ಹೋಟೆಲ್ ಮಾಡಲು ಮುಂದಾದ ಡೊನಾಲ್ಡ್ ಟ್ರಂಪ್! ಯಾಕೆ ಗೊತ್ತಾ..?

masthmagaa.com:

ಡೊನಾಲ್ಡ್ ಟ್ರಂಪ್ ವಾಷಿಂಗ್ಟನ್ ನಲ್ಲಿರೋ ತಮ್ಮ TRUMP INTERNIONAL HOTEL ಮೇಲಿನ ಹಕ್ಕುಗಳನ್ನ ಸೇಲ್ ಮಾಡ್ತಿದ್ದಾರೆ. 370 ಮಿಲಿಯನ್ ಡಾಲರ್, ಅಂದ್ರೆ ಸುಮಾರು 2800 ಕೋಟಿ ರೂಪಾಯಿಗೆ. ಈ ಸಂಬಂಧ ಮಯಾಮಿಯ ಹೂಡಿಕೆ ಕಂಪನಿಯಾದ CGI MERCHANT GROUP ಜೊತೆ THE TRUMP BUSINESS ಮಾತುಕತೆ ನಡೆಸ್ತಿದೆ. ಆದ್ರೆ ಈ ಜಾಗ ಅಮೆರಿಕ ಸರ್ಕಾರದ್ದು. ವೈಟ್ ಹೌಸ್ ಸಮೀಪವೇ ಇದ್ದ ಈ ಐತಿಹಾಸಿಕ ಕಟ್ಟಡವನ್ನ ತಾನು ನಿರ್ವಹಣೆ ಮಾಡೋ ಕಾಂಟ್ರಾಕ್ಟ್ ಗೆ 2013ರಲ್ಲಿ ಟ್ರಂಪ್ ಫ್ಯಾಮಿಲಿ ಸೈನ್ ಹಾಕಿತ್ತು. ಅಲ್ಲಿ ಟ್ರಂಪ್ ಇಂಟರ್ನ್ಯಾಶನಲ್ ಹೋಟೆಲ್ ಸ್ಥಾಪನೆಯಾಗಿತ್ತು. ಒಟ್ಟು 60 ವರ್ಷಗಳ ಲೀಸ್ ಇದಾಗಿದ್ದು, ಮತ್ತೆ 40 ವರ್ಷಗಳ ಕಾಲ ಮುಂದುವರಿಸಲು ಅವಕಾಶವೂ ಇದೆ. 2017 ರಿಂದ 2021ರ ವರೆಗೆ ಟ್ರಂಪ್ ಅಧ್ಯಕ್ಷೀಯ ಅವಧಿಯಲ್ಲಿ ಈ ಹೊಟೆಲ್ ರಿಪಬ್ಲಿಕನ್ ಪಕ್ಷದ ಟ್ರಂಪ್ ಬೆಂಬಲಿಗರ ಅಡ್ಡೆಯಂತಾಗಿ ಹೋಗಿತ್ತು. ಈ ಹೊಟೆಲ್ ಟ್ರಂಪ್ ಪಾಲಿಗೆ ಬಿಳಿಯಾನೆ ಥರ ಆಗೋಗಿತ್ತು. 2016ರಲ್ಲಿ ಹೋಟೆಲ್ ಉದ್ಘಾಟನೆ ಆದಲ್ಲಿಂದ ಇಲ್ಲಿ ತನಕ 518 ಕೋಟಿ ರೂಪಾಯಿ ಲಾಸ್ ಆಗಿದೆ ಅಂತಲೂ ವರದಿಗಳಿವೆ. ಹೀಗಾಗಿ ಕಡೆಗೂ ಈ ಬಿಳಿಯಾನೆಯನ್ನ ಬೇರೆಯವರ ಕುತ್ತಿಗೆಗೆ ಕಟ್ಟಿ ಕೈತೊಳೆದುಕೊಳ್ಳಲು ಟ್ರಂಪ್ ಪ್ಲಾನ್ ಮಾಡಿದಂತಿದೆ.

-masthmagaa.com

Contact Us for Advertisement

Leave a Reply