ನಾಳೆ ದ್ವಿತೀಯ ಪಿಯು ಫಲಿತಾಂಶ.. ರಿಸಲ್ಟ್​ ನೋಡೋಕೆ ಹೀಗೆ ಮಾಡಿ..

masthmagaa.com:

2020–21ನೇ ಶೈಕ್ಷಣಿಕ ಸಾಲಿನ ದ್ವಿತೀಯ ಪಿಯುಸಿ ಫಲಿತಾಂಶ ಜುಲೈ 20ರ ಸಂಜೆ ಅಂದ್ರೆ ನಾಳೆ ಸಂಜೆ 4 ಗಂಟೆಗೆ ಪ್ರಕಟವಾಗಲಿದೆ. ಈ ಬಾರಿ ಪರೀಕ್ಷೆ ಇಲ್ಲದೆ, ಎಸ್ಸೆಸ್ಸೆಲ್ಸಿ ಮತ್ತು ಪ್ರಥಮ ಪಿಯುಸಿ ಹಾಗೂ ಶೈಕ್ಷಣಿಕ ಚಟುವಟಿಕೆಗಳಿಗೆ ನೀಡಿದ ಅಂಕಗಳ ಆಧಾರದಲ್ಲಿ ವಿದ್ಯಾರ್ಥಿಗಳನ್ನ ಪಾಸ್ ಮಾಡಲಾಗ್ತಿದೆ. ಇನ್ನು ಈ ವರ್ಷ ಪರೀಕ್ಷೆ ನಡೆಸದೇ ಇರೋದ್ರಿಂದ ವಿದ್ಯಾರ್ಥಿಗಳಿಗೆ ನೋಂದಣಿ ಸಂಖ್ಯೆ ಇಲ್ಲ. ಹೀಗಾಗಿ ರಿಸಲ್ಟ್ ನೋಡೋದು ಹೇಗೆ ಅನ್ನೋ ಗೊಂದಲ ಇರಬಹುದು. ರಿಜಿಸ್ಟ್ರೇಷನ್​ ನಂಬರ್ ಪಡೆಯಲು ಈಸಲ ಬೇರೆ ವ್ಯವಸ್ಥೆ ಇದೆ. ನಿಮ್ಮ ರಿಸಲ್ಟ್ ನೋಡ್ಬೇಕು ಅಂದ್ರೆ ಪಿಯು ವೆಬ್​ಸೈಟ್​ ಆಗಿರೋ www.pue.kar.nic.in ಅನ್ನಓಪನ್ ಮಾಡಿ. ಅಲ್ಲಿ KNOW YOUR REGISTRATION NUMBER ಅಂತ ಇರುತ್ತೆ ಅದರ ಮೇಲೆ ಕ್ಲಿಕ್ ಮಾಡಿ. ನಂತ್ರ ನಿಲ್ಲ ಜಿಲ್ಲೆ ಮತ್ತು ಕಾಲೇಜನ್ನ ಸೆಲೆಕ್ಟ್ ಮಾಡಿದ್ರೆ ಆ ಕಾಲೇಜಿನಲ್ಲಿರೋ ಎಲ್ಲರ ರಿಜಿಸ್ಟ್ರೇಷನ್​ ನಂಬರ್ಸ್​ ಬರುತ್ತೆ. ಅದನ್ನ ಇಟ್ಕೊಂಡು ನೀವು ರಿಸಲ್ಟ್ ನೋಡ್ಬೋದು.

-masthmagaa.com

 

Contact Us for Advertisement

Leave a Reply