ದೇಶದಲ್ಲಿ 195 ಜನರಿಗೆ ಕೊರೋನಾ ವೈರಸ್​.. ಎಲ್ಲೆಲ್ಲಿ ಎಷ್ಟು..?

masthmagaa.com:

ದೇಶದಲ್ಲಿ ಕೊರೋನಾ ವೈರಸ್​ ಸೋಂಕು ತಗುಲಿದವರ ಸಂಖ್ಯೆ 195ಕ್ಕೆ ಏರಿಕೆಯಾಗಿದೆ ಅಂತ ಕೇಂದ್ರ ಆರೋಗ್ಯ ಸಚಿವಾಲಯ ತಿಳಿಸಿದೆ. ಈ ಪೈಕಿ ಕರ್ನಾಟಕ, ದೆಹಲಿ, ಮಹಾರಾಷ್ಟ್ರ ಹಾಗೂ ಪಂಜಾಬ್​ನಲ್ಲಿ ತಲಾ ಒಬ್ಬೊಬ್ಬರು ಪ್ರಾಣ ಕಳೆದುಕೊಂಡಿದ್ದಾರೆ. ಉಳಿದಂತೆ 19 ಮಂದಿ ಸಂಪೂರ್ಣವಾಗಿ ಗುಣಮುಖರಾಗಿ ವಾಪಸ್ ಮನೆ ಸೇರಿದ್ದಾರೆ.

ದೇಶದಲ್ಲಿ ಅತಿ ಹೆಚ್ಚು ಕೊರೋನಾ ಸೋಂಕು ದೃಢಪಟ್ಟಿರೋದು ಮಹಾರಾಷ್ಟ್ರದಲ್ಲಿ. ಇಲ್ಲಿ ಮೂವರು ವಿದೇಶಿಗರು ಸೇರಿದಂತೆ ಒಟ್ಟು 47 ಮಂದಿಗೆ ಕೊರೋನಾ ವೈರಸ್ ತಗುಲಿದೆ. ಕೇರಳ ಎರಡನೇ ಸ್ಥಾನದಲ್ಲಿದ್ದು 28 ಜನರಲ್ಲಿ ಸೋಂಕು ದೃಢಪಟ್ಟಿದೆ. ಉತ್ತರ ಪ್ರದೇಶದಲ್ಲಿ 19, ದೆಹಲಿ 17, ಹರಿಯಾಣ 17, ಕರ್ನಾಟಕದ 15 ಮಂದಿಯಲ್ಲಿ ಕೊರೋನಾ ವೈರಸ್​ ದೃಢಪಟ್ಟಿದೆ ಅಂತ ಆರೋಗ್ಯ ಸಚಿವಾಲಯ ತಿಳಿಸಿದೆ.

-masthmagaa.com

Contact Us for Advertisement

Leave a Reply