ವಿರೂಪಾಕ್ಷಪ್ಪ ಲಂಚಾವತಾರ: ಸಿಎಂ ರಾಜೀನಾಮೆಗೆ ಕಾಂಗ್ರೆಸ್‌ ಒತ್ತಾಯ

masthmagaa.com:

BJP ಶಾಸಕ ಮಾಡಾಳ್‌ ವಿರೂಪಾಕ್ಷಪ್ಪ ಪುತ್ರನ ಮನೆಯಲ್ಲಿ ಕೋಟಿ ಕೋಟಿ ಹಣ ಪತ್ತೆಯಾದ ಪ್ರಕರಣಕ್ಕೆ ಸಂಬಂಧಿಸಿದಂತೆ ಸಿಎಂ ರಾಜೀನಾಮೆ ನೀಡ್ಬೇಕು ಅಂತ ಆಗ್ರಹಿಸಿ ಕಾಂಗ್ರೆಸ್‌ ನಾಯಕರು ಪ್ರತಿಭಟನೆ ಮಾಡಿದ್ದಾರೆ. ಬೆಂಗಳೂರಿನ ರೇಸ್‌ ಕೋರ್ಸ್‌ ರಸ್ತೆಯ ಕಾಂಗ್ರೆಸ್‌ ಭವನದ ಬಳಿ ಪೋಸ್ಟರ್‌, ಸೂಟ್‌ಕೇಸ್, ಹಣವಿರುವ ಬ್ಯಾಗ್‌, ನಕಲಿ ನೋಟ್‌ ಪ್ರದರ್ಶಿಸಿ ಪ್ರತಿಭಟಿಸಿದ್ದಾರೆ. ಅಲ್ದೇ ಸಿಎಂ ಮನೆಯನ್ನ ಮುತ್ತಿಗೆ ಹಾಕೋಕೆ ಮುಂದಾಗಿದ್ದು, ಈ ವೇಳೆ ಸಿದ್ದರಾಮಯ್ಯ ಸೇರಿದಂತೆ ಹಲವು ಕಾಂಗ್ರೆಸ್‌ ನಾಯಕರನ್ನ ಪೊಲೀಸರು ವಶಕ್ಕೆ ಪಡೆದಿದ್ದಾರೆ. ಇತ್ತ ವಿರೂಪಾಕ್ಷಪ್ಪ ಅವ್ರ ಕ್ಷೇತ್ರ ದಾವಣಗೆರೆ ಜಿಲ್ಲೆಯ ಚನ್ನಗಿರಿಯಲ್ಲಿ ಕಾಂಗ್ರೆಸ್​ ಕಾರ್ಯಕರ್ತರು ಪೇ ಎಂಎಲ್ ಅಭಿಯಾನ ಆರಂಭಿಸಿದ್ದಾರೆ. ಇನ್ನು ಸಿಎಂ ರಾಜೀನಾಮೆ ಕೊಡಬೇಕು ಅನ್ನೋ ಕಾಂಗ್ರೆಸ್‌ ಒತ್ತಾಯಿಸಿದ್ದಕ್ಕೆ ಬೊಮ್ಮಾಯಿ ತೀಕ್ಷ್ಣವಾಗಿ ಪ್ರತಿಕ್ರಿಯಿಸಿದ್ದಾರೆ. ಸಿದ್ದರಾಮಯ್ಯ ಅವ್ರ ಆಡಳಿತ ಕಾಲದಲ್ಲಿ ಸಚಿವರೊಬ್ಬರ ಕಚೇರಿಯಲ್ಲಿ 2 ಲಕ್ಷ ರೂ. ಸಿಕ್ಕಿತ್ತು. ಆಗ ಅವ್ರು ಸಿಎಂ ಸ್ಥಾನಕ್ಕೆ ರಾಜೀನಾಮೆ ಕೊಟ್ಟಿದ್ರಾ? ಅಂದು ಲೋಕಾಯುಕ್ತ ಇದಿದ್ರೆ ಇವರೆಲ್ಲ ಅರೆಸ್ಟ್‌ ಆಗ್ತಿದ್ರು. ಹಗರಣ ಮುಚ್ಚಿ ಹಾಕೋಕೆನೇ ಲೋಕಾಯುಕ್ತ ಸಂಸ್ಥೆ ಮುಚ್ಚಿದ್ರು ಅಂತ ತಿರುಗೇಟು ನೀಡಿದ್ದಾರೆ.

ಇನ್ನು ಈ ಕಡೆ ಲೋಕಾಯುಕ್ತಕ್ಕೆ ಸ್ಪರ್ಧೆ ಕೊಡೋ ರೀತಿಯಲ್ಲಿ ಸಿಸಿಬಿ ಕೂಡ ಕಾರ್ಯಾಚರಣೆಗೆ ಇಳಿದಿದೆ. ಹುಬ್ಬಳ್ಳಿಯ ಉದ್ಯಮಿಯೊಬ್ಬರ ಮನೆಯಲ್ಲಿ 3 ಕೋಟಿ ರೂ. ನಗದು ಸಿಕ್ಕಿದೆ. ಉದ್ಯಮಿ ರಮೇಶ್‌ ಬೊಣಗೇರಿ ಅನ್ನೊರ ಮನೆಗೆ ಸಿಸಿಬಿ ಡಿವೈಎಸ್‌ಪಿ ನಾರಾಯಣ ಬರಮನಿ ನೇತೃತ್ವದಲ್ಲಿ ದಾಳಿ ನಡೆಸಲಾಗಿತ್ತು. ಅಕ್ರಮವಾಗಿ ಸಂಗ್ರಹಿಸಿಟ್ಟಿದ್ದ ನಗದನ್ನ ವಶಪಡಿಸಿಕೊಂಡಿದ್ದು, ಹುಬ್ಬಳ್ಳಿ ಅಶೋಕ್‌ ನಗರ ಠಾಣೆಯಲ್ಲಿ ಕೇಸ್‌ ದಾಖಲಾಗಿದೆ. ಅಂದ್ಹಾಗೆ ಈ ರಮೇಶ್‌ ಬೊಣಗೇರಿ ಕೃಷಿ ಇಲಾಖೆಗೆ ರಾಸಾಯನಿಕಗಳನ್ನ ಸರಬರಾಜು ಮಾಡ್ತಿದ್ರು ಅಂತ ಹೇಳಲಾಗ್ತಿದೆ.

-masthmagaa.com

Contact Us for Advertisement

Leave a Reply