಸಂಖ್ಯೆ ಬಳಸೋದನ್ನ ಸ್ಟಾಪ್‌ ಮಾಡಿದೀನಿ” ಅಂತ ಹೇಳಿ ಮೊಬೈಲ್​ಗೆ ಬಂದಿರುವ ಕಾಲ್‌ಗಳನ್ನೂ ಸಹ ತೋರಿಸಿದ್ದಾರೆ.

-masthmagaa.com

Contact Us for Advertisement

Leave a Reply