ಇವರ ಬಗ್ಗೆ ಮಾಹಿತಿ ಕೊಟ್ಟರೆ 37 ಕೋಟಿ ರೂಪಾಯಿ ಬಹುಮಾನ!

masthmagaa.com:

ಅಮೆರಿಕದ ಸ್ಟೇಟ್ ಡಿಪಾರ್ಟ್ಮೆಂಟ್, ಈಗ ನಾಲ್ವರು ಮಾದಕ ವಸ್ತು ಕಿಂಗ್ಪಿನ್ ಗಳ ಮಾಹಿತಿ ಕೊಟ್ಟವರಿಗೆ 5 ಮಿಲಿಯನ್ ಡಾಲರ್ ಬಹುಮಾನ ಘೋಷಿಸಿದೆ. ಅಂದರೆ ಸುಮಾರು 37 ಕೋಟಿ ರೂಪಾಯಿ. ಈಗ ಅಮೆರಿಕದ ಕೊಲರಾಡೊ ಜೈಲಿನಲ್ಲಿ ಶಿಕ್ಷೆ ಅನುಭವಿಸುತ್ತಿರುವ ವಿಶ್ವದ ಅತಿದೊಡ್ಡ ನಶಾ ಸಾಮಗ್ರಿ ಡೀಲರ್ ಎಲ್ ಚಾಪೋ ಜೊತೆ ಇವರಿಗೆ ಲಿಂಕ್ ಇದೆ ಎನ್ನಲಾಗಿದೆ. ನಿನ್ನೆಯಷ್ಟೇ ಅಮೆರಿಕದ ಇದೇ ಸ್ಟೇಟ್ ಡಿಪಾರ್ಟ್ಮೆಂಟ್, ರಷ್ಯಾ ಮೂಲದ ಸೈಬರ್ ದಾಳಿಕೋರರ ಬಗ್ಗೆ ಸುಳಿವು ಕೊಟ್ಟರೆ 10 ಮಿಲಿಯನ್ ಡಾಲರ್ ಬಹುಮಾನ ಕೊಡುವುದಾಗಿ ಘೋಷಿಸಿತ್ತು.

-masthmagaa.com

Contact Us for Advertisement

Leave a Reply