ಪ್ರತಿಭಟನೆ ಬೆನ್ನಲ್ಲೇ ಕೆನಡಾದಲ್ಲಿ ಕೊರೋನಾ ರೂಲ್ಸ್ ಸಡಿಲ

masthmagaa.com:

ಕೆನಡಾದಲ್ಲಿ ವ್ಯಾಕ್ಸಿನ್‌ ಕಡ್ಡಾಯದ ವಿರುದ್ದ ನಡೀತಿದ್ದ ಹೋರಾಟ ಕೈ ಮೀರುತ್ತಿದ್ದಂತೆ ಅಲ್ಲಿನ ಕೆಲ ಪ್ರಾಂತ್ಯಗಳು ಕೊರೋನಾ ನಿರ್ಬಂಧಗಳನ್ನ ಸಡಿಲಗೊಳಿಸ್ತಾ ಇವೆ. ಸಸ್ಕ್ಯಾಚುವನ್ ಪ್ರಾಂತ್ಯದಲ್ಲಿ​ ಕೋವಿಡ್‌ ವ್ಯಾಕ್ಸಿನೇಷನ್‌ ಸರ್ಟಿಫಿಕೆಟ್​ ಕೇಳೋದನ್ನ ಮತ್ತು ಮಾಸ್ಕ್‌ ಧರಿಸೋದು ಕಡ್ಡಾಯ ಅಂತಿದ್ದ ನಿಯಮಗಳನ್ನ ತೆಗೆದುಹಾಕಲಾಗಿದೆ. ಆದ್ರೆ ಕೋವಿಡ್ ಟೆಸ್ಟ್‌ ನಲ್ಲಿ ಪಾಸಿಟಿವ್‌ ಬಂದವರು ಕಡ್ಡಾಯವಾಗಿ ಕ್ವಾರಂಟೈನ್‌ ಆಗ್ಭೇಕು. ಲಸಿಕೆ ವಿಚಾರದಲ್ಲಿ ಮುಂದಿರುವ ಈ ಪ್ರಾಂತ್ಯ ತನ್ನ ಜನಸಂಖ್ಯೆಯ ಶೇ 80 ರಷ್ಟು ಜನರಿಗೆ ಎರಡು ಡೋಸ್‌ ವ್ಯಾಕ್ಸಿನ್‌ ನೀಡಿದೆ.

-masthmagaa.com

Contact Us for Advertisement

Leave a Reply