ಉತ್ತರ ಕೊರಿಯಾ ಸರ್ವಾಧಿಕಾರಿ ಕಿಮ್ ಜಾಂಗ್ ಉನ್ ತೂಕ ಇಳಿಕೆ!

masthmagaa.com:

ಉತ್ತರ ಕೊರಿಯಾ ಸವಾಧಿಕಾರಿ ಕಿಮ್ ಜಾಂಗ್ ಉನ್ ಇತ್ತೀಚೆಗೆ ಪಕ್ಷದ ಸಭೆ ನಡೆಸಿ, ಆರ್ಥಿಕತೆ ಬಗ್ಗೆ ಚರ್ಚಿಸಿದ್ರು. ತುಂಬಾ ಟೈಂ ಆದ್ಮೇಲೆ ಈ ರೀತಿ ಕಾಣಿಸಿಕೊಂಡಿದ್ರು ಕಿಮ್ ಜಾಂಗ್ ಉನ್. ಆದ್ರೀಗ ಈ ಮೀಟಿಂಗ್ ಬಳಿಕ ಹೊಸದೊಂದು ಚರ್ಚೆ ಶುರುವಾಗಿದೆ. ಅದೇನಂದ್ರೆ ಕಿಮ್ ಜಾಂಗ್ ಉನ್ ತೂಕ ಕಡಿಮೆಯಾಗಿದೆ ಅಂತ. 2020ರ ನವೆಂಬರ್​​​​​​, 2021ರ ಏಪ್ರಿಲ್ ಮತ್ತು ಜೂನ್ ತಿಂಗಳ ಅವರ ಫೋಟೋಗಳನ್ನು ನೋಡಿದರೆ ಅವರು ತೆಳ್ಳಗಾಗಿರೋದು ಕನ್ಫರ್ಮ್ ಆಗುತ್ತೆ. ಯಾಕಂದ್ರೆ ತುಂಬಾ ವೀಕ್ ಆಗಿದ್ಧಾರೆ ಕಿಮ್ ಜಾಂಗ್ ಉನ್.. ಅದೂ ಅಲ್ಲದೆ ಇವರು ಕಳೆದ ಹಲವು ತಿಂಗಳಿಂದ ಸ್ವಿಸ್​​ನ IWC Schaffhausen Portofino ವಾಚ್ ಧರಿಸುತ್ತಿದ್ದು, ಇದ್ರಲ್ಲೂ ಕೂಡ ತೆಳ್ಳಗಾಗಿರೋದು ಗೊತ್ತಾಗಿದೆ. ಅಂದ್ರೆ ವಾಚ್ ಬೆಲ್ಟ್​​​ನ ಎಷ್ಟನೇ ಹೋಲ್​​​ಗೆ ಹುಕ್ ಹಾಕಿದ್ದಾರೆ ಅನ್ನೋದ್ರ ಆಧಾರದ ಮೇಲೆ ತೆಳ್ಳಾಗಿದ್ದನ್ನು ಪತ್ತೆಹಚ್ಚಿದೆ ಸೌತ್ ಕೊರಿಯಾ ಮೂಲದ ಎನ್​ಕೆ ನ್ಯೂಸ್​. ಅದೂ ಅಲ್ಲದೆ ವಿಶ್ವದ ಹಲವು ದೇಶಗಳ ಗುಪ್ತಚರ ಇಲಾಖೆ ಅಧಿಕಾರಿಗಳು ಕೂಡ ಕಿಮ್ ಜಾಂಗ್ ಉನ್ ತೂಕದ ಮೇಲೆ, ಆರೋಗ್ಯದ ಮೇಲೆ ನಿರಂತರವಾಗಿ ಕಣ್ಣಿಟ್ಟಿದ್ದಾರೆ. ಕಳೆದ ವರ್ಷ ಏಪ್ರಿಲ್​​ನಲ್ಲಿ ಕಿಮ್ ಜಾಂಗ್ ಉನ್ 20 ದಿನ ನಾಪತ್ತೆಯಾಗಿದ್ರು. ತಮ್ಮ ಅಜ್ಜನ ಜನ್ಮದಿನಾಚರಣೆಯಲ್ಲೂ ಭಾಗಿಯಾಗಿರಲಿಲ್ಲ. ಸತ್ತೇ ಹೋಗಿದ್ದಾರೆ ಅಂತ ಕೆಲವು ಮಾಧ್ಯಮಗಳು ಸುದ್ದಿ ಮಾಡಿದ್ರೆ, ಇನ್ನು ಕೆಲವು ಮಾಧ್ಯಮಗಳು ಕೊರೋನಾ ಭಯದಲ್ಲಿ ಕದ್ದು ಕೂತಿದ್ದಾರೆ ಅಂತ ಆರೋಪಿಸಿದ್ವು. ನಂತರ ಇದ್ದಕ್ಕಿದ್ದಂತೆ ಪ್ರತ್ಯಕ್ಷವಾಗಿದ್ರು ಕಿಮ್ ಜಾಂಗ್ ಉನ್. ಇವರ ಆರೋಗ್ಯದ ಕುರಿತು ಸಾಕಷ್ಟು ಗೊಂದಲಗಳಿದ್ದು, ಹೃದಯರಕ್ತನಾಳದ ಶಸ್ತ್ರಚಿಕಿತ್ಸೆಗೆ ಒಳಗಾಗಿದ್ದಾರೆ ಅಂತಲೂ ಎನ್​ಕೆ ನ್ಯೂಸ್ ವರದಿ ಮಾಡಿತ್ತು. ಇವರ ಕುಟುಂಬದಲ್ಲಿ ಹೃದಯ ಸಂಬಂಧಿ ಕಾಯಿಲೆಗಳು ಪತ್ತೆಯಾಗೋದು ತುಂಬಾ ಜಾಸ್ತಿ.. ಅದೂ ಅಲ್ಲದೆ 37 ವರ್ಷದ ಕಿಮ್ ಜಾಂಗ್ ಉನ್, 2011ರಿಂದ ಈವರೆಗೆ 50 ಕೆಜಿ ಜಾಸ್ತಿಯಾಗಿದ್ದು, ಕಳೆದ ನವೆಂಬರ್​ನಲ್ಲಿ 140 ಕೆಜಿಯಷ್ಟು ತೂಕ ಹೊಂದಿದ್ರು ಅಂತ ಸೌತ್ ಕೊರಿಯಾದ ಗುಪ್ತಚರ ಸಂಸ್ಥೆ ಮಾಹಿತಿ ನೀಡಿತ್ತು. ಇದೀಗ ಭಾರಿ ಪ್ರಮಾಣದಲ್ಲಿ ತೂಕ ಇಳಿದಿರೋದು ಸಾಕಷ್ಟು ಅನುಮಾನಗಳಿಗೆ ಕಾರಣವಾಗಿದೆ. ಏನಾದ್ರೂ ಗಂಭೀರ ಕಾಯಿಲೆಯಿಂದ ಬಳಲುತ್ತಿರಬಹುದು ಅಂತೆಲ್ಲಾ ಚರ್ಚೆಯಾಗ್ತಿದೆ.

-masthmagaa.com

Contact Us for Advertisement

Leave a Reply