ಇವತ್ತಿನ ಕೊರೋನಾ ಅಪ್​ಡೇಟ್​​​​.. ಎಲ್ಲೆಲ್ಲಿ ಏನೇನಾಯ್ತು ಗೊತ್ತಾ?

masthmagaa.com:

ಇನ್ನು ಜಗತ್ತಿನಲ್ಲಿ ಕೊರೋನಾಗೆ ಸಂಬಂಧಿಸಿದಂತೆ ಏನೆಲ್ಲಾ ಬೆಳವಣಿಗೆ ಆಗಿದೆ ಅಂತ ಕ್ವಿಕ್ ಆಗಿ ನೋಡ್ಕೊಂಡ್​ ಬರಣ.
– ಅಮೆರಿಕದಲ್ಲಿ ಕೊರೋನಾಗೆ ಒಂದೇ ದಿನ 1,000ಕ್ಕೂ ಹೆಚ್ಚು ಪ್ರಾಣ ಕಳೆದುಕೊಂಡಿದ್ದಾರೆ. ಅಂದ್ರೆ ಪ್ರತಿ ಒಂದು ಗಂಟೆಗೆ 42 ಜನ ಮೃತಪಟ್ಟಿದ್ದಾರೆ ಅಂತ ಅರ್ಥ. ಕಳೆದ ಕೆಲ ತಿಂಗಳಿನಿಂದ ಅಮೆರಿಕದಲ್ಲಿ ಡೆಲ್ಟಾ ರೂಪಾಂತರಿಯ ಹಾವಳಿ ಜೋರಾಗಿದೆ. ನ್ಯೂಯಾರ್ಕ್​​ ನಗರದಲ್ಲಿ ಜಿಮ್​​, ಥಿಯೇಟರ್ ಮತ್ತು ರೆಸ್ಟೋರೆಂಟ್​​ಗೆ ಬರೋರು ಪ್ರೂಫ್ ಆಫ್​ ವ್ಯಾಕ್ಸಿನೇಷನ್​ ತೋರಿಸೋ ನಿಯಮ ಜಾರಿಗೆ ಬಂದಿದೆ. ಇಂಥಾ ನಿಯಮ ಜಾರಿಗೆ ಬರ್ತಿರೋ ಅಮೆರಿಕದ ಮೊದಲ ನಗರ ಎನಿಸಿಕೊಂಡಿದೆ ನ್ಯೂಯಾರ್ಕ್​.
ನ್ಯೂಜಿಲ್ಯಾಂಡ್​​ನ ಅಕ್​ಲ್ಯಾಂಡ್​ ನಗರದಲ್ಲಿ ಒಂದು ಕೊರೋನಾ ಕೇಸ್​ ಪತ್ತೆಯಾದ ಬೆನ್ನಲ್ಲೇ, ಅದು ಹರಡದಂತೆ ತಡೆಯಲು ಇಡೀ ದೇಶದಲ್ಲಿ ಮೂರು ದಿನಗಳ ಕಾಲ ಲಾಕ್​ಡೌನ್​ ಹೇರಲಾಗಿದೆ. ಇಂದಿನಿಂದ ಲಾಕ್​ಡೌನ್​ ಆರಂಭವಾಗಿದ್ದು, ಅಕ್​ಲ್ಯಾಂಡ್​​ನಲ್ಲಿ ಒಂದು ವಾರ ಲಾಕ್​ಡೌನ್​ ಇರಲಿದೆ. ಈ ಮೂಲಕ ನ್ಯೂಜಿಲ್ಯಾಂಡ್ ಜನ ಆರು ತಿಂಗಳ ಬಳಿಕ ಮತ್ತೆ ಲಾಕ್​ಡೌನ್ ಜೀವನಕ್ಕೆ ಎಂಟ್ರಿ ಕೊಟ್ಟಂತಾಗಿದೆ. ಅಕ್​ಲ್ಯಾಂಡ್​​ನಲ್ಲಿ ದೃಢಪಟ್ಟ ಕೇಸ್​ ಡೆಲ್ಟಾ ರೂಪಾಂತರಿ ಇರಬಹುದು ಅನ್ನೋ ಭೀತಿ ಶುರುವಾಗಿದೆ. ನಿನ್ನೆ ಒಂದು ಇದ್ದ ಕೇಸ್, ಇವತ್ತು 10ಕ್ಕೆ ಏರಿಕೆಯಾಗಿದೆ.
ಆಸ್ಟ್ರೇಲಿಯಾದ ನ್ಯೂ ಸೌತ್ ವೇಲ್ಸ್​ ರಾಜ್ಯದಲ್ಲಿ ದಾಖಲೆಯ 633 ಜನರಿಗೆ ಸೋಂಕು ದೃಢಪಟ್ಟಿದೆ.
-ಅತ್ತ ಕೊರೋನಾ ಕಂಟ್ರೋಲ್​ಗೆ ಜಪಾನ್ ರಾಜಧಾನಿ ಟೋಕಿಯೋ ಮತ್ತು ಉಳಿದ ಪ್ರದೇಶಗಳಲ್ಲಿ ಹೇರಿದ್ದ ತುರ್ತುಪರಿಸ್ಥಿತಿಯನ್ನ ಸೆಪ್ಟೆಂಬರ್​ 12ವರೆಗೆ ವಿಸ್ತರಿಸಲಾಗಿದೆ. ಆಗಸ್ಟ್ 24ರಿಂದ ಸೆಪ್ಟೆಂಬರ್​ 5ವರೆಗೆ ಟೋಕಿಯೋದಲ್ಲಿ ಪ್ಯಾರಲಂಪಿಕ್ಸ್ ನಡೆಯಲಿದೆ.
– 12ರಿಂದ 17 ವರ್ಷದ ಮಕ್ಕಳಿಗೆ ಮೊಡೆರ್ನಾ ಲಸಿಕೆ ಹಾಕಲು ಯುನೈಟೆಡ್ ಕಿಂಗ್ಡಮ್ ಅನುಮೋದನೆ ಕೊಟ್ಟಿದೆ. ಇತ್ತೀಚೆಗಷ್ಟೇ ಫೈಝರ್​ ಲಸಿಕೆಗೂ ಗ್ರೀನ್ ಸಿಗ್ನಲ್ ಕೊಟ್ಟಿತ್ತು ಯುಕೆ- ಚೀನಾದಲ್ಲಿ ಕಳೆದ 24 ಗಂಟೆಗಳಲ್ಲಿ 28 ಕೊರೋನಾ ಕೇಸಸ್​ ವರದಿಯಾಗಿದೆ. ಇದರಲ್ಲಿ 22 ಕೇಸ್​ ಹೊರದೇಶದಿಂದ ಬಂದಿದ್ದಾಗಿದ್ರೆ, 6 ಸ್ಥಳೀಯ ಕೇಸ್​ ಆಗಿದೆ.

-masthmagaa.com

Contact Us for Advertisement

Leave a Reply