ವಿಶ್ವದ ಅತಿ ಉದ್ದವಾದ ಮೂಗಿನ ಮನುಷ್ಯ ಇವರೇ ನೋಡಿ…

masthmagaa.com:

ಟರ್ಕಿಯಲ್ಲಿರೋ 71 ವರ್ಷದ ಮೆಹ್ಮೆತ್ ಒಜಿರೆಕ್​ ಅನ್ನೋರ ಮೂಗು ಇಡೀ ವಿಶ್ವದಲ್ಲೇ ಅತಿದೊಡ್ಡ ಮೂಗು ಅಂತ ಗಿನ್ನಿಸ್ ರೆಕಾರ್ಡ್​ ಪುಸ್ತಕ ಸೇರಿದೆ. ಇವರ ಮೂಗು 3.5 ಇಂಚು ಉದ್ದ ಇದೆ. 11 ವರ್ಷಗಳ ಹಿಂದೆಯೇ ಈ ವ್ಯಕ್ತಿಗೆ ಗಿನ್ನಿಸ್ ರೆಕಾರ್ಡ್ ಈ ವ್ಯಕ್ತಿಯ ಮೂಗು ಅಳತೆ ಮಾಡಿತ್ತು. ಆದ್ರೀಗ ಮತ್ತೊಮ್ಮೆ ಅಳತೆ ಮಾಡಿ, ಈ ಬಗ್ಗೆ ಟ್ವಿಟ್ಟರ್​ನಲ್ಲಿ ಮಾಹಿತಿ ಹಂಚಿಕೊಂಡಿದೆ. ಅಂದಹಾಗೆ ಮೆಹ್ಮೆತ್ ಒಜಿರೆಕ್ ಇತಿಹಾಸದಲ್ಲೇ ಅತಿ ದೊಡ್ಡ ಮೂಗು ಹೊಂದಿರೋ ವ್ಯಕ್ತಿಯೇನಲ್ಲ. ಇವರಿಗಿಂತ ಮುನ್ನ 18ನೇ ಶತಮಾನದಲ್ಲಿ ಬ್ರಿಟನ್​​ನಲ್ಲಿದ್ದ ಥಾಮಸ್ ವೆಡರ್ಸ್​ ಇತಿಹಾಸದಲ್ಲೇ ಅತಿದೊಡ್ಡ ಮೂಗು ಹೊಂದಿರೋ ವ್ಯಕ್ತಿ ಅನ್ನೋ ಹೆಸರಿಗೆ ಪಾತ್ರರಾಗಿದ್ದಾರೆ. ಇವರ ಮೂಗು 7.5 ಇಂಚ್​​​ನಷ್ಟು ಉದ್ದವಿತ್ತು. ಇವರು ಊರೂರು ಸುತ್ತೋ ಸರ್ಕಸ್ ಕಂಪನಿಯಲ್ಲಿದ್ರು. ಇವರ ಶೋಗಳಲ್ಲಿ ಮೂಗೇ ಹೈಲೈಟ್ ಆಗಿರುತ್ತಿತ್ತು.

-masthmagaa.com

Contact Us for Advertisement

Leave a Reply