ತಾಲಿಬಾನಿಗಳು ನನ್ನನ್ನು ಕೊಂದಿಲ್ಲ, ಹೊಡೆದಿದ್ದಷ್ಟೆ: ಝಿಯಾರ್ ಯಾದ್ ಖಾನ್!

masthmagaa.com:

ತಾಲಿಬಾನಿಗಳು ಅಫ್ಘಾನಿಸ್ತಾನದ ಮೊದಲ ಸ್ವತಂತ್ರ ಮಾಧ್ಯಮ ಸಂಸ್ಥೆ ಟೋಲೋ ನ್ಯೂಸ್​ ವರದಿಗಾರ ಝಿಯಾರ್ ಯಾದ್ ಖಾನ್​​​​ರನ್ನು ಹತ್ಯೆ ಮಾಡಿದೆ ಅಂತ ವರದಿಯಾಗಿದೆ. ಈ ಬಗ್ಗೆ ಟೋಲೋ ನ್ಯೂಸ್ ಕೂಡ ಖಚಿತಪಡಿಸಿದೆ. ಆದ್ರೆ ಈ ಬಗ್ಗೆ ಸ್ವತಃ ಟ್ವೀಟ್ ಮಾಡಿರೋ ಝಿಯಾರ್ ಯಾದ್ ಖಾನ್​, ನಾನು ಕಾಬೂಲ್ ಸಿಟಿಯಲ್ಲಿ ರಿಪೋರ್ಟಿಂಗ್ ಮಾಡ್ತಿರುವಾಗ ತಾಲಿಬಾನಿಗಳು ನನ್ನ ಮೇಲೆ ಬಂದೂಕು ತೋರಿಸಿ, ಹದರಿಸಿ, ಹಲ್ಲೆ ನಡೆಸಿದ್ದಾರೆ. ಕ್ಯಾಮೆರಾ, ಟೆಕ್ನಿಕಲ್ ಉಪಕರಣಗಳು ಮತ್ತು ನನ್ನ ಪರ್ಸನಲ್​​ ಫೋನ್​ನ್ನು ಕಿತ್ತುಕೊಂಡಿದ್ದಾರೆ. ಆದ್ರೆ ಕೆಲವರು ತಾಲಿಬಾನಿಗಳು ಹತ್ಯೆ ಮಾಡಿದ್ದಾರೆ ಅಂತ ಸುಳ್ಳು ಸುದ್ದಿ ಹರಡುತ್ತಿದ್ದಾರೆ ಅಂತ ಸ್ಪಷ್ಟಪಡಿಸಿದ್ದಾರೆ. ಅಂದಹಾಗೆ ಇವರು ಕಾಬೂಲ್​ ನಗರದ ಬಡತನ ಮತ್ತು ನಿರುದ್ಯೋಗ ಸಂಬಂಧ ವರದಿ ಮಾಡಲು ಕಾಬೂಲ್​​ಗೆ ತೆರಳಿದ್ರು.

-masthmagaa.com

Contact Us for Advertisement

Leave a Reply