ಬ್ಲಿಂಕನ್ ಭಾರತ ಭೇಟಿ ಆರಂಭ – ಚೀನಾ ಬಗ್ಗೆ ಮೇನ್ ಫೋಕಸ್

masthmagaa.com:

ಅಮೆರಿಕದ ಸೆಕ್ರಟರಿ ಆಫ್ ಸ್ಟೇಟ್ ಆಂಟನಿ ಬ್ಲಿಂಕನ್ ಭಾರತ ಪ್ರವಾಸ ಇಂದಿನಿಂದ ಆರಂಭ ಆಗ್ತಿದೆ. ಇದು ಬೈಡೆನ್ ಅಧಿಕಾರಕ್ಕೆ ಬಂದ ಬಳಿಕ ಅಮೆರಿಕದ ಇಂಪಾರ್ಟೆಂಟ್ ಅಧಿಕಾರಿಯೊಬ್ಬರ ಎರಡನೇ ಭಾರತ ಭೇಟಿ. ಬೈಡೆನ್ ಸರ್ಕಾರದ ಆರಂಭದ ದಿನಗಳಲ್ಲೇ ಸೆಕ್ರಟರಿ ಆಫ್ ಡಿಫೆನ್ಸ್ ಲಾಯ್ಡ್ ಆಸ್ಟಿನ್ ಭಾರತಕ್ಕೆ ಬಂದಿದ್ರು. ಈಗ ಬೈಡೆನ್ ಸರ್ಕಾರದ ನಂಬರ್ ಥ್ರೀ ಥರ ಇರೋ ಆಂಟನಿ ಬ್ಲಿಂಕನ್. ಈ ಭೇಟಿ ವೇಳೆ ಚೀನಾ ಬಗ್ಗೆ, ಚೀನಾ ವಿರುದ್ಧ ಕ್ವಾಡ್ ಒಕ್ಕೂಟ ಬಲಪಡಿಸೋ ವಿಚಾರ, ಅಫ್ಘಾನಿಸ್ತಾನ-ಪಾಕ್ ವಿಚಾರ ಹಾಗೇ ಹವಾಮಾನ ಬದಲಾವಣೆ ಸಂಬಂಧ ಚರ್ಚೆ ನಡೆಯೋ ಸಾಧ್ಯತೆ ಇದೆ. ಜೊತೆಗೆ ಈಗ ಅಮೆರಿಕದಲ್ಲಿ ಡೆಮಾಕ್ರಾಟಿಕ್ ಪಾರ್ಟಿಯ ಬೈಡೆನ್ ಅಧಿಕಾರದಲ್ಲಿರೋದ್ರಿಂದ ಭಾರತದ ಮಾನವ ಹಕ್ಕು, ಧಾರ್ಮಿಕ ಸ್ವಾತಂತ್ರ್ಯ ವಿಚಾರವನ್ನ ಸಹ ಪ್ರಸ್ತಾಪಿಸಲಾಗುತ್ತೆ ಅಂತ ವರದಿಯಾಗಿದೆ. ಇದಕ್ಕೆ ಖಾರವಾಗೇ ಪ್ರತಿಕ್ರಿಯೆ ಕೊಟ್ಟಿರೋ ಭಾರತ ಯಾವುದೇ ವಿಚಾರ ಆದ್ರೂ ಮಾತಾಡಿ ಬನ್ನಿ. ನಾವೂ ರೆಡಿನೇ ಅಂತ ಅಧಿಕಾರಿಗಳು ಹೇಳಿದ್ದಾರೆ. ಮೂಲಗಳ ಮಾಹಿತಿ ಪ್ರಕಾರ, ‘ಭಾರತ ಸಾವಿರಾರು ವರ್ಷಗಳಿಂದಲೂ ಸರ್ವ ಜನಾಂಗಗಳ ನಾಡು. ಕೆಲವರು ಇತ್ತೀಚೆಗಷ್ಟೇ ವೈವಿದ್ಯತೆಯ ಮಹತ್ವ ಅರ್ಥ ಮಾಡಿಕೊಂಡಿದ್ದಾರೆ. ಅಂಥವರೊಂದಿಗೆ ಮಾತುಕತೆಗೆ ನಾವು ರೆಡಿ’ ಅಂತ ವಿದೇಶಾಂಗ ಇಲಾಖೆಯ ಅಧಿಕಾರಿಗಳು ಹೇಳಿದ್ದಾರೆ ಅಂತ ಗೊತ್ತಾಗಿದೆ.

-masthmagaa.com

Contact Us for Advertisement

Leave a Reply