CAA ವಿಚಾರ: ಅಮೆರಿಕದ USCIRF ಆಯೋಗದಿಂದ ಅಪಸ್ವರ!

masthmagaa.com:

ಭಾರತದಲ್ಲಿ CAA ಜಾರಿ ಸಂಬಂಧ ಇತ್ತೀಚೆಗಷ್ಟೇ ಅಮೆರಿಕ ಸರ್ಕಾರದಿಂದ ಅಪಸ್ವರ ಕೇಳಿ ಬಂದಿತ್ತು. ಈಗ ಪುನಃ ಅದೇ ವಿಚಾರವಾಗಿ ಅಮೆರಿಕದ ಅಂತಾರಾಷ್ಟ್ರೀಯ ಧಾರ್ಮಿಕ ಸ್ವಾತಂತ್ರ್ಯದ ಆಯೋಗ (USCIRF) ಧ್ವನಿ ಎತ್ತಿದೆ. ಭಾರತದಲ್ಲಿ CAA ಜಾರಿ ಬಗ್ಗೆ ಕಳವಳ ವ್ಯಕ್ತಪಡಿಸಿದೆ. ʻಧರ್ಮ ಮತ್ತು ನಂಬಿಕೆಯ ಆಧಾರದ ಮೇಲೆ ಯಾರಿಗೂ ಪೌರತ್ವವನ್ನ ನಿರಾಕರಿಸಬಾರ್ದುʼ ಅಂತೇಳಿದೆ. ಅಷ್ಟೇ ಅಲ್ದೇ USCIRF ಸಂಸ್ಥೆ ತನ್ನೆಲ್ಲಾ ಸದಸ್ಯರಿಗೆ ಭಾರತದಲ್ಲಿರೋ ಧಾರ್ಮಿಕ ಸ್ವಾತಂತ್ರ್ಯ ಸಮಸ್ಯೆಗಳ ಬಗ್ಗೆ ಖಂಡಿಸಿ.. ಸಾರ್ವಜನಿಕವಾಗಿ ಧ್ವನಿ ಎತ್ತೋದನ್ನ ಮುಂದುವರೆಸಲು ಒತ್ತಾಯಿಸಿದೆ. ಹೀಗಂತ USCIRFನ ಕಮಿಷನರ್‌ ಸ್ಟೀಫನ್‌ ಹೇಳಿದ್ದಾರೆ.

-masthmagaa.com

Contact Us for Advertisement

Leave a Reply