ಬಾನಂಗಳದಲ್ಲಿ ಎರಡೆರಡು ವಿಸ್ಮಯ! ಚಂದ್ರಗ್ರಹಣದ ವಿಶೇಷ..

masthmagaa.com:

ನಾಳೆ ಅಂದ್ರೆ ಬುಧವಾರ 2 ಬಾಹ್ಯಾಕಾಶದ ಕೌತುಕಗಳಿಗೆ ಭೂಮಿ ಸಾಕ್ಷಿ ಆಗುತ್ತೆ. ಒಂದು ಸೂಪರ್ ಮೂನ್, ಮತ್ತೊಂದು ಚಂದ್ರಗ್ರಹಣ. ಭೂಮಿಗೆ ಈ ವರ್ಷದಲ್ಲಿ ಅತಿ ಹತ್ತಿರಕ್ಕೆ ಬರುತ್ತೆ ಚಂದ್ರ. ಈ ವೇಳೆ ಚಂದ್ರ ದೊಡ್ದದಾಗಿ ಕಾಣುತ್ತೆ.. ಹೀಗಾಗಿ ಸೂಪರ್ ಮೂನ್ ಅಂತಾನೂ ಕರೆಯಲಾಗುತ್ತೆ.

ಇದೇ ವೇಳೆ ಈ ವರ್ಷದ ಏಕೈಕ ಪೂರ್ಣ ಚಂದ್ರಗ್ರಹಣ ಕೂಡ ಸಂಭವಿಸುತ್ತೆ. 2019ರಲ್ಲಿ ಈ ಥರ ಪೂರ್ಣ ಚಂದ್ರ ಗ್ರಹಣ ಸಂಭವಿಸಿತ್ತು. ಅದರಲ್ಲೂ ಪೂರ್ಣ ಚಂದ್ರಗ್ರಹಣ ಹಾಗೂ ಸೂಪರ್ ಮೂನ್ ಎರಡೂ ಏಕಕಾಲಕ್ಕೆ ಕಳೆದ 6 ವರ್ಷಗಳಲ್ಲಿ ಯಾವತ್ತೂ ಆಗಿರಲಿಲ್ಲ.

ಹಾಗಾದ್ರೆ ಸೂಪರ್ ಮೂನ್ ಅಂದ್ರೆ ಏನು?
ನಾಸಾ ಹೇಳೋ ಪ್ರಕಾರ, ಚಂದ್ರ ತನ್ನ ಕಕ್ಷೆಯಲ್ಲಿ ಸುತ್ತುವಾಗ ಭೂಮಿಯ ಅತಿ ಹತ್ತಿರಕ್ಕೆ ಬಂದ ಕ್ಷಣ ಹಾಗೂ ಸೇಮ್ ಟೈಮ್ ಅದು ಭೂಮಿಯಲ್ಲಿ ಪೂರ್ಣ ಹುಣ್ಣಿಮೆಯ ಪೂರ್ಣ ಚಂದ್ರನ ಕ್ಷಣ ಆಗಿದ್ದಾಗ ಈ ಸೂಪರ್ ಮೂನ್ ಉಂಟಾಗುತ್ತೆ. ಚಂದ್ರನಿಂದ ಭೂಮಿಯ ಅತಿ ಕಡಿಮೆ ಅಂತರ ಅಂದ್ರೆ 3,60,000 KM. ಅದೇ ಅತಿ ಹೆಚ್ಚಿನ ಅಂತರ ಅಂದ್ರೆ ಅದು 4,05,000 KM. ಸೋ, ನಾಳೆ ಈ ಸೂಪರ್ ಮೂನ್ ಹಾಗೂ ಗ್ರಹಣ ಎರಡೂ ಒಟ್ಟಿಗೇ ಆಗ್ತಿದೆ. ಗ್ರಹಣ ಅಂದ್ರೆ ಮಧ್ಯೆ ಭೂಮಿ ಇರುತ್ತೆ. ಒಂದು ಸೈಡ್ ಸೂರ್ಯ ಇದ್ರೆ ಮತ್ತೊಂದು ಸೈಡ್ ಚಂದ್ರ ಇರುತ್ತೆ. ನೇರವಾಗಿ. ಈ ಟೈಮಲ್ಲಿ ಚಂದ್ರ ಕೆಂಪಾಗಿ ಕಾಣುತ್ತೆ. ಹೇಗೆ ಅಂದ್ರೆ ಸೂರ್ಯನ ಬೆಳಕು ಚಂದ್ರನ ತಲುಪೋದನ್ನ ಭೂಮಿ ಬ್ಲಾಕ್ ಮಾಡುತ್ತೆ. ಆದರೂ ಭೂಮಿಯ ಎಡ್ಜ್​​​ನಿಂದ ಒಂದಷ್ಟು ಬೆಳಕು ಚಂದ್ರನ ತಲುಪುತ್ತೆ. ಹೀಗೆ ತಲುಪೋ ಮೊದಲು ಭೂಮಿಯ ವಾತಾವರಣ ಈ ಬೆಳಕನ್ನು ಫಿಲ್ಟರ್ ಮಾಡಿ ಕಳಿಸುತ್ತೆ. ಹೀಗಾಗಿ ಚಂದ್ರ ತಿಳಿಗೆಂಪು ಬಣ್ಣದಲ್ಲಿ ಕಂಗೊಳಿಸುತ್ತೆ. ಆದ್ರೆ ಈ ಸಲ ಪೂರ್ಣ ಚಂದ್ರ ಗ್ರಹಣವನ್ನ ಬರಿಗಣ್ಣಿಗೆ ಕಾಣೋದು ಕಷ್ಟ ಅಂತ ನಾಸಾ ಹೇಳಿದೆ. ಆದ್ರೆ ಭೂಮಿಯ ನೆರಳಿಂದ ಚಂದ್ರ ಹೊರ ಹೋಗೋ ಸಂದರ್ಭದ ಭಾಗಶಃ ಚಂದ್ರ ಗ್ರಹಣ ಭಾರತ, ನೇಪಾಳ, ರಷ್ಯಾ, ಚೀನಾದ ಕೆಲಭಾಗ, ಮಂಗೋಲಿಯಾಗಳಲ್ಲಿ ಕಾಣಬಹುದು ಅಂತಾ ನಾಸಾ ಹೇಳಿದೆ. ಬೆಳಗ್ಗೆ 6.13ರಿಂದ ಸಂಜೆ 4 ಗಂಟೆ ತನಕ ಇರುತ್ತೆ ಅಂತ ಹೇಳಲಾಗ್ತಿದೆ.

-masthmagaa.com

Contact Us for Advertisement

Leave a Reply