ಇರಾನ್‌ನನಲ್ಲಿ ಅಂತಾರಾಷ್ಟ್ರೀಯ ಕ್ರಿಕೆಟ್‌ ಸ್ಟೇಡಿಯಂ ಕಟ್ಟಿಸಿಕೊಡು ಭಾರತ! ಇರಾನ್‌ ಕ್ರಿಕೆಟ್‌ ಕೋಚ್‌ ಮನವಿ!

masthmagaa.com:

ಇರಾನ್‌ ಚಬಹಾರ್‌ನಲ್ಲಿ ಅಂತಾರಾಷ್ಟ್ರೀಯ ಕ್ರಿಕೆಟ್‌ ಸ್ಟೇಡಿಯಂ ನಿರ್ಮಿಸುವಂತೆ BCCIಗೆ ಇರಾನ್‌ ಕ್ರಿಕೆಟ್‌ ಕೋಚ್‌ ಮನವಿ ಮಾಡಿದ್ದಾರೆ. ಚಬಹಾರ್‌ನಲ್ಲಿ ವಿಶ್ವದರ್ಜೆಯ ಉತ್ತಮ ಸೌಲಭ್ಯವಿರೋ ಕ್ರಿಕೆಟ್‌ ಸ್ಟೇಡಿಯಂ ನಿರ್ಮಿಸಿ ಇರಾನ್‌ ಆಟಗಾರರಿಗೆ ತರಬೇತಿ ನೀಡ್ಬೇಕು. ಇದ್ರಿಂದ ಇರಾನ್‌ ಆಟಗಾರರು ಅಂತಾರಾಷ್ಟ್ರೀಯ ಮಟ್ಟದಲ್ಲಿ ಸಾಧನೆ ಮಾಡಲು ಸಹಾಯವಾಗಲಿದೆ ಅಂತ ಇರಾನ್‌ ಅಂಡರ್‌ 19 ಕೋಚ್‌ ಅಸ್ಗರ್‌ ಅಲಿ ಮನವಿ ಮಾಡಿದ್ದಾರೆ. ಇದೇ ವೇಳೆ ಇರಾನ್‌ ಆಟಗಾರರಿಗೆ IPLನಲ್ಲಿ ಆಡಲು ಅವಕಾಶದ ಕುರಿತು ಭರವಸೆ ವ್ಯಕ್ತಪಡಿಸಿದ್ದಾರೆ. ಜೊತೆಗೆ ಇರಾನ್‌ ಚಬಹಾರ್‌ ಸ್ಟೇಡಿಯಂ ಇನ್ನೂ ಅಭಿವೃದ್ಧಿಯಾಗಿಲ್ಲ ಹಾಗೂ ಸ್ಟೇಡಿಯಂನ ಇನ್‌ಫ್ರಾಸ್ಟಕ್ಚರ್‌ನ್ನ ನಿರ್ಮಿಸೋಕೆ ಇರಾನ್‌ಗೆ ಸಾಕಷ್ಟು ಫಂಡ್‌ ಸಿಗ್ತಿಲ್ಲ ಅಂತ ಅಸ್ಗರ್‌ ಬೇಸರ ವ್ಯಕ್ತಪಡಿಸಿದ್ದಾರೆ. ಇರಾನ್‌ ಆಟಗಾರರು ಸೇರಿದಂತೆ ಹಲವರಿಗೆ ವಿರಾಟ್‌ ಕೊಹ್ಲಿ ಹಾಗೂ ಮಹೇಂದ್ರ ಸಿಂಗ್‌ ಧೋನಿ ಅಂದ್ರೆ ಇಷ್ಟ ನಾವೆಲ್ಲಾ ಅವರ ಅಭಿಮಾನಿಗಳು ಅಂತ ಅಸ್ಗರ್‌ ಹೇಳಿದ್ದಾರೆ.

-masthmagaa.com

Contact Us for Advertisement

Leave a Reply