ನಾವು ಭಾರತಕ್ಕೆ ಸೇರ್ತೀವಿ:‌ ಪಾಕ್‌ಗೆ ಗಿಲ್ಗಿಟ್‌ ಜನರ ವಾರ್ನಿಂಗ್

masthmagaa.com:

ಜಾಗತಿಕ ಸಭೆಗಳಲ್ಲಿ ಮಾತೆತ್ತಿದರೆ ಕಾಶ್ಮೀರ ವಿಚಾರ ಎತ್ತೋ ಪಾಕ್‌ಗೆ ಈಗ ತನ್ನ ಹತ್ರ ಇರೋ ಒಂದೆರಡು ಕಾಶ್ಮೀರದ ತುಂಡನ್ನೂ ಸರಿಯಾಗಿ ನೋಡ್ಕೊಳೋಕೆ ಆಗ್ತಿಲ್ಲ. ಇವ್ರಂತೂ ಮುಳುಗ್ತಿದ್ದಾರೆ ಆದ್ರೆ ಜೊತೆಗೆ ನಮ್ಮನ್ನೂ ಮುಳುಗಿಸ್ತಾರೆ ಅಂತ ನಿಶ್ಚಯಿಸಿರೋ ಗಿಲ್ಗಿಟ್‌-ಬಾಲ್ಟಿಸ್ತಾನ್‌ ಜನರು ಪಾಕ್‌ ಸರ್ಕಾರದ ವಿರುದ್ಧ ತಿರುಗಿ ಬಿದ್ದಿದ್ದಾರೆ. ಗೋಧಿ ಬೆಲೆಯೇರಿಕೆ ಸೇರಿದಂತೆ ಹತ್ತು ಹಲವಾರು ವಿಚಾರ ಇಟ್ಕೊಂಡು ಗಿಲ್ಗಿಟ್‌ ಬಾಲ್ಟಿಸ್ತಾನದಲ್ಲಿ ಕಳೆದ ಒಂದು ತಿಂಗಳಿಂದ ದೊಡ್ಡ ಪ್ರತಿಭಟನೆ ನಡೆಸ್ತಿದ್ದಾರೆ. ಅಲ್ಲಿನ ಅವಾಮಿ ಆಕ್ಷನ್‌ ಸಮಿತಿ ʻಗಿಲ್ಗಿಟ್‌ ಗ್ರ್ಯಾಂಡ್‌ ಜಿಗ್ರಾʼ ಅಂತ ಇವತ್ತು ಗಿಲ್ಗಿಟ್‌ ಬಲ್ಟಿಸ್ತಾನದ 14 ಜಿಲ್ಲೆಗಳಲ್ಲಿ ಬೃಹತ್‌ ಪ್ರತಿಭಟನೆ ನಡಿಸಿದೆ. ಇದ್ರಲ್ಲಿ ಪಾಕ್‌ನ ಅಸೆಂಬ್ಲಿ ಮೆಂಬರ್‌ ನವಾಜ್‌ ಖಾನ್‌ ನಾಜಿ, ಜಮಾತ್‌ ಎ ಇಸ್ಲಾಮಿನ ಮೌಲಾನ ಅಬ್ದುಲ್‌ ಸಾಮಿ, ಗಿಲ್ಗಿಟ್‌ ಬಲ್ಟಿಸ್ತಾನದ ಹೋಟೆಲ್‌ ಯೂನಿಯನ್‌, ಡ್ರೈವರ್‌ ಯೂನಿಯನ್‌, ಮೈನಿಂಗ್‌ ಅಸೊಸಿಯೇಷನ್‌ ಸೇರಿದಂತೆ ಹಲವು ಪಕ್ಷ, ಸಂಘಟನೆಗಳ ನಾಯಕರು ಭಾಗಿಯಾಗಿದ್ದಾರೆ. ಈ ಮೊದಲು ಪಾಕ್‌ ಸರ್ಕಾರ ಅಲ್ಲಿ ಬೇಕಂತ್ಲೇ ಗೋಧಿ ಬೆಲೆ ಕಡಿಮೆ ಮಾಡಿತ್ತು. ಆಗ ಅಕ್ರಮ ಸಂಗ್ರಹಣೆ, ಕಳ್ಳಸಾಗಣಿಕೆ ಹಾಗೂ ಬ್ಲ್ಯಾಕ್‌ ಮಾರ್ಕೆಟ್‌ ಹಾವಳಿ ತಪ್ಪಿಸೋಕೆ ಬೆಲೆ ಇಳಿಸಲಾಗಿದೆ ಅಂತ ಹೇಳಿತ್ತು. ಆದ್ರೆ ಈಗ ಏಕಾಯೇಕಿ ಬೆಲೆಯೇರಿಸಿ, ಸಬ್ಸಿಡಿಯನ್ನೂ ನಿಲ್ಲಿಸೋಕೆ ಅಲ್ಲಿನ ಸ್ಥಳೀಯ ಸರ್ಕಾರ ಮುಂದಾಗಿದೆ. ಅವಾಮಿ ಆಕ್ಷನ್‌ ಕಮಿಟಿ 15 ಅಂಶಗಳ ಬೇಡಿಕೆಯ ಲಿಸ್ಟ್‌ ಒಂದನ್ನ ಇಟ್ಟಿದೆ ಅದ್ರಲ್ಲಿ ಗೋಧಿ ಬೆಲೆಯ್ನ ಪ್ರತಿ ಕೆಜಿಗೆ 22ರುಪಾಯಿಗೆ ಇಳಿಸ್ಬೇಕು. ಜೊತೆಗೆ ಪ್ರತಿಯೊಬ್ಬ ವ್ಯಕ್ತಿಗೂ 9 ಕೆ.ಜಿ ಗೋಧಿ ಸಿಗ್ಬೇಕು. ಗಿಲ್ಗಿಟ್‌ ಬಲ್ಟಿಸ್ತಾನ್‌ ಹಣಕಾಸು ಕಾಯ್ದೆಯನ್ನ ಕಿತ್ತಾಕಬೇಕು. ವಿದ್ಯುತ್‌ನಲ್ಲಿ ಎಲ್ಲಾ ರೀತಿಯ ಟ್ಯಾಕ್ಸ್‌ನ ತೆಗೆದು ಹಾಕ್ಬೇಕು ಅಂತ ಡಿಮ್ಯಾಂಡ್‌ ಮಾಡಿದ್ದಾರೆ. ಅಲ್ಲದೇ ತಮ್ಮ ಸಂಘಟನೆ ಜೊತೆಗೆ ಸರ್ಕಾರ ಒಪ್ಪಂದ ಮಾಡ್ಕೋಬೇಕು. ಎಲ್ಲಾ ಖಾಲಿ ಜಾಗಗಳನ್ನ ಪಬ್ಲಿಕ್‌ ಪ್ರಾಪರ್ಟಿ ಅಂತ ಗುರುತಿಸ್ಬೇಕು. ಗಿಲ್ಗಿಟ್‌-ಬಲ್ಟಿಸ್ತಾನ್‌ ಅಸೆಂಬ್ಲಿಯನ್ನ ಸ್ಥಾಪಿಸ್ಬೇಕು. ದಿಯಾಮರ್‌ ಭಾಷಾ ಡ್ಯಾಂನಲ್ಲಿ 80% ರಾಯಲ್ಟಿ ಕೊಡ್ಬೇಕು, ಸ್ಥಳೀಯರಲ್ಲದವರಿಗೆ ನೀಡಿದ ಮೈನಿಂಗ್‌ ಲೈಸೆನ್ಸ್‌ನ ರದ್ದು ಮಾಡ್ಬೇಕು. ಮೆಡಿಕಲ್‌, ಇಂಜಿನಿಯರಿಂಗ್‌ ಕಾಲೇಜು ಸ್ಥಾಪಿಸ್ಬೇಕು ಅಂತ ದೊಡ್ಡ ಲಿಸ್ಟ್‌ ಇಟ್ಟಿದ್ದಾರೆ. ಜೊತೆಗೆ ಗಿಲ್ಗಿಟ್‌ ಬಲ್ಟಿಸ್ತಾನ್‌ ಅಸೆಂಬ್ಲಿ ಸ್ಥಾಪನೆಯಾಗೋವರೆಗು ಗೋಧಿ, ಸೀಮೆ ಎಣ್ಣೆ, ಅಡುಗೆ ಎಣ್ಣೆ, ಏರ್‌ ಟ್ರಾವೆಲ್‌ ಮುಂತಾದ್ರಲ್ಲಿ ಸಬ್ಸೀಡಿ ಕೊಡ್ಬೇಕು ಅಂತ ಆಗ್ರಹಿಸಿದ್ದಾರೆ. ತಮ್ಮ ಈ ಬೇಡಿಕೆಗಳು ಈಡೇರೋವರೆಗು ಪ್ರತಿ ದಿನ ಸಂಜೆ 2ರಿಂದ 4 ಗಂಟೆವರೆಗೆ ಧರಣಿ ನಡೆಸೋದಾಗಿ ಹೇಳಿದ್ದಾರೆ.

ಆದ್ರೆ ಪಾಕ್‌ ಮಾತ್ರ ಗೋಧಿ ಬೆಲೆ ಏರಿಸೋದಕ್ಕೂ ಮುನ್ನ ಎಲ್ಲಾ ವ್ಯಾಪಾರ ಪಾಲುದಾರರನ್ನ ಕನ್ಸಲ್ಟ್‌ ಮಾಡಲಾಗಿದೆ ಅಂತ ಸಮಜಾಯಿಷಿ ಕೊಟ್ಟಿದೆ. ಆದ್ರೆ ಅಲ್ಲಿನ ಜನ, ಅಧಿಕಾರಿಗಳು ಯಾರನ್ನೂ ಕನ್ಸಲ್ಟ್‌ ಮಾಡಿಲ್ಲ. ಆರು ಜಿಲ್ಲೆಗಳಲ್ಲೂ ಹಲವು ಪ್ರತಿಭಟನೆಗಳು, ಬಂಧ್‌ಗಳು ಆಗಿದ್ರೂ ಸರ್ಕಾರ ಕ್ಯಾರೆ ಅಂದಿಲ್ಲ. ಅಲ್ಲದೆ ಈ ಭಾಗದಲ್ಲಿ ಸರಿಯಾದ ವಿದ್ಯುತ್‌, ಇಂಟರ್‌ನೆಟ್‌ ವ್ಯವಸ್ಥೆ ಇಲ್ಲ. ಲೋಡ್‌ ಶೆಡ್ಡಿಂಗ್‌ ನೋಡಿ ನೋಡಿ ಸಾಕಾಗಿದೆ. ಸಾಲದಕ್ಕೆ ನಮ್ಮ ಮೇಲೆ ಹಣದುಬ್ಬರದ ಬಾಂಬ್‌ ಹಾಕಿದ್ದಾರೆ ಅಂತ ಅಳಲು ತೋಡಿಕೊಂಡಿದ್ದಾರೆ. ಸಾಲದ್ದಕ್ಕೆ ಅಕ್ರಮ ಭೂಮಿ ಕಬಳಿಗೆ ಹಾಗೂ ಸಂಪನ್ಮೂಲಗಳ ದುರ್ಬಳಕೆ ಕೂಡ ವಿಪರೀತ ಆಗ್ತ ಇದೆ. ಅಂತ ತಮ್ಮ ಆಕ್ರೋಶ ಹೊರ ಹಾಕಿದ್ದಾರೆ.

ಅಂದ್ಹಾಗೆ ಗಿಲ್ಗಿಟ್‌-ಬಲ್ಟಿಸ್ತಾನದಲ್ಲಿ ಇತ್ತೀಚೆಗೆ ಈ ರೀತಿ ಪಾಕ್‌ ವಿರುದ್ಧ ಪ್ರತಿಭಟನೆಗಳು ಹೆಚ್ಚಾಗ್ತಿವೆ. ಈ ಹಿಂದೆ ಅಗಸ್ಟ್‌ನಲ್ಲಿ ಕೂಡ ಈ ಭಾಗದಲ್ಲಿ ʻನಾವು ಭಾರಕ್ಕೆ ಸೇರ್ತೀವಿʼ ಅಂತ ಕೂಗ್ತ ಜನ್ರು ಪಾಕ್‌ ರಸ್ತೆಗಳಲ್ಲಿ ಕಿಕ್ಕಿರಿದು ರ್ಯಾಲಿ ನಡೆಸಿದ್ರು. ʻಚಲೋ, ಚಲೋ ಕಾರ್ಗಿಲ್‌ ಚಲೋʼ ಅಂತೇಳ್ತ ಪಾಕ್‌ ಸರ್ಕಾರದ ದೂಷಣೆಗಳು ಹಾಗೂ ಆಡಳಿತದ ಕ್ರಮದ ವಿರುದ್ಧ ರೊಚ್ಚಿಗೆದ್ದು ಬೀದಿಗಿಳಿದಿದ್ರು. ಪಾಕ್‌ ಅಧಿಕಾರಿಗಳು ಗಿಲ್ಗಿಟ್‌ನಲ್ಲಿ ಶಿಯಾ ಧರ್ಮಗುರು ಅಘಾ ಭಕಿರ್‌ ಅಲ್‌-ಹುಸೇನಿಯನ್ನ ಅರೆಸ್ಟ್‌ ಮಾಡಿದಾಗ, ಅವ್ರನ್ನ ರಿಲೀಸ್‌ ಮಾಡದಿದ್ರೆ, ನಾಗರಿಕ ಯುದ್ಧ ನಡೆಯುತ್ತೆ ಅಂತ ಸರ್ಕಾರಕ್ಕೆ ಎಚ್ಚರಿಕೆ ನೀಡಿದ್ರು. ಇದೀಗ ಮತ್ತೊಮ್ಮೆ ಗೋಧಿ ಬೆಲೆಯೇರಿಕೆ ವಿರೋಧಿಸಿ ಅಲ್ಲಿನ ತೆಹ್ರೀಕ್‌ ಇ ಇಸ್ಲಾಮಿ ಹಾಗೂ ಅವಾಮಿ ಆಕ್ಷನ್‌ ಕಮಿಟಿ ಸಂಘಟನೆಗಳು ಬೃಹತ್‌ ರ್ಯಾಲಿ ನಡೆಸಿದೆ.

-masthmagaa.com

Contact Us for Advertisement

Leave a Reply