ಸೌದಿ ಯುವರಾಜ ʻMBS’ ವಿರುದ್ದ ಕೇಸ್‌: ಸ್ಪೋಟಕ ರಹಸ್ಯ ಬಯಲು!

masthmagaa.com:

ಅಮೆರಿಕದಲ್ಲಿ ಸೌದಿ ಪ್ರಿನ್ಸ್ ಮೊಹ್ಮದ್ ಬಿನ್ ಸಲ್ಮಾನ್​​ ವಿರುದ್ಧ ಕೆರಿಬಿಯನ್​​ ಆಯಿಲ್ ಘಟಕವೊಂದಕ್ಕೆ ಸಂಬಂಧಿಸಿದಂತೆ ಕೇಸ್ ದಾಖಲಾಗಿದೆ. ಆದ್ರೆ ಈ ಕೇಸಲ್ಲಿ ಹೈಲೈಟ್ ಆಗ್ತಿರೋದು ಮಾತ್ರ ಮೊಹ್ಮದ್ ಬಿನ್ ಸಲ್ಮಾನ್ ವಿರೋಧಿಯೊಬ್ಬ ನಾಪತ್ತೆಯಾಗಿರೋ ವಿಚಾರ.. 2017ರಲ್ಲಿ ಮೊಹ್ಮದ್ ಬಿನ್ ಸಲ್ಮಾನ್​ರನ್ನು ಸೌದಿ ಪ್ರಿನ್ಸ್ ಆಗಿ ನೇಮಕ ಮಾಡಲಾಯ್ತು. ಇವರಿಗೂ ಮುನ್ನ ಕಸಿನ್ ಮೊಹ್ಮದ್ ಬಿನ್​ ನಯೆಫ್​​ ಪ್ರಿನ್ಸ್ ಆಗಿದ್ರು. ಇದಕ್ಕೂ ಮುನ್ನ 2012ರಲ್ಲಿ ಮೊಹ್ಮದ್ ಬಿನ್ ನಯೆಫ್ ಸೌದಿಯ ಆಂತರಿಕ ಸಚಿವರಾಗಿ ಕೆಲಸ ಮಾಡಿದ್ರು. ನಂತರ 2015ರಲ್ಲಿ ಸೌದಿಯ ಕ್ರೌನ್ ಪ್ರಿನ್ಸ್ ಆಗಿದ್ರು. ಇವರು ಅಮೆರಿಕದ ಸೆಂಟ್ರಲ್ ಇನ್ವೆಸ್ಟಿಗೇಷನ್ ಏಜೆನ್ಸಿಗೆ ಫುಲ್ ಕ್ಲೋಸ್ ಕೂಡ ಆಗಿದ್ರು. ಆದ್ರೆ ಈ ಮೊಹ್ಮದ್ ಬಿನ್ ಸಲ್ಮಾನ್​​ ಪ್ರಿನ್ಸ್ ಆದ್ಮೇಲೆ ಕಳೆದ ವರ್ಷ ಮಾರ್ಚ್​​ನಲ್ಲಿ ಮೊಹ್ಮದ್ ಬಿನ್ ನಯೇಫ್​​ರನ್ನು ವಶಕ್ಕೆ ಪಡೆಯಲಾಗಿತ್ತು. ಆದ್ರೆ ಅಲ್ಲಿಂದ ಇಲ್ಲಿಯವರೆಗೆ ನಯೇಫ್ ಪಬ್ಲಿಕ್ಕಾಗಿ ಕಾಣಿಸಿಕೊಂಡೇ ಇಲ್ಲ. ಈ ವಿಚಾರ ಈಗ ಅಮೆರಿಕದಲ್ಲಿ ದಾಖಲಾದ ಕೇಸ್​ನಲ್ಲಿ ಚರ್ಚೆಯಾಗ್ತಿದೆ. ಅಂದಹಾಗೆ ಸೌದಿ ಉದ್ಯಮಿ ನದರ್ ತುರ್ಕಿ ಅಲ್ಡೋಸ್ಸರಿ ಈ ಕೇಸ್ ದಾಖಲಿಸಿದ್ದು, ಸೈಂಟ್ ಲೂಸಿಯಾದ ಕೆರಿಬಿಯನ್ ಐಲ್ಯಾಂಡ್​​​​​​ ಸಂಬಂಧ ಆಗಿದ್ದ ಒಪ್ಪಂದವನ್ನು ಪಾಲಿಸುವಲ್ಲಿ ಸೌದಿ ರಾಜಮನೆತನ ಮತ್ತು ಪ್ರಿನ್ಸ್ ಮೊಹ್ಮದ್ ಬಿನ್ ಸಲ್ಮಾನ್ ವಿಫಲರಾಗಿದ್ದಾರೆ ಅಂತ ಆರೋಪಿಸಿದ್ರು. ಅಂದಹಾಗೆ ಈ ಉದ್ಯಮಿ ಮತ್ತು ಅವರ ಕುಟುಂಬಸ್ಥರು ಸೌದಿ ತೊರೆಯದಂತೆ ನಿರ್ಬಂಧ ವಿಧಿಸಲಾಗಿದೆ. ಹೀಗಾಗಿ ಅವರು ಅಮೆರಿಕದಲ್ಲಿ ನೆಲೆಸಿರೋ ತಮ್ಮ ಮಗ ರಕನ್ ಮೂಲಕ ಕೇಸ್ ದಾಖಲಿಸಿದ್ರು. ಈ ಕೇಸ್ ವಿಚಾರಣೆ ವೇಳೆ ಹಿಂದೆ ಪ್ರಿನ್ಸ್ ಆಗಿದ್ದ ಮೊಹ್ಮದ್ ಬಿನ್ ನಯೇಫ್​​​​​​​​​​ ವಿಚಾರ ಕೂಡ ಪ್ರಸ್ತಾಪವಾಗಿದೆ.

-masthmagaa.com

Contact Us for Advertisement

Leave a Reply