ಹಿಟ್ಲರ್ ಕಾಲದ 96ರ ಅಜ್ಜಿಗೆ ಈಗ ಕೋರ್ಟ್ ನಲ್ಲಿ ವಿಚಾರಣೆ

masthmagaa.com:

ಹಿಟ್ಲರನ ನಾಝಿ ಪಡೆ ಯುರೋಪ್‌ನಾದ್ಯಂತ ನಡೆಸಿದ ಮಾರಣ ಹೋಮವನ್ನ ಇತಿಹಾಸದಲ್ಲಿ ನೀವೆಲ್ಲ ತಿಳ್ಕೊಂಡಿರ್ತೀರ. ಕೆಲವ್ರಿಗೆ ಡೀಟೇಲಾಗಿ ಗೊತ್ತಿರಬಹುದು. ಇನ್ನು ಕೆಲವರಿಗೆ ಮೇಲ್ ಮೇಲೆ ಗೊತ್ತಿರಬೋದು. ಈಗ ಅದ್ಯಾವುದೋ ಗತಕಾಲದ ಕಥೆ ಅಂತ ನಮಗೆಲ್ಲ ಈಗ ಅನಿಸುತ್ತೆ. ಆದ್ರೆ ಅಂದು ಹಿಟ್ಲರನ ನಾಝಿಗಳು ನಡೆಸ್ತಿದ್ದ ಸಾವಿನ ಕ್ಯಾಂಪ್ ನಲ್ಲಿ ಕೆಲಸ ಮಾಡ್ತಿದ್ದ ಕೆಲವರು ಇನ್ನೂ ಕೋರ್ಟ್ ಕೇಸ್ ಗಳನ್ನ ಫೇಸ್ ಮಾಡ್ತಿದ್ದಾರೆ. ಅದಕ್ಕೆ ಉದಾಹರಣೆ 96 ವರ್ಷದ ಇರ್ಮ್‌ಗಾರ್ಡ್ ‌ಫರ್ಚ್‌ನರ್ (Irmgard Furchner) ಕೇಸೇ ಸಾಕ್ಷಿ. ಈಕೆಯನ್ನ 10 ಸಾವಿರಕ್ಕೂ ಅಧಿಕ ಜನರ ಸಾವಿಗೆ ಕೊಡುಗೆ ನೀಡಿದ ಆರೋಪದ ಪ್ರಕರಣಸಲ್ಲಿ ವಿಚಾರಣೆಗೆ ಒಳಪಡಿಸಲಾಗ್ತಿದೆ. ಈಕೆ ತಪ್ಪಿಸಿಕೊಂಡು ಎಲ್ಲಿಗೇ ಹೋದರೂ ಹಿಡಿದು ತಂದು ವಿಚಾರಣೆಗೆ ಒಳಪಡಿಸಲಾಗ್ತಿದೆ. ಈಕೆ 1943ರಿಂದ 1945ರ ವರೆಗೆ ಜರ್ಮನಿಯಲ್ಲಿ ನಾಝಿಗಳು ಸ್ಥಾಪಿಸಿದ್ದ ಹಲವಾರು ಕಾನ್ಸಂಟ್ರೇಶನ್ ಕ್ಯಾಂಪ್‌ಗಳಲ್ಲಿ ಒಂದಾಗಿದ್ದ ಸ್ಟಟ್‌ಹಾಫ್ ಕ್ಯಾಂಪ್‌ನಲ್ಲಿ ಕ್ಯಾಂಪ್ ಸೆಕ್ರಟರಿ ಆಗಿದ್ದಳು. ಅಲ್ಲಿನ ಕ್ಯಾಂಪ್ ಕಮಾಂಡರ್ ಆಗಿದ್ದ ಪಾಲ್ ವೆರ್ನರ್ ಹಾಪ್ಪೆಗೆ ಸಹಾಯಕಳಂತೆ ಕೆಲಸ ಮಾಡ್ತಿದ್ದಳು. ಆಗ ಈಕೆ ಒಬ್ಬ ಟೀನೇಜ್ ಹುಡುಗಿಯಾಗಿದ್ದಳು. ಈ ಸ್ಟಟ್‌ಹಾಫ್ ಕ್ಯಾಂಪಿನಲ್ಲಿ 65 ಸಾವಿರಕ್ಕೂ ಅಧಿಕ ಜನ ಸತ್ತೋಗಿದ್ರು. ಗ್ಯಾಸ್ ಚೇಂಬರ್ ನಲ್ಲಿ ಹಾಕಿ, ಗುಂಡಿಕ್ಕಿ, ಇಂಜಕ್ಷನ್ಗಳನ್ನ ಚುಚ್ಚಿ, ಉಪವಾಸ ಕೆಡವಿ ಇಲ್ಲಿ ಜನರನ್ನ ಸಾಯಿಸಲಾಗ್ತಿತ್ತು. ವಿಶೇಷವಾಗಿ ಯಹೂದಿಗಳನ್ನ, ಪೋಲೆಂಡ್ ಹೋರಾಟಗಾಗರರನ್ನ, ಬಂಧಿತ ಸೋವಿಯತ್ ಸೈನಿಕರನ್ನ ಇಲ್ಲಿ ಕಸದ ರಾಶಿ ತುಂಬಿದಂತೆ ತುಂಬಲಾಗ್ತಿತ್ತು. ಎರಡನೇ ಮಹಾಯುದ್ಧ ಮುಗಿದು ನಾಝಿಗಳ ಅಂತ್ಯ ಆದಮೇಲೆ ಯಾರೆಲ್ಲ ಈ ಕ್ರೂರ ನರಸಂಹಾರಕ್ಕೆ ಕಾರಣ ಆಗಿದ್ದರೋ ಅವರನ್ನೆಲ್ಲ ಹುಡಕಿ ಹುಡುಕಿ ವಿಚಾರಣೆಗೆ ಒಳಪಡಿಸಲಾಗಿತ್ತು. ಶಿಕ್ಷೆ ವಿಧಿಸಲಾಗಿತ್ತು. ಈ ಇರ್ಮ್‌ಗಾರ್ಡ್ ‌ಫರ್ಚ್‌ನರ್ ಕೂಡ ವಿಚಾರಣೆ ಎದುರಿಸಿದ್ದಳು. ಈಕೆಯ ಬಾಸ್ ಆಗಿದ್ದ ಪಾಲ್ ವೆರ್ನರ್ ಹಾಪ್ಪೆ ವಿಚಾರಣೆ ವೇಳೆ 1954ರಲ್ಲಿ, ನಂದೇನು ತಪ್ಪಿಲ್ಲ. ನಾನು ಅಲ್ಲಿ ನಾಗರಿಕ ಕೆಲಸಕ್ಕೆ ಅಂತ ನೇಮಕಗೊಂಡಿದ್ದೆ. ನನಗೂ ಈ ಸಾಮೂಹಿಕ ಕೊಲೆಗಳಿಗೂ ಸಂಬಂಧ ಇಲ್ಲ. ಆದೇಶಗಳನ್ನ, ಸಂದೇಶಗಳನ್ನ ಟೈಪಿಂಗ್ ಮಾಡೋದು ಇತ್ಯಾದಿ ಸೆಕ್ರಟರಿ ಕೆಲಸ ಅಷ್ಟೆ ಮಾಡ್ತಿದ್ದೆ. ಯಾವುದೇ ಸೈನಿಕ ಕೆಲಸಗಳಲ್ಲಿ ಭಾಗಿಯಾಗಿಲ್ಲ ಅಂತ ಹೇಳಿದ್ದಳು. ಆಗೆಲ್ಲ ನೇರವಾಗಿ ಹತ್ಯೆ ನಿರ್ಧಾರಗಳಲ್ಲಿ ಭಾಗಿಯಾಗದ ವ್ಯಕ್ತಿಗಳನ್ನ ಬಿಟ್ಟುಕಳಿಸಲಾಗ್ತಿತ್ತು. ಆದ್ರೆ ಇತ್ತೀಚೆಗೆ ಸೋಬಿಬೋರ್ ಅನ್ನೋ ಇನ್ನೊಂದು ಕಾನ್ಸಂಟ್ರೇಶನ್ ಕ್ಯಾಂಪಿನ ಗಾರ್ಡ್ ಆಗಿದ್ದ ವ್ಯಕ್ತಿಗೆ 28 ಸಾವಿರ ಜನರ ಸಾವಿಗೆ ಕಾರಣ ಆಗಿದ್ದ ಆರೋಪದಲ್ಲಿ ಶಿಕ್ಷೆ ವಿಧಿಸಲಾಯ್ತು. ಆಗ ಜಡ್ಜ್ ತಮ್ಮ ತೀರ್ಪಿನಲ್ಲಿ, ನಾಝಿಗಳ ಜೊತೆ ಎಂಥಾ ಸಣ್ಣ ಕೆಲಸ ಮಾಡಿದ್ದರೂ ಕೂಡ, ಸಾವಿರಾರು ಜನರ ಸಾವಿನಲ್ಲಿ ಅವರ ಸಣ್ಣ ಪಾತ್ರ ಇದ್ದಂತೆಯೇ ಅರ್ಥ. ಹೀಗಾಗಿ ಅಂಥವರನ್ನ ಹುಡುಕಿ ಕಾನೂನಿನ ಪ್ರಕಾರ ಶಿಕ್ಷೆಗೆ ಗುರಿಪಡಿಸಲೇಬೇಕು ಅಂತ ಹೇಳಿದ್ದರು. ಇದರ ಪರಿಣಾಮ ಹತ್ರತ್ರ ನೂರು ವರ್ಷ ಏಜಾಗಿರೋ ಇರ್ಮ್‌ಗಾರ್ಡ್ ‌ಫರ್ಚ್‌ನರ್ ಥರದ ಕೆಲವರಿಗೆ ಗ್ರಹಚಾರ ಕೆಡ್ತು. ಮತ್ತೆ ವಿಚಾರಣೆಗೆ ಹಾಜರಾಗ್ಬೇಕಾಗಿ ಬಂತು. ಈಕೆ ಕೂಡ ಅಷ್ಟೆ ಕಳೆದವಾರ ವಿಚಾರಣೆಗೆ ಹಾಜರಾಗ್ಬೇಕಾಗಿತ್ತು. ಆದ್ರೆ ಅದಕ್ಕೂ ಮೊದಲೇ ನೇರವಾಗಿ ಜಡ್ಜ್ ಪತ್ರ ಬರೆದು, ನನಗೆ ಏಜಾಗಿದೆ., ಬರಕಾಗಲ್ಲ ಅಂತ ಹೇಳಿ ತಪ್ಪಿಸಿಕೊಂಡು ಹೋಗೋ ಪ್ರಯತ್ನ ಮಾಡಿದ್ದಳು. ತನ್ನ ವೃದ್ಧಾಪ್ಯ ಶಿಬಿರದಿಂದ ತಪ್ಪಿಸಿಕೊಂಡು 37 ಕಿಲೋಮೀಟರ್ ವರೆಗೆ ದೂರ ಹೋಗಿದ್ದ ಈಕೆಯನ್ನ ಜರ್ಮನಿ ಪೊಲೀಸರು ಮತ್ತೆ ಹಿಡಿದು ಅರೆಸ್ಟ್ ಮಾಡಿ ಕರ್ಕೊಂಡು ಬಂದಿದ್ದಾರೆ. ಇನ್ಮುಂದೆ ಹೀಗೆಲ್ಲ ಮಾಡಲ್ಲ. ವಿಚಾರಣೆಗೆ ಹಾಜರಾಗ್ತೀನಿ ಅಂತ ಆಕೆ ಗ್ಯಾರಂಟಿ ಕೊಟ್ಟ ಮೇಲೆ ಆಕೆಯನ್ನ ಬಿಡುಗಡೆ ಮಾಡಿ ಕಳಸಿಲಾಗಿದೆ. ಈಕೆಗೆ 96 ವರ್ಷ ಆಗೋಗಿರೋದ್ರಿಂದ ಶಿಕ್ಷೆ ಪ್ರಕಟ ಆದ್ರೂ ಈಕೆಯನ್ನ ಜೈಲಿಗೆ ಕಳಿಸೋದು ಅನುಮಾನ ಅಂತ ಅಧಿಕಾರಿಗಳು ಹೇಳ್ತಿದ್ದಾರೆ. ಆದ್ರೂ ಕೂಡ ಸತ್ಯಕ್ಕೆ ಗೆಲುವಾಗಬೇಕು ಅಂದ್ರೆ ಇಂತವರನ್ನ ಹುಡುಕಿ ಹುಡಕಿ ಕಾನೂನಿನ ಪ್ರಕ್ರಿಯೆಗೆ ಒಳಪಡಿಸಲೇಬೇಕು ಅಂತ ನಾಝೀ ಹಂಟರ್ ಅಂತಾನೇ ಫೇಮಸ್ ಆಗಿರೋ ಅಮೆರಿಕನ್-ಇಸ್ರೇಲಿ ವ್ಯಕ್ತಿ ಎಫ್ರೈಮ್ ಝೂರೋಫ್ ಹೇಳಿದ್ದಾರೆ. ಇವ್ರು ನಾಝಿ ಕಾಲದವರನ್ನ ಹುಡುಕಿ ಹುಡುಕಿ ಕೋರ್ಟ್ಗೆ ಎಳೆತರೋ ಕೆಲಸ ಮಾಡ್ತಿದ್ದಾರೆ.

-masthmagaa.com

Contact Us for Advertisement

Leave a Reply