“ವ್ಹೀಲ್ ಚೇರ್ ರೋಮಿಯೋ” ಟ್ರೈಲರ್ ಬಿಡುಗಡೆ!!

masthmagaa.com:

ಹೊಸ ಪ್ರತಿಭೆ ರಾಮ್ ಚೇತನ್ ಮತ್ತು ಮಯೂರಿ ಮುಖ್ಯ ಭೂಮಿಕೆಯಲ್ಲಿರುವ “ವ್ಹೀಲ್ ಚೇರ್ ರೋಮಿಯೋ” ಚಿತ್ರದ ಟ್ರೈಲರ್ ಇಂದು ಬಿಡುಗಡೆಯಾಗಿದೆ.
ಚಿತ್ರದ ನಾಯಕ ಕಾಲಿಲ್ಲದ ಕುಂಟನಾಗಿದ್ದು, ಇಡೀ ಸಿನಿಮಾ ವ್ಹೀಲ್ ಚೇರ್ ಮೇಲೆ ಕಾಣಿಸಿಕೊಳ್ಳುತ್ತಾರೆ. ಚಿತ್ರದ ನಾಯಕಿ ವೇಶ್ಯೆ ಮತ್ತು ಹುಟ್ಟು ಕುರುಡಿ. ಇವರಿಬ್ಬರ ನಡುವೆ ನಡೆಯುವ ಪ್ರೇಮ ಕಥೆಯೇ ಚಿತ್ರದ ಜೀವಾಳ.
ಚಿತ್ರಕ್ಕೆ ಬಿಜೆ ಭರತ್ ಸಂಗೀತ ಇದೆ. ಅಗಸ್ತ್ಯ ಕ್ರಿಯೇಷನ್ಸ್ ಮೂಲಕ ಟಿ. ವೆಂಕಟಾಚಲಯ್ಶ ಮತ್ತು ಭಾರತಿ ವೆಂಕಟೇಶ್ ಅವರು ಚಿತ್ರಕ್ಕೆ ಹಣ ಹೂಡಿದ್ದಾರೆ.
ಕಥೆ, ಚಿತ್ರಕಥೆ, ನಿರ್ದೇಶನದ ಹೊಣೆಯನ್ನ ಜಿ. ನಟರಾಜ್ ಅವರು ಹೊತ್ತುಕೊಂಡಿದ್ದಾರೆ. ಚಿತ್ರದ ತಾರಾಗಣದಲ್ಲಿ
ಸುಚೇಂದ್ರ ಪ್ರಸಾದ್, ಗಿರೀಶ್ ಶಿವಣ್ಣ, ರಂಗಾಯಣ ರಘು ಮುಂತಾದವರು ನಟಿಸಿದ್ದಾರೆ.
-masthmagaa.com
Contact Us for Advertisement

Leave a Reply