ಕ್ಲೈಮೇಟ್ ಚೇಂಜ್ ಶೃಂಗಸಭೆಯಲ್ಲಿ ಬೈಡೆನ್ ನಿದ್ರೆ! ಟ್ರೋಲೋ ಟ್ರೋಲು

masthmagaa.com:

ಸ್ಕಾಟ್​​ಲ್ಯಾಂಡ್​​ನ ಗ್ಲಾಸ್ಗೋದಲ್ಲಿ ವಿಶ್ವಸಂಸ್ಥೆಯ 2021ನೇ ಸಾಲಿನ ಹವಾಮಾನ ಬದಲಾವಣೆ ಕುರಿತ ಸಮ್ಮೇಳನ ನಡೀತಾ ಇದೆ. ಇದೇ ಕಾರ್ಯಕ್ರಮದ ಓಪನಿಂಗ್ ಸ್ಪೀಚ್​ನಲ್ಲಿ ಅಮೆರಿಕ ಅಧ್ಯಕ್ಷ ಜೋ ಬೈಡೆನ್ ನಿದ್ರೆ ಮಾಡಿ ಸುದ್ದಿಯಾಗಿದ್ದಾರೆ. ಮೊದಲಿಂದಲೂ ಕ್ಲೈಮೇಟ್ ಚೇಂಜ್ ಕುರಿತು ಭಾರಿ ಮಾತಾಡ್ತಾ ಬಂದಿದ್ದ ಬೈಡೆನ್​, ಈ ಸಲ ಅದಕ್ಕೆ ಸಂಬಂಧಿಸಿದ ಸಭೆಯಲ್ಲೇ ನಿದ್ರೆ ಮಾಡಿರೋದು ಟ್ರೋಲ್ ಮಾಡೋರಿಗೆ ಹಬ್ಬದೂಟ ಹಾಕಿದೆ. 78 ವರ್ಷದ ಜೋ ಬೈಡೆನ್ ಕೈ ಕಟ್ಟಿಕುಳಿತಿದ್ದು, ಕಣ್ಣು ಮುಚ್ಕೊಂಡು ಕೂತಲ್ಲೇ ನಿದ್ದೆ ಮಾಡಿದ್ದಾರೆ. ಸ್ವಲ್ಪ ಹೊತ್ತಾದ ಬಳಿಕ ಅಧಿಕಾರಿಯೊಬ್ಬರು ಹೋಗಿ ಏನೋ ಮಾತಾಡಿದ್ದಾರೆ. ಮೋಸ್ಟ್ಲಿ ಎಬ್ಬಿಸಿದ್ದೂ ಆಗಿರಬಹುದು. ಆಗ ಥಟ್ ಅಂತ ಕಣ್ಣು ಬಿಡೋ ಬೈಡೆನ್​​, ಕಣ್ಣುಜ್ಜಿಕೊಂಡಿದ್ದಾರೆ. ಈ ವಿಡಿಯೋ ಸೋಷಿಯಲ್ ಮೀಡಿಯಾದಲ್ಲಿ ಫುಲ್ ವೈರಲ್ ಆಗಿದೆ. ಅಮೆರಿಕದ ಮಾಜಿ ಅಧ್ಯಕ್ಷ ಡೊನಾಲ್ಡ್​ ಟ್ರಂಪ್ ಮೊದಲಿಂದಲೂ ಜೋ ಬೈಡೆನ್​​ಗೆ ಸ್ಲೀಪಿ ಜೋ ಅಂತ ಕರ್ಕೊಂಡೇ ಬಂದಿದ್ದಾರೆ. ಈ ವಿಡಿಯೋ ನೋಡಿ ಟ್ರಂಪ್​ಗೆ ಎಷ್ಟು ಖುಷಿಯಾಗಿದ್ಯೋ ಗೊತ್ತಿಲ್ಲ.

-masthmagaa.com

Contact Us for Advertisement

Leave a Reply